ಸ್ಕೂಲ್‌ ಅಪ್‌ ಡೇಟ್‌ : ಜ್ಞಾನದೇಗುಲ ಈಗ ಜ್ಞಾನಾರ್ಜನೆಗಲ್ಲ ಎನ್ನುವಂತಾಗಿದೆ : ಯಾಕೆ ಗೊತ್ತಾ…?

ನೋಯ್ಡಾ:

     ಮಕ್ಕಳು ಚೆನ್ನಾಗಿ ಓದ್ಬೇಕು, ಮುಂದೇನಾದ್ರೂ ಸಾಧನೆ ಮಾಡ್ಬೇಕು ಎಂಬ ಕನಸಿಟ್ಟುಕೊಟ್ಟು ತಂದೆ-ತಾಯಿಗಳು ಈ ವಿಡಿಯೋ ನೋಡಿದ್ರೆ ಶಾಕ್‌ ಆಗೋದು ಗ್ಯಾರಂಟಿ. ಕಷ್ಟಪಟ್ಟು ಪೋಷಕರು ಶಾಲೆಗೆ ಕಳುಹಿಸಿದರೆ ಮಕ್ಕಳು ಶಾಲೆಯಲ್ಲಿ ಕುಳಿತು ಅವರು ತಲೆ ತಗ್ಗಿಸುವಂತಹ ಕೆಲಸ ಮಾಡುತ್ತಿರುವ ಘಟನೆಗಗಳು ಆಗಾಗ ಬೆಳಕಿಗೆ ಬರುತ್ತಿರುತ್ತದೆ.

    ಇದೀಗ ಅಂತಹದ್ದೇ ಒಂದು ಶಾಕಿಂಗ್‌ ಘಟನೆ ನೋಯ್ಡಾ ದಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌  ಆಗುತ್ತಿದೆ.

    ಇಲ್ಲಿನ ಖಾಸಗಿ ಶಾಲೆಯೊಂದರ ತರಗತಿಯೊಂದರಲ್ಲಿ ವಿದ್ಯಾರ್ಥಿಗಳು ಪರಸ್ಪರ ಕಿಸ್ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಕ್ಕಳ ಈ ದಾರಿ ತಪ್ಪಿದ ವರ್ತನೆಗೆ ತೀವ್ರ ಆಕ್ರೋಶ ಕೇಳಿ ಬಂದಿದೆ. ಟ್ವಿಟ್ಟರ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಶಾಲೆಯ ಸಮವಸ್ತ್ರ ಧರಿಸಿದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ತರತಿಯ ಕೊನೆಬೆಂಚ್‌ನಲ್ಲಿ ಕುಳಿತು ಪರಸ್ಪರ ಕಿಸ್ ಮಾಡುತ್ತಿದ್ದರೆ, ಅವರ ಪಕ್ಕದಲ್ಲೇ ಇತರ ಮಕ್ಕಳು ಇದ್ದರೂ ಕೂಡ ಕ್ಯಾರೇ ಎನ್ನದೇ ಈ ವಿದ್ಯಾರ್ಥಿಗಳು ಕಿಸ್ಸಿಂಗ್‌ನಲ್ಲಿ ತೊಡಗಿದ್ದಾರೆ. ಇನ್ನು ಹುಡುಗ ಬೇಡವೆಂದು ಗಲ್ಲ ಒರೆಸಿಕೊಳ್ಳುತ್ತಿದ್ದರೂ ಬಿಡದೆ ವಿದ್ಯಾರ್ಥಿನಿ ಚುಂಬಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಅನೇಕರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹೇಳುವ ಪ್ರಕಾರ ಇದು ಹಳೆ ವೀಡಿಯೋ ಹಲವು ವರ್ಷಗಳ ಹಳೇ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣವನ್ನು ಪರಿಶೀಲಿಸಿ ನಂಬಬೇಕು ಎಂದು ಒಬ್ಬರು ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ.

    ಆನೇಕಲ್‌ ಪಟ್ಟಣದ ಖಾಸಗಿ ಕಾಲೇಜಿನಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಕ್ಲಾಸ್‌ ರೂಮ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರಣಯದ ವಿಡಿಯೊ ಈಗ ವೈರಲ್‌ ಆಗಿತ್ತು. ವಿದ್ಯಾರ್ಥಿಗಳಿಬ್ಬರು ಕ್ಲಾಸ್‌ನಲ್ಲಿ ಪಾಠ ಕೇಳುವುದು ಬಿಟ್ಟು, ಕೈ ಕೈ ಹಿಡಿದುಕೊಂಡು ತುಟಿಗೆ ಮುತ್ತಿಟ್ಟು ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಇನ್ನೊಂದು ದೃಶ್ಯದಲ್ಲಿ ವಿದ್ಯಾರ್ಥಿನಿಗೆ ತರಗತಿಯಲ್ಲೇ ವಿದ್ಯಾರ್ಥಿ ಉಂಗುರ ತೊಡಿಸುವ ಸನ್ನಿವೇಶವಿದೆ. ಈ ವಿಷಯ ತಿಳಿಯುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ಮೇಲೆ ಶಿಸ್ತು ಕ್ರಮ ಕೈಗೊಂಡಿದೆ. ಆ ಇಬ್ಬರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿತ್ತು.