ಮೈಸೂರಿಗೆ ಬರಲಿದೆ ಸೆಮಿಕಂಡಕ್ಟರ್ ಚಿಪ್ ಫ್ಯಾಕ್ಟರಿ….!

ಮೈಸೂರು

   ಭಾರತದಲ್ಲಿ ಏಳುತ್ತಿರುವ ಸೆಮಿಕಂಡಕ್ಟರ್ ಪ್ರವಾಹದ ಅಲೆ ಮೈಸೂರನ್ನೂ ತಲುಪಿದೆ. ಸರಳ ಮತ್ತು ಸುಂದರ ಅರಮನೆ ನಗರಿಯಾದ ಮೈಸೂರಿನಲ್ಲಿ ಸೆಮಿಕಂಡಕ್ಟರ್ ಚಿಪ್ ತಯಾರಿಕೆಯ ಘಟಕ ಸ್ಥಾಪನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇತ್ತೀಚೆಗೆ ಇಲ್ಲಿಯ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾಸನ್ ಮೆಗಾ ಫೂಡ್ ಪಾರ್ಕ್​ನ ಸಿಇಒ ಅಶೋಕ್ ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೈಸೂರಿನ ಕಡಕೋಳದಲ್ಲಿ ಈ ಘಟಕ ಶೀಘ್ರದಲ್ಲೇ ಸ್ಥಾಪನೆಯಾಗಬಹುದು ಎಂದು ಅವರು ಸುಳಿವು ನೀಡಿದ್ದಾರೆ.

  ಜಪಾನ್ ಮೂಲದ ಕಂಪನಿಯೊಂದು ಸೆಮಿಕಂಡಕ್ಟರ್ ಚಿಪ್ ಮ್ಯಾನುಫ್ಯಾಕ್ಚರಿಂಗ್ ಘಟಕ ಸ್ಥಾಪಿಸಲು ಆಸಕ್ತಿ ತೋರಿದೆ. ಕಡಕೋಳದಲ್ಲಿ ಯೂನಿಟ್ ಸ್ಥಾಪಿಸುವಂತೆ ಆ ಕಂಪನಿ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಫೆಬ್ರುವರಿ 12 ಮತ್ತು 13ರಂದು ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಯೋಜನೆಯನ್ನು ಅಂತಿಮಗೊಳಿಸಲಾಗಬಹುದು ಎಮದು ಅಶೋಕ್ ಅವರು ಮಾಹಿತಿ ನೀಡಿದ್ದಾರೆ ಎಂದು ಸ್ಟಾರ್ ಆಫ್ ಮೈಸೂರ್ ವೆಬ್​ಸೈಟ್​ನಲ್ಲಿ ವರದಿಯಾಗಿದೆ.

   ಸೆಮಿಕಂಡಕ್ಟರ್ ಚಿಪ್ ತಯಾರಿಕೆಯ ಘಟಕ ಸ್ಥಾಪನೆಯಾದರೆ ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಅದಕ್ಕೆ ಪೂರಕವಾದ ಉದ್ದಿಮೆಗಳೂ ಮೈಸೂರಿನಲ್ಲಿ ಹುಟ್ಟಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈಗಾಗಲೇ ಮೈಸೂರಿನಲ್ಲಿ ಸಣ್ಣ ಮತ್ತು ದೊಡ್ಡ ಉದ್ದಿಮೆಗಳು ಇದ್ದು, ಈಗ ಸೆಮಿಕಂಡಕ್ಟರ್ ಕ್ಷೇತ್ರವೂ ಸೇರ್ಪಡೆಯಾದರೆ ಅರಮನೆ ನಗರಿಗೆ ಹೊಸ ಆಯಾಮ ದಕ್ಕುವ ನಿರೀಕ್ಷೆ ಇದೆ. ಯಾವ ಜಪಾನೀ ಕಂಪನಿಯು ಸೆಮಿಕಂಡಕ್ಟರ್ ಚಿಪ್ ಘಟಕ ಸ್ಥಾಪಿಸುತ್ತದೆ ಎಂಬ ಮಾಹಿತಿ ಇನ್ನೂ ಗೊತ್ತಾಗಿಲ್ಲ.

   ಮೈಸೂರಿನಲ್ಲಿ ಇನ್ಫೋಸಿಸ್, ವಿಪ್ರೋ, ಎಲ್ ಅಂಡ್ ಟಿ, ಸೀರೆನ್, ಮೈಸೂರ್ ಪಾಲಿಮರ್ಸ್ ರಬ್ಬರ್ ಪ್ರಾಡಕ್ಟ್ಸ್, ಗ್ಲೋಟ್ರಾನಿಕ್ಸ್, ಭೋರುಕ ಎಕ್ಸ್​ಟ್ರೂಶನ್ಸ್, ಮಿಟ್ಸುಬಿಶಿ, ಜೆಕೆ ಟಯರ್ಸ್, ಏಷ್ಯನ್ ಪೇಂಟ್ಸ್, ಕೇನಸ್ ಟೆಕ್ನಾಲಜಿ, ಎನ್ ರಂಗರಾವ್ ಅಂಡ್ ಸನ್ಸ್, ಜ್ಯೂಸ್ ಬಯೋಟೆಕ್ ಮೊದಲಾದ ನೂರಾರು ಉದ್ಯಮಗಳು ನೆಲಸಿವೆ. ಮೈಸೂರಿನ ಹೂಟಗಳ್ಳಿ, ಮೇಟಗಳ್ಳಿ, ಕಡಕೋಳ ಮೊದಲಾದೆಡೆ ಕೈಗಾರಿಕಾ ಪ್ರದೇಶಗಳು ನೆಲಸಿವೆ.

Recent Articles

spot_img

Related Stories

Share via
Copy link
Powered by Social Snap