ಬರಗೂರು
ನಮ್ಮ ಸಂಸ್ಕøತಿಯಲ್ಲಿ ದೇಗುಲಗಳಿಗೆ ಎಷ್ಟು ಮಾನತ್ಯೆ ಇದೆಯೊ ಅಷ್ಟೆ ಪ್ರಾಮುಖ್ಯವು ಗುಣಮಟ್ಟದ ಶಿಕ್ಷಣ ನೀಡುವಂತಹ ಸರ್ಕಾರಿ ಶಾಲೆಗಳು ಪಡೆದು ಕೊಳ್ಳುತ್ತವೆ. ಮಕ್ಕಳು ಕೂಡ ದೈವಸ್ವರೂಪಿಗಳು. ಅಂತಹ ಮಕ್ಕಳಿಗೆ ಶಾಲೆಯಲ್ಲಿ ಕಲಿಸುವ ಪಾಠ ಮತ್ತು ಸಂಸ್ಕಾರ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಬಿ.ಸತ್ಯನಾರಾಯಣ ಹೇಳಿದರು.
ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿ ಕಾರೇಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಸರ್ಕಾರಿ ಪ್ರಾಥಮಿಕ ಶಾಲಾ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶದ ಬಡ ಮಕ್ಕಳು ಕಲಿಯುವಂತಹ ಶಾಲಾ ಕೊಠಡಿಗಳು ಸುಸ್ಥಿರವಾಗಿರ ಬೇಕೆಂಬ ಉದ್ದೇಶದಿಂದ ಈಗಾಗಲೇ 1 ಕೋಟಿ ರೂಪಾಯಿ ಅನುದಾನವನ್ನು ಕೊಠಡಿಗಳ ನಿರ್ಮಾಣಕ್ಕೆ ನೀಡಿದೆ. ಹಂತ ಹಂತವಾಗಿ ಇತರೆ ಶಾಲೆಗಳಿಗೂ ಅನುದಾನ ನೀಡಲಾಗುವುದು
ನಾನು ಶಾಸಕನಾಗಿ ಅಧಿಕಾರ ಪಡೆದು 18 ತಿಂಗಳಾಗಿದ್ದು, ಕೋಟ್ಯಂತರ ರೂಪಾಯಿ ಅನುದಾನ ತಂದು 150 ಕಿಮೀ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ನೀಡಿದ್ದೇನೆ. ಶಿಕ್ಷಣ ಮತ್ತು ಜನರ ಮೂಲಭೂತ ಸೌಲಭ್ಯಗಳಿಗೆ ಹೆಚ್ಚು ಆದ್ಯತೆ ನೀಡಿದ್ದು, ಶಿರಾ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಕ್ರಮ ಕೈಗೊಂಡಿದ್ದೇನೆ.
ಒಂದು ಅಡಿ ಜಾಗಕ್ಕೆ ಕಿತ್ತಾಡುವ ಪ್ರಸಕ್ತ ಸನ್ನಿವೇಶದಲ್ಲಿ ಸರ್ಕಾರಿ ಶಾಲೆಗೆ ಭೂಮಿ ದಾನ ಮಾಡಿದ ವೈ.ಎಸ್.ಸೌಭಾಗ್ಯರವರಿಗೆ ಆಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಶಾಸಕರು, ಶಿಕ್ಷಕರು ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಬೋಧನೆ ಮಾಡುವ ಮೂಲಕ ಮಕ್ಕಳಲ್ಲಿ ಸರ್ಕಾರಿ ಶಾಲೆ ಬಗ್ಗೆ ಹೆಚ್ಚು ಒಲವು ಮೂಡುವಂತೆ ಮಾಡ ಬೇಕೆಂದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಚಂದ್ರಯ್ಯ ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿರುವ ಕಾರಣ ಇಂತಹ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್‍ನಂತಹ ಉನ್ನತ ಹುದ್ದೆ ಪಡೆದು ಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ. ಸಾಧಿಸುವ ಛಲ, ಆಸಕ್ತಿ ಮಕ್ಕಳಲ್ಲಿ ಇದ್ದರೆ ಸರ್ಕಾರಿ ಶಾಲೆಗಳು ಉತ್ತಮ ವೇದಿಕೆ ಕಲ್ಪಿಸಲಿವೆ ಎಂದರು.
ಜಿ.ಪಂ ಸದಸ್ಯ ಎಸ್.ರಾಮಕೃಷ್ಣ, ಎಪಿಎಂಸಿ ಅಧ್ಯಕ್ಷ ನರಸಿಂಹೇಗೌಡ, ತಾಪಂ ಉಪಾಧ್ಯಕ್ಷ ರಂಗನಾಥಗೌಡ, ದ್ವಾರನಕುಂಟೆ ಗ್ರಾಪಂ ಅಧ್ಯಕ್ಷ ನರಸಿಂಹಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಪಿ.ನಟರಾಜು, ಬಿಆರ್‍ಪಿ ಕುಮಾರ್, ಅಕ್ಷರದಾಸೋಹ ಗಂಗಾಧರ್, ತಾಲ್ಲೂಕು ಜೆಡಿಎಸ್ ಉಪಾಧ್ಯಕ್ಷ ಲಕ್ಕನಹಳ್ಳಿ ಮಂಜುನಾಥ್, ಮಾಜಿ ಗ್ರಾಪಂ ಉಪಾಧ್ಯಕ್ಷ ಕೆ.ಎನ್.ನರಸಿಹಪ್ಪ, ಪುಟ್ಟೇಗೌಡ, ಜಗದೀಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಂಗಸ್ವಾಮಿ, ಶಿಕ್ಷಕ ಓದೋಮಾರಪ್ಪ, ನವೀನ್‍ಕುಮಾರ್, ಅನಸೂಯಮ್ಮ, ರಮೇಶ್‍ಗೌಡ, ರತ್ನಮ್ಮ, ಶ್ರೀಧರ್, ಪ್ರದೀಪ್, ಗಿರೀಶ್, ರಾಕೇಶ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.