ಕಾಲೇಜುಗಳಿಗೆ ಯಾರೂ ಹಿಜಬ್, ಕೇಸರಿ ಶಾಲು ಧರಿಸಿ ಬರುವಂತಿಲ್ಲ ಅಂತ ಗೃಹ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಬಗ್ಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, ಈಗಾಗಲೇ ಸಮವಸ್ತ್ರಗಳನ್ನು ಹೊರತುಪಡಿಸಿ ಬೇರೆಯದನ್ನು ಧರಿಸುವಂತಿಲ್ಲ ಅಂತ ಈಗಾಗಲೇ ಸಂಬಂಧಪಟ್ಟ ಸಚಿವರು ತಿಳಿಸಿದ್ದಾರೆ.
ಶಾಲೆಯಲ್ಲಿ ಎಲ್ಲ ಧರ್ಮದ ಮಕ್ಕಳು ಇದ್ದು, ಈ ನಿಟ್ಟಿನಲ್ಲಿ ಎಲ್ಲರು ಒಂದು ಒಂದೇ ಎನ್ನುವ ಭಾವನೆ ಬರಬೇಕು. ಶಾಲಾ – ಕಾಲೇಜುಗಳಲ್ಲಿ ಎಲ್ಲರೂ ಭಾರತ ಮಕ್ಕಳು ಎಂದು ಓದುವುದರ ಜೊತೆಗೆ ಶೈಕ್ಷಣಿಕ ವಾತಾವರಣದಲ್ಲಿ ದೇಶದ ಐಕ್ಯತೆ, ಸಮಾನತೆಯನ್ನು ಕಲಿಯಬೇಕು ಅಂತ ಹೇಳಿದರು.
ಈ ಬಗ್ಗೆ ಯಾವ ಮತೀಯ ಸಂಘಟನೆ ಇದೇ ಎನ್ನುವುದನ್ನು ಕಂಡು ಹಿಡಿಯಲು ಪೋಲಿಸರಿಗೆ ಸೂಚನೆ ನೀಡಲಾಗಿದೆ. ಶಾಲಾ ಕಾಲೇಜಿನ ಕಾಂಪೌಂಡ್‌ನೊಳಗೆ ಯಾರೂ ಹಿಜಬ್, ಕೇಸರಿ ಶಾಲು ಧರಿಸಿ ಬರುವಂತಿಲ್ಲ ಅಂತ ಹೇಳಿದರು. ರಾಷ್ಟ್ರ ಒಗ್ಗಟ್ಟಾಗಬೇಕು ಎಂಬುದಕ್ಕೆ ಅಡ್ಡಗಾಲಾಗುವವರನ್ನು ಸರಿ ಮಾಡುವ ಕೆಲಸ ನಾವು ಮಾಡಬೇಕಾಗುತ್ತದೆ ಅಂತ ಹೇಳಿದರು.
ಇನ್ನೂ ಉಡುಪಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬರುವುದರ ವಿರುದ್ದ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲನ್ನು ಧರಿಸಿ ಬರುತ್ತಿರುವುದು ಈಗ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಾಮಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ