ಮಧುಗಿರಿ:
ಇತ್ತ ತಿರುಗಿಯೂ ನೋಡದ ಅಧಿಕಾರಿ ವರ್ಗ
ಕೆಲ ದಿನಗಳಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಶಾಲಾ ಕೊಠಡಿಗಳಲ್ಲಿ ನೀರು ಸೋರುತ್ತಿದ್ದು, ಮೇಲ್ಛಾವಣಿ ಬೀಳುವ ಹಂತ ತಲುಪಿರುವ ದುಸ್ಥಿತಿ ಪಟ್ಟಣದ ಡಿಡಿಪಿಐ ಕಚೇರಿ ಸಮೀಪವಿರುವ ಸರ್ಕಾರಿ ಮಾದರಿ ಹಿರಿಯ ಬಾಲಕಿಯರ ಪಾಠಶಾಲೆಗೆ ಎದುರಾಗಿದೆ.
ಶಾಲೆಯ ಎರಡು ಕೊಠಡಿಗಳಲ್ಲಿ ಮಳೆಯ ನೀರು ನಿಂತು ಸೋರುತ್ತಿರುವುದರ ಜತೆಗೆ, ನೆಲವು ಸಹ ನೀರಿನಲ್ಲಿ ಮುಳುಗಿದ್ದು ಮೇಲ್ಛಾವಣಿ ಕುಸಿದು ಯಾವುದೇ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ಬೀಳುವ ಸಂಭವವಿದೆ. ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ರಕ್ಷಣೆಗಾಗಿ ತಮ್ಮ ಶಾಲಾ ಮುಖ್ಯ ಶಿಕ್ಷಕರ ಕೊಠಡಿ ಮತ್ತು ಇತರೆ ಕೊಠಡಿಯಲ್ಲಿನ ಎಲ್ಲವನ್ನೂ ತೆರವು ಮಾಡಿಕೊಂಡು ಸುಸ್ಥಿತಿಯಲ್ಲಿರುವ 2 ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳನ್ನು ಹಾಗೂ ಕಾರಿಡಾರ್‍ಗಳಲ್ಲಿಯೇ ಪಾಠ ಮಾಡುವ ಮೂಲಕ ದಿನ ಕಳೆದಿದ್ದಾರೆ.
ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಬಿಸಿಯೂಟ ಸಹ ನೀಡ ಬೇಕಾಗಿರುವ ಕೋಣೆಯು ಸಹ ಸೋರುತ್ತಿರುವುದರಿಂದ ವಿದ್ಯಾರ್ಥಿಗಳನ್ನು ಅತಿ ಜಾಗರೂಕತೆಯಿಂದ ನೋಡಿಕೊಳ್ಳ ಬೇಕಾದ ಪರಿಸ್ಥಿತಿ ಶಿಕ್ಷಕರಿಗೆ ಎದುರಾಗಿದೆ. ಪಟ್ಟಣದಲ್ಲಿರುವ ಶಾಲೆಯ ಸ್ಥಿತಿಯೆ ಹೀಗಾದರೆ ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಯಾವ ಹಂತ ತಲುಪಿದೆ ಎಂದು ಊಹಿಸಲು ಕಷ್ಟವಾಗುತ್ತಿದೆ. ಸ್ಥಳೀಯ ಶಾಸಕರ ಗಮನಕ್ಕೆ ತರೋಣ ಎಂದರೆ ಅವರು ಕೈಗೆ ಸಿಗುವುದಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿಯವರು ಹೇಳುತ್ತಿದ್ದಾರೆ.
ಸಮೀಪದಲ್ಲಿಯೇ ಡಿಡಿಪಿಐ ಕಚೇರಿ ಮತ್ತು ಬಿಇಓ ಕಚೇರಿ ಇದ್ದರೂ ಕೂಡ ಇಂತಹ ದುಸ್ಥಿತಿಯಲ್ಲಿರುವ ಕೊಠಡಿಗಳನ್ನು ನೋಡಲು ಸಹ ಬಾರದೇ ಇರುವ ಅಧಿಕಾರಿಗಳ ವಿರುದ್ಧ ಪೆÇೀಷಕರು ಕಿಡಿ ಕಾರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
