ಬೆಂಗಳೂರು :
ಇಂದು ಸಂಜೆಯೇ ಸ್ಕೂಲ್-ಕಾಲೇಜು ರಜೆ ಭವಿಷ್ಯ ನಿರ್ಧಾರವಾಗಲಿದ್ದು ,ಇಂದು ಸಂಜೆ ಶಿಕ್ಷಣ ಸಚಿವರ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿವಿಧ ಇಲಾಖೆಗಳ ಜತೆ ಸಭೆ ನಡೆಸಲಿದ್ದಾರೆ. ಸಭೆ ನಡೆಸಿ ನಾಳೆಯಿಂದ ಏನ್ ಮಾಡಬೇಕು ಅನ್ನುವ ನಿರ್ಧಾರಮಾಡಲಾಗುತ್ತದೆ.
ಶಿಕ್ಷಣ ಇಲಾಖೆಯು ಈಗಾಗಲೇ 3 ದಿನಗಳ ಕಾಲ ರಜೆ ನೀಡಿದ್ದು , ಬೆಂಗಳೂರು ಶಾಲೆಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಿದ್ದು , ರಜೆ ಮುಂದುವರೆಸಬೇಕಾ.. ಅಗತ್ಯ ಭದ್ರತೆ ನೀಡಿ ಕ್ಲಾಸ್ ನಡೆಸಬೇಕಾ..? ಹಾಗೂ ಪ್ರತಿಭಟನೆ, ಹೋರಾಟಗಳನ್ನು ನಿಯಂತ್ರಣ ಮಾಡುವುದು ಹೇಗೆ ಈ ಎಲ್ಲಾ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಿದ್ದಾರೆಂದು ಹೇಳಿದ್ದಾರೆ.
ಕೋರ್ಟ್ ತೀರ್ಪು ಬರುವವವರೆಗೆ ಹಿಜಬ್ ಬದಿಗುಟ್ಟು ಕಾಲೇಜಿಗೆ ಬನ್ನಿ, ಕಿಡಿಗೇಡಿಗಳ ಕೃತ್ಯದಿಂದ ಕಾಲೇಜು ಬಂದ್ ಮಾಡೋ ಸ್ಥಿತಿ ಬಂದಿದೆ. ಶಿಕ್ಷಣ ಸಂಸ್ಥೆಗಳು ಧಾರ್ಮಿಕ ಆಚರಣೆಗಳ ಕೇಂದ್ರಗಳಲ್ಲ, ಮಕ್ಕಳ ಮನಸ್ಸು ಕೆಡಬಾರದು, ಮಕ್ಕಳ ನಡುವೆ ವೈಮನಸ್ಸು ಆಗಬಾರದು ಎಂದು ವಿದ್ಯಾರ್ಥಿ ಸಮುದಾಯಕ್ಕೆ ಬಿ.ಸಿ.ನಾಗೇಶ್ ಮನವಿ ಮಾಡಿದ್ದಾರೆ.
ಇನ್ನೂ ಇದೇ ವೇಳೆ ಮಕ್ಕಳ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಲೋಚನೆ ಮಾಡಲಿ ಎಂದು ಹೇಳಿದ್ದಾರೆ. ಹಾಗೂ ಮಂಡ್ಯದಲ್ಲಿ ವಿದ್ಯಾರ್ಥಿನಿ ಮುಸ್ಕಾನ್ಗೆ ಬಹುಮಾನ ಘೋಷಣೆ ವಿಚಾರದ ಬಗ್ಗೆ ಇವರ ಹಿಂದೆ ಒಂದು ತಂಡ ಕೆಲಸ ಮಾಡಿದೆ ಎಂಬುವುದು ಸ್ಪಷ್ಟವಾಗಿದ್ದು , ಇವೆಲ್ಲವನ್ನೂ ಕೂಡ ತನಿಖೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
