ಅಲ್ಪಸಂಖ್ಯಾತರ ಕಲ್ಯಾಣ 2025-26ನೇ ಸಾಲಿನ ಬಜೆಟ್ ಗೆ SDPI ಪ್ರಸ್ತಾವನೆ

ಬೆಂಗಳೂರು :

    2025-26 ನೇ ಸಾಲಿನ ಬಜೇಟ್ ನಲ್ಲಿ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗಾಗಿ ಒಟ್ಟು ಬಜೇಟ್ ನಲ್ಲಿ ಕನಿಷ್ಠ 10,000 ಕೋಟಿ ಮೊತ್ತ ಮೀಸಲಿಡಬೇಕು ಎಂದು ಮನವಿ.

    ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಉದ್ಯಮ ಶೀಲರು ಸ್ಥಾಪಿಸುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಹೊಸ ಘಟಕಗಳನ್ನು ಸ್ಥಾಪಿಸಲು ಹಾಗೂ ಅಸ್ತಿತ್ವದಲ್ಲಿರುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಘಟಕಗಳ ಉನ್ನತೀಕರಣಕ್ಕೆ KSFC ಹಾಗೂ ಇನ್ನಿತರ ಬ್ಯಾಂಕ್ ಗಳ ಮೂಲಕ ಪಡೆಯುವ 20 ಕೋಟಿ ರೂ.ವರೆಗಿನ ಸಾಲಕ್ಕೆ ಶೇ. 50 ರಷ್ಟು ಬಡ್ಡಿ ಸಹಾಯಧನ ನೀಡಬೇಕು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC) ದಿಂದ ನೀಡುವ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಮತ್ತು ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಲು ಕನಿಷ್ಠ ಪಕ್ಷ 2,000 ಕೋಟಿ ರೂ.ಗಳ ವಿವಿಧ ಕಾರ್ಯಕ್ರಮಗಳನ್ನು ರೂಪಿಸಬೇಕು.

   ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಸ್ವ – ಸಹಾಯ ಗುಂಪುಗಳಿಗೆ ವಿವಿಧ ರೀತಿಯ ಸ್ವಯಂ ಉದ್ಯೋಗ ಚಟುವಟಿಕೆಗಳನ್ನು ಪ್ರಾರಂಭಿಸಲು ಉತ್ತೇಜನ ನೀಡುವಸಲುವಾಗಿ 100 ಕೋಟಿ ಮೀಸಲಿಡಬೇಕು ಮತ್ತು ಆಹಾರ ಇಲಾಖೆಯಿಂದ ಹೊಸ ನ್ಯಾಯ ಬೆಲೆ ಅಂಗಡಿ ಸ್ಥಾಪಿಸಲು ಅವಕಾಶ ಕಲ್ಪಿಸಿಕೊಡಬೇಕು. ಅಲ್ಪಾಸಂಖ್ಯಾತ ಸಮುದಾಯಗಳ ಶೈಕ್ಷಣಿಕ ಅಭಿವೃದ್ಧಿಗೆ (ಶಾಲಾ, ಕಾಲೇಜು) ವಿಶೇಷ ಅನುದಾನ ನೀಡಬೇಕು. ಈಗಾಗಲೇ KMDC ನಿಗಮದಿಂದ ವಿದ್ಯಾರ್ಥಿಗಳಿಗೆ ನೀಡಲಾಗಿರುವ ಅರಿವು ಸಾಲವನ್ನು ಸಂಪೂರ್ಣ ಮನ್ನ ಮಾಡಬೇಕು.

   Phd ಶಿಷ್ಯ ವೇತನ (ಸ್ಟೇ ಫಂಡ್) ಅನ್ನು ಮಾಸಿಕ 10,000 ದಿಂದ 50,000ಕ್ಕೆ ಏರಿಸಬೇಕು. ಅಲ್ಪಸಂಖ್ಯಾತ ಸಮುದಾಯದಲ್ಲಿ ಕೇವಲ 2% ವಿದ್ಯಾರ್ಥಿಗಳು ಮಾತ್ರ ಸ್ನಾತಕೋತ್ತರ ಪದವಿ ಕಲಿಯಿತಿದ್ದು ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಸ್ನಾತಕೋತ್ತರ ಕಲಿಯುವ ವಿದ್ಯಾರ್ಥಿಗಳಿಗೆ ಮಾಸಿಕ 20,000 ಶಿಷ್ಯ ವೇತನವನ್ನು ಸರ್ಕಾರ ಘೋಷಿಸಬೇಕು. ಕ್ರೈಸ್ತ, ಸಿಖ್, ಜೈನ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ 1,000 ಕೋಟಿ ಮೀಸಲಿಡಬೇಕು. ರಾಜ್ಯ ಉರ್ದು ಅಕಾಡೆಮಿಗೆ 250 ಕೋಟಿ ಅನುದಾನ ಘೋಷಿಸಬೇಕು.

    ರಾಜ್ಯ ಬ್ಯಾರಿ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣಕ್ಕೆ 100 ಕೋಟಿ ಮೀಸಲಿಡಬೇಕು ಮತ್ತು ಬ್ಯಾರಿ ಅಭಿವೃದ್ಧಿಗೆ 100 ಕೋಟಿ ಮೀಸಲಿಡಬೇಕು. ಪ್ರಿ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನವನ್ನು ಶೇಕಡ 50 ಕ್ಕೆ ಏರಿಸಿ ಹೆಚ್ಚಿನ ಅನುದಾನ ಘೋಷಿಸಬೇಕು. ಮುಸ್ಲಿಂ ಸಮುದಾಯವನ್ನು ಸಬಲೀಕರಣ ಮಾಡುವ ಭಾಗವಾಗಿ IAS, KAS, NEET ಕೋಚಿಂಗ್ ಸೆಂಟರ್‌ಗಳನ್ನು ಜಿಲ್ಲಾ ಮಟ್ಟದಲ್ಲಿ ಪ್ರಾರಂಭಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

    ಸುದ್ಧಿಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರು ಅಬ್ದುಲ್ ಮಜೀದ್,ಉಪಾಧ್ಯಕ್ಷರು ಅಬ್ದುಲ್ ಹನ್ನಾನ್ , ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ , ರಾಜ್ಯ ಕಾರ್ಯದರ್ಶಿ ರಿಯಾಜ್ ಕುಡುಂಬು ,ಬೆಂಗಳೂರು ಉತ್ತರ ಅಧ್ಯಕ್ಷರಾದ ಮೊಹಮ್ಮದ್ ಜಾವೇದ್ ಆಜಮ್ , ಬೆಂಗಳೂರು ದಕ್ಷಿಣ ಅಧ್ಯಕ್ಷರಾದ ಸಲೀಂ ಅಹ್ಮದ್  ಬೆಂಗಳೂರು ದಕ್ಷಿಣ ಅಧ್ಯಕ್ಷರು ಉಪಸ್ಥಿತರು 

Recent Articles

spot_img

Related Stories

Share via
Copy link