ಹಿಜಾಬ್ ಗಲಾಟೆಯ ಹಿಂದೆ SDPI ಇದೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ಸಂಪೂರ್ಣ ಮಾಹಿತಿ ನೀಡಿದ ಕರಾವಳಿ ಕಾಂಗ್ರೆಸ್

ಬೆಂಗಳೂರು:ಹಿಜಾಬ್ ಗಲಾಟೆಯ ಹಿಂದೆ SDPI ಇದೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ಸಂಪೂರ್ಣ ಮಾಹಿತಿ ನೀಡಿದ ಕರಾವಳಿ ಕಾಂಗ್ರೆಸ್

     ಹಿಜಾಬ್ ಗಲಾಟೆ ವಿಚಾರವಾಗಿ ರಾಜ್ಯದಾದ್ಯಂತ ವಿವಾದ ಸೃಷ್ಟಿಯಾಗಿದೆ. ಕಾಲೇಜಿಗೆ ಹಿಜಾಬ್(Hijab)​ ಧರಿಸಲು ಅವಕಾಶ ನೀಡಿ ಎಂದು ಮುಸ್ಲಿಂ ವಿದ್ಯಾರ್ಥಿನಿಯರು(Students) ಮನವಿ ಮಾಡಿಕೊಳ್ಳುತ್ತಿದ್ದರೆ, ಇತ್ತ ಹಿಂದೂ ವಿದ್ಯಾರ್ಥಿಗಳು ಕೆಸರಿ ಶಾಲು ಧರಿಸಿ ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ.

            ಈ ವಿವಾದ ಸದ್ಯ ರಾಜಕೀಯ ವಲಯದಲ್ಲೂ ಹೆಚ್ಚು ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಕರಾವಳಿ ಭಾಗದ ಸ್ಥಳಿಯ ಕಾಂಗ್ರೆಸ್(Congress) ‌ಮುಖಂಡರಿಂದ ಈ ಬಗ್ಗೆ ಮಾಹಿತಿ ಪಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಈ ಗಲಾಟೆಗೆ ಎಸ್​ಡಿಪಿಐ(SDPI) ಕಾರಣ ಎಂದು ತಿಳಿಸಿದ್ದಾರೆ.

  ಉಡುಪಿ ಮತ್ತು ಕುಂದಾಪುರದಲ್ಲಿ ನಡೆಯುತ್ತಿರುವ ಲಾಟೆಯ ಹಿಂದೆ ಎಸ್​ಡಿಪಿಐ ಇದೆ. ಎಸ್​ಡಿಪಿಐ ಕಾರ್ಯಕರ್ತಎ ಒತ್ತಡಕ್ಕೆ ವಿಧ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಇಲ್ಲಿನ ಸ್ಥಳೀಯ ಕಾಂಗ್ರೆಸ್​ ಮುಖಂಡರು ತಿಳಿಸಿದ್ದಾರೆ.

15 ದಿನಗಳ ಹಿಂದೆ ಎಸ್​ಡಿಪಿಐ ಬೆಂಬಲಿತ ವಿದ್ಯಾರ್ಥಿಗಳು ಮ್ಯಾನೇಜ್ಮೆಂಟ್ ಜೊತೆ ಕೆಲ ವೈಯುಕ್ತಿಕ ವಿಚಾರಕ್ಕೆ ಗದ್ದಲ ಮಾಡಿಕೊಂಡಿದ್ದರು.ಈ ಸಂದರ್ಭದಲ್ಲಿ ಎಸ್​ಡಿಪಿಐ ವಿಧ್ಯಾರ್ಥಿಗಳ ಸಂಘ ದುಡ್ಡಿಗೆ ಕೂಡ ಬೇಡಿಕೆ ಇಟ್ಟಿತ್ತು ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಬೇಡಿಕೆ ತಿರಸ್ಕಾರ ಮಾಡಿದ ಹಿನ್ನೆಲೆ ಮುಂದೆ ನಿಮಗೆ ಬುದ್ದಿ ಕಳಿಸುತ್ತೇವೆಂದು ಹೇಳಿ ತೆರಳಿದ್ದ ಎಸ್​ಡಿಪಿಐ ವಿಧ್ಯಾರ್ಥಿ ಸಂಘಟನೆಯ ಮುಖಂಡರು, 15 ದಿನಗಳಲ್ಲಿ ಹಿಜಾಬ್ ಗಲಾಟೆ ಮಾಡಿದ್ದಾರೆ. ವಿಧ್ಯಾರ್ಥಿನಿಯರನ್ನು ಎಸ್​ಡಿಪಿಐ ಸಂಘಟನೆ ಎತ್ತಿಕಟ್ಟಿದೆ ಎಂದು ಉಡುಪಿ ಜಿಲ್ಲೆ ಕಾಂಗ್ರೆಸ್ ನಾಯಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.

ದಿನದಿಂದ ದಿನಕ್ಕೆ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ತಾರಕಕ್ಕೇರುತ್ತಿದೆ. ಹೀಗಿರುವಾಗಲೇ ಸಮಾನತೆಯನ್ನು ಬೋಧಿಸುವ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡುವಂತೆ ಹಿಂದೂ ಜಾಗರಣ ವೇದಿಕೆ ಒತ್ತಾಯ ಮಾಡಿದೆ. ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದ ಎಲ್ಲಾ ಜಿಲ್ಲಾ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು, ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮನವಿ ಮಾಡಿದ್ದಾರೆ.

ಹಿಜಾಬ್​ಗೆ ವಿರುದ್ಧವಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಎಲ್ಲಾ ಕೋಮಿನ ಸಂಘರ್ಷಕ್ಕೆ ಕಾರಣವಾಗುತ್ತದೆ. ಇದರಿಂದ ಶೈಕ್ಷಣಿಕ ವಾತವರಣ ಸಂಪೂರ್ಣ ಹದಗೆಡುತ್ತದೆ.

ಹೀಗಾಗಿ ಸರ್ಕಾರ ಶಿಕ್ಷಣ ಇಲಾಖೆ ಗೊಂದಲಕಾರಿ ಕ್ರಮಗಳಿಗೆ ಅವಕಾಶ ನೀಡಬಾರದು. ಒಂದು ವೇಳೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಅವಕಾಶ ನೀಡಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಹಿಂದೂ ಜಾಗರಣ ವೇದಿಕೆ ಸಿಎಂಗೆ ಅಗ್ರಹಪತ್ರ ಬರೆದಿದೆ.

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap