ಗುಬ್ಬಿ
ರಾಜೇಶ್ ಗುಬ್ಬಿ
ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ಘೋಷಣೆಯಾಗುವ ಮುನ್ನವೆ ರಾಜಕೀಯ ಮುಖಂಡರು ಆರೋಪ-ಪ್ರತ್ಯಾರೋಪಗಳಲ್ಲಿ ಮುಳುಗಿ ಹೋಗಿದ್ದಾರೆ.
ರಾಜ್ಯದ ರಾಜಕಾರಣದಲ್ಲೇ ಚಲನ ಮೂಡಿಸಿರುವ ಗುಬ್ಬಿ ಕ್ಷೇತ್ರ ಹಾಲಿ ಶಾಸಕ ಎಸ್. ಆರ್. ಶ್ರೀನಿವಾಸ್ ಹಾಗೂ ದಳಪತಿಗಳ ನಡುವಿನ ಸಂಘರ್ಷವಾಗಿ ಮಾರ್ಪಡುವ ಲಕ್ಷಣಗಳು ಕಂಡುಬರುತ್ತಿವೆ. ಶಾಸಕ ಎಸ್. ಆರ್. ಶ್ರೀನಿವಾಸ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಸ್ಥಳೀಯ ಕಾಂಗೈ ನಾಯಕರನ್ನು ಮನವೊಲಿಸಿಕೊಳ್ಳುವುದಷ್ಟೇ ಬಾಕಿ ಇದೆ.
ಕ್ಷೇತ್ರದಲ್ಲಿ ಅತಿ ಹೆಚ್ಚು ಲಿಂಗಾಯತ ಮತಗಳಿದ್ದು, ಸುಮಾರು 25 ವರ್ಷಗಳಿಂದ ಇವರಿಗೆ ಆಡಳಿತದ ಚುಕ್ಕಾಣಿ ಸಿಗದಿರುವುದು ಸ್ವಲ್ಪಮಟ್ಟಿಗೆ ಅಸಮಾಧಾನ ಇದೆಯಾದರೂ ಯಾವ ಪಕ್ಷದಲ್ಲೂ ಸಮರ್ಥ ಅಭ್ಯರ್ಥಿಯ ಸ್ಪಷ್ಟತೆ ಇಲ್ಲದಿರುವುದರಿಂದ ಅಂದರೆ ಬಿ. ಜೆ. ಪಿ. ಕಾಂಗ್ರೆಸ್ ಹಾಗೂ ಜನತಾದಳದವರು ಲಿಂಗಾಯಿತರಿಗೆ ಟಿಕೆಟ್ ಕೊಡುವ ಯಾವ ಸೂಚನೆಗಳು ಕಾಣದಿರುವುದರಿಂದ ಇದು ಈ ಬಾರಿ ತೊಡಕಾಗಲೂಬಹುದು ಎಂಬ ಇರಾದೆ ಇದೆ.
ಜೆ.ಡಿ.ಎಸ್. ಪಕ್ಷ ತನ್ನ ಪಕ್ಷದವರೇ ಆದ ಶಾಸಕರನ್ನು ಈಗಾಗಲೇ ಉಚ್ಚಾಟನೆ ಮಾಡಿದ್ದು, ಹೊಸ ಅಭ್ಯರ್ಥಿ ನಾಗರಾಜು ಎಂದು ಘೋಷಣೆ ಮಾಡಿದೆ. ಇವರು ಕ್ಷೇತ್ರದ ಮತದಾರನ ಮನವೊಲಿಸಲಿಕ್ಕೆ ಹಳ್ಳಿ ಹಳ್ಳಿ ಸುತ್ತುತ್ತಿದ್ದಾರೆ. ಈಗಾಗಲೇ ಹಲವಾರು ಕಾರ್ಯಕ್ರಮಗಳು ಮತ್ತು ಸ್ವತಃ ಹೆಚ್.ಡಿ. ಕುಮಾರ ಸ್ವಾಮಿಯವರೇ ಬಂದು ದೊಡ್ಡ ಮಟ್ಟದದಲ್ಲಿ ರ‍್ಯಾಲಿಗಳನ್ನು ಮಾಡಿದ್ದಾರೆ. ಅವರ ಗುರಿ ವಾಸು ಅವರನ್ನು ಸೋಲಿಸುವುದು.
ಇದು ಅಷ್ಟು ಸುಲಭದ ಮಾತಲ್ಲ. ಕ್ಷೇತ್ರದಲ್ಲಿ 20 ವರ್ಷಗಳಿಂದ ಅಧಿಕಾರ ನಡೆಸಿರುವ ಶ್ರೀನಿವಾಸ್ ಜನರ ನಾಡಿ ಮಿಡಿತ ಅರಿತಿದ್ದಾರೆ. ಯಾರು ಏನೇ ಬೊಬ್ಬೆ ಹೊಡೆದರೂ ಮಗ ಮತ್ತು ಪತ್ನಿ ಈಗಾಗಲೇ ಚುನಾವಣಾ ಕಾರ್ಯ ತಂತ್ರಗಳನ್ನು ಮಾಡುತ್ತಿದ್ದಾರೆ. ಇವರ ವಿರುದ್ಧ ಹೊಸ ಅಭ್ಯರ್ಥಿ ಸೆಣಸಾಡಬೇಕಾಗಿದೆ.
ಇನ್ನು ಬಿ.ಜೆ.ಪಿ. ಯಲ್ಲಿ ಟಿಕೆಟ್ ಯಾರಿಗೆ ಎಂದು ಫೈನಲ್ ಆಗಿಲ್ಲದಿದ್ದರೂ ಆಕಾಂಕ್ಷಿಗಳು ಈಗಾಗಲೇ ಕ್ಷೇತ್ರದಲ್ಲಿ ಪಕ್ಷದ ಹಲವಾರು ಕಾರ್ಯಕ್ರಮಗಳನ್ನು ಮುಂದಿಟ್ಟುಕೊAಡು ಮನೆ ಮನೆ ಪ್ರಚಾರ ಕೈಗೊಂಡಿದ್ದಾರೆ. ಪ್ರತಿ ಚುನಾವಣೆಗಳಲ್ಲಿ ಸಂಘ ಪರಿವಾರದವರು ಹೊರಗಿನಿಂದ ಮಾಹಿತಿಗಳನ್ನು ಕೊಟ್ಟು ಚುನಾವಣೆಗೆ ಸಹಕಾರಿಯಾಗುತ್ತಿದ್ದರು. ಆದರೆ ಈಗ ನೇರ ಭಾಗಿಯಾಗುತ್ತಿರುವುದು ಸ್ವಲ್ಪಮಟ್ಟಿಗೆ ಅನುಕೂಲವಾಗಬಹುದಾ ಎಂಬ ಪ್ರಶ್ನೆ ಇದೆ.
ಈಗಾಗಲೇ ಇವರುಗಳು ಮಾಹಿತಿ ಸಂಗ್ರಹಿಸುತ್ತಿದ್ದು, ಜಾತಿವಾರು ಸಂಘಟಿಸಲು ಯೋಜನೆ ರೂಪಿಸುತ್ತಿದ್ದಾರೆ. ಜೊತೆಗೆ ಯಾರಿಗೆ ಟಿಕೆಟ್ ನೀಡಿದರೂ ಈ ಬಾರಿ ಬಂಡಾಯವೇಳದAತೆ ಆಕಾಂಕ್ಷಿಗಳ ಕಟ್ಟಿಹಾಕುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹಾಗೇನಾದರೂ ಆದಲ್ಲಿ ಬಿ ಜೆ ಪಿ ಗೆ ಅನುಕೂಲವಾಗಲೂಬಹುದು.
ಗುಬ್ಬಿ ಕ್ಷೇತ್ರಕ್ಕೆ ಪ್ರಬಲ ಬಿಜೆಪಿ ಆಕಾಂಕ್ಷಿ ಗಳಾಗಿ ಜಿ.ಎನ್. ಬೆಟಸ್ವಾಮಿ, ಎಸ್.ಡಿ. ದಿಲೀಪ್ ಕುಮಾರ್, ಪಿ.ಬಿ. ಚಂದ್ರಶೇಖರ್ ಬಾಬು ಇದ್ದಾರಾದರು ಕೊನೆಯ ಕ್ಷಣದಲ್ಲಿ ಪಕ್ಷ ಹೊರಗಿನ ಅಭ್ಯರ್ಥಿ ತಂದು ಕೂರಿಸಬಹುದೆಂಬ ಮಾತುಗಳು ಕೇಳಿಬರುತ್ತಿವೆ.
ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಿAದ ಪರಾಭವಗೊಂಡಿದ್ದ ಜಿ.ಎನ್. ಬೆಟ್ಟಸ್ವಾಮಿ ಅಹಿಂದಾ ರಕ್ಷೆಯಲ್ಲಿದ್ದಾರೆ. ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳಲ್ಲಿ ಗೊಲ್ಲರ ಮತಗಳನ್ನು ಸೆಳೆಯಲು ಈ ಬಾರಿಯೂ ಬಿಜೆಪಿ ಬೆಟ್ಟಸ್ವಾಮಿಗೆ ಟಿಕೆಟ್ ನೀಡಿ ಪ್ರಯೋಗ ಮಾಡಬಹುದು ಎಂದು ಹೇಳಲಾಗುತ್ತಿದೆ. ಜೊತೆಗೆ ಬಿಜೆಪಿಯ ಜಿಲ್ಲೆಯ ಶಾಸಕರು ಕೂಡ ಇವರಿಗೆ ಟಿಕೆಟ್ ಕೊಡಿ ಎಂದು ಹೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಬಾರಿ ದಿಲೀಪ್ ಕುಮಾರ್ ಬಿಜೆಪಿಯ ಮತಗಳನ್ನು ಕಸಿದಿದ್ದರು. ಹೀಗೆ ಬಿಜೆಪಿಯೊಳಗೆ ಗುಂಪು ಇರುವುದರಿಂದ ಮತಗಳು ಕೇಂದ್ರೀಕೃತವಾಗಿರಲಿಲ್ಲ. ಈ ಬಾರಿ ಹಾಗಾಗದಂತೆ ನೋಡಿಕೊಳ್ಳಬೇಕು ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ.
ಇನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ವಿಚಾರಗಳು ಭಿನ್ನವಾಗಿಲ್ಲ. ಈಗಾಗಲೇ ಪಕ್ಷದ ಸೂಚನೆಯಂತೆ ಪಕ್ಷಕ್ಕೆ ಹೊನ್ನಗಿರಿಗೌಡ ಹಾಗೂ ಜಿ.ಎಸ್. ಪ್ರಸನ್ನಕುಮಾರ್ ಅರ್ಜಿ ಸಲ್ಲಿಸಿ ಟಿಕೆಟ್‌ಗಾಗಿ ತೀವ್ರ ಲಾಭಿ ನೆಡೆಸುತ್ತಿದ್ದಾರಾದರೂ ವರಿಷ್ಠರ ತೀರ್ಮಾನವೇ ಅಂತಿಮವಾಗಿರುವುದರಿAದ ಏನಾಗಬಹುದೆಂದು ಕಾದು ನೋಡಬೇಕಿದೇ.
ಗುಬ್ಬಿಯಲ್ಲಿ 20 ವರ್ಷಗಳಿಂದ ಶಾಸಕರಾಗಿ ಕೆಲಸ ನಿರ್ವಹಿಸಿರುವ ಶಾಸಕ ಎಸ್.ಆರ್.ಶ್ರೀನಿವಾಸ್‌ಗೆ ಈ ಬಾರಿ ಚುನಾವಣೆ ಮೇಲ್ನೋಟಕ್ಕೆ ಕಷ್ಟವಾಗಬಹುದು ಎನಿಸಿದರೂ ಭಾಜಪ ಯಾವ ಅಭ್ಯರ್ಥಿ ಕಣಕ್ಕೆ ಇಳಿಸುತ್ತದೆ ಎನ್ನುವುದರ ಮೇಲೆ ತೀರ್ಮಾನವಾಗುತ್ತೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ