
ಬೆಳ್ಳಿತೆರೆಯ ಮೇಲೆ ಅಭೂತಪೂರ್ವ ಪಾತ್ರಗಳಿಂದ ಗಮನ ಸೆಳೆದಿದ್ದ ಹಿರಿಯ ನಟಿ ಉಮಾಶ್ರೀ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೂಲಕ ಕಿರುತೆರೆಗೆ ಭರ್ಜರಿಯಾಗಿ ಪ್ರವೇಶಿಸಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಪ್ರಮುಖ ಆಕರ್ಷಣೆಯೇ ಉಮಾಶ್ರೀ.
ಬೆಳ್ಳಿ ತೆರೆಯಲ್ಲಿ ಮಿಂಚಿ ರಾಜಕೀಯಕ್ಕೆ ಧುಮುಕಿದ್ದ ಈ ನಟಿ ಇದೀಗ ಕಿರುತೆರೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಸಾಲು ಸಾಲು ಸೂಪರ್ ಹಿಟ್ ಧಾರಾವಾಹಿಗಳು ಪ್ರಸಾರವಾಗುತ್ತಿದ್ದು ಆ ಸಾಲಿಗೆ ಇದೀಗ ಪುಟ್ಟಕ್ಕನ ಮಕ್ಕಳು ಸೇರಿದೆ..
ಜೊತೆಜೊತೆಯಲಿ ನಿರ್ದೇಶಕರಾದ ಆರೂರು ಜಗದೀಶ್ ಅವರೇ ಈ ಧಾರಾವಾಹಿಯ ನಿರ್ದೇಶನ ಮಾಡುತ್ತಿದ್ದು ಇತ್ತ ನಿರ್ಮಾಣದ ಜವಾಬ್ದಾರಿಯನ್ನೂ ಸಹ ಅವರದ್ದೇ ಜೆ ಎಸ್ ಪ್ರೊಡಕ್ಷನ್ಸ್ ಸಂಸ್ಥೆ ವಹಿಸಿಕೊಂಡಿದೆ.
ಹೌದು ಇತ್ತೀಚಿನ ದಿನಗಳಲ್ಲಿ ನಿರ್ದೇಶಕರು ಅಥವಾ ಧಾರಾವಾಹಿಯ ಹೀರೋಗಳೇ ನಿರ್ಮಾಣ ಸಂಸ್ಥೆಯನ್ನು ನಡೆಸುತ್ತಿದ್ದು ತಮ್ಮ್ ತಮ್ಮ್ ಧಾರಾವಾಹಿಗೆ ಬೇಕಾದ ರೀತಿಯಲ್ಲಿ ಹಣ ವಿನಿಯೋಗ ಮಾಡಿ ಲಾಭ ಪಡೆಯುತ್ತಿದ್ದಾರೆ.. ಇನ್ನು ಇತ್ತ ಜೊತೆಜೊತೆಯಲಿ ಧಾರಾವಾಹಿಗೆ ಸ್ಯಾಂಡಲ್ವುಡ್ ನಟ ಅನಿರುದ್ಧ್ ರನ್ನು ಕರೆತಂದಂತೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಗಾಗಿ ಉಮಾಶ್ರೀ ಅವರನ್ನು ಕರೆತರಲಾಗಿದೆ..
ಕಳೆದ ವರ್ಷವೇ ಧಾರಾವಾಹಿಯ ಕೆಲಸಗಳು ಶುರುವಾಗಿದ್ದು ಸತತ ಒಂದು ವರ್ಷದ ಪೂರ್ವ ತಯಾರಿಯ ಜೊತೆಗೆ ಇದೀಗ ಕಳೆದ ಐದು ದಿನಗಳಿಂದ ತೆರೆ ಮೇಲೆ ಬರುತ್ತಿದ್ದು ಅದ್ಧೂರಿ ಓಪನಿಂಗ್ ಪಡೆದಿದೆ ಎನ್ನಬಹುದು.. ಸಾಮಾಜಿಕ ಜಾಲತಾಣದಲ್ಲಿ ಪ್ರೇಕ್ಷಕರ ಬಾಯಿಂದ ಒಳ್ಳೆಯ ಪ್ರತಿಕ್ರಿಯೆ ಕೇಳಿ ಬರುತ್ತಿದ್ದು ಮುಂದಿನ ವಾರ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೊದಲ ವಾರದ ರೇಟಿಂಗ್ ಎಷ್ಟೆಂದು ತಿಳಿಯಲಿದೆ..
ಇನ್ನು ಇತ್ತ ಸಂಭಾವನೆ ವಿಚಾರಕ್ಕೆ ಬಂದರೆ ನಿರ್ದೇಶಕ ಅರೂರು ಜಗದೀಶ್ ಅವರದ್ದೇ ನಿರ್ಮಾಣವಾದ್ದರಿಂದ ಈ ಹಿಂದೆಯೂ ಸಹ ಅನಿರುದ್ಧ್ ಅವರಿಗೆ ಒಂದು ದಿನಕ್ಕೆ ಮೂವತ್ತೈದು ಸಾವಿರ ರೂಪಾಯಿಯ ದುಬಾರಿ ಸಂಭಾವನೆ ಕೊಟ್ಟು ಸುದ್ದಿಯಾಗಿತ್ತು. ಆಗ ಕಿರುತೆರೆಗೆ ಅದೇ ಅತಿ ಹೆಚ್ಚಿನ ಸಂಭಾವನೆಯಾಗಿತ್ತು..
ಇನ್ನು ಈಗ ಅದೆಲ್ಲವನ್ನೂ ಮೀರಿ ಸಂಭಾವನೆ ವಿಚಾರದಲ್ಲಿ ಎಲ್ಲಾ ಕಿರುತೆರೆ ಖ್ಯಾತ ಹೀರೋಗಳನ್ನು ಹಿಂದಿಕ್ಕಿದ್ದಾರೆ ನಮ್ ಪುಟ್ಟಕ್ಕ.. ಹೌದು ಪುಟ್ಟಕ್ಕನಿಗೆ ಎಲ್ಲಾ ನಟ ನಟಿಯರಿಗಿಂತ ಅತಿ ಹೆಚ್ಚು ಸಂಭಾವನೆ ನೀಡಲಾಗುತ್ತಿದೆ.. ಹೌದು ಇವರಿಗೂ ಎಲ್ಲರ ರೀತಿ ದಿನದ ಸಂಭಾವನೆಯನ್ನೇ ನೀಡಲಾಗುತ್ತಿದ್ದು ಒಂದು ದಿನಕ್ಕೆ ಬರೋಬ್ಬರಿ 45 ಸಾವಿರ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ..
ಹೌದು ಧಾರಾವಾಹಿಯಲ್ಲಿ ಉಮಾಶ್ರೀ ಅವರ ಪರಕಾಯ ಪ್ರವೇಶದ ನಟನೆ ನೋಡುವುದೇ ಒಂದು ರೀತಿಯ ಆನಂದ.. ಅವರ ನಟನೆ ನೋಡಿ ಸ್ವತಃ ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್ ಅವರೇ ನಿಬ್ಬೆರಗಾಗಿದ್ದರಂತೆ.. ಇನ್ನು ಇಂತಹ ದೊಡ್ಡ ನಟಿ ಕಿರುತೆರೆಗೆ ಬಂದಿದ್ದು ಸಧ್ಯ ಅವರಿಗೆ ತಕ್ಕಂತೆ ಸಂಭಾವನೆ ನೀಡಲಾಗುತ್ತಿದೆ..
ಇನ್ನು ಧಾರಾವಾಹಿ ಶುರುವಿನಲ್ಲಿ ತಿಂಗಳಲ್ಲಿ ಇಪ್ಪತ್ತರಿಂದ ಇಪ್ಪತ್ತೈದು ದಿನಗಳ ಕಾಲ ಚಿತ್ರೀಕರಣವಿರುತ್ತದೆ.. ನಂತರದಲ್ಲಿ ಸಂಚಿಕೆಗಳ ಬ್ಯಾಂಕಿಂಗ್ ಆದ ಬಳಿಕ ಹದಿನೈದರಿಂದ ಇಪ್ಪತ್ತು ದಿನಗಳ ಕಾಲ ಧಾರಾವಾಹಿಯ ಚಿತ್ರೀಕರಣವಿದ್ದ ತಿಂಗಳಿಗೆ ಅಂದಾಜು ಒಂಭತ್ತರಿಂದ ಹತ್ತು ಲಕ್ಷ ರೂಪಾಯಿ ಸಂಭಾವನೆಯನ್ನು ಉಮಾಶ್ರೀ ಅವರಿಗೆ ನೀಡಲಾಗುತ್ತದೆ ಎನ್ನಲಾಗಿದೆ..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
