ಅಮೆರಿಕ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಕಿರಿಕ್ ಈಗ ಜಾಗತಿಕವಾಗಿ ಸಂಚಲನ ಸೃಷ್ಟಿ ಮಾಡುತ್ತಿದೆ. ಡೊನಾಲ್ಡ್ ಟ್ರಂಪ್ ಈಗಾಗಲೇ ಗ್ರೀನ್ಲ್ಯಾಂಡ್ & ಪನಾಮ ವಿಚಾರದ ಬಗ್ಗೆ ಮಾತನಾಡಿ ಭಾರಿ ಹಲ್ಚಲ್ ಎಬ್ಬಿಸಿದ್ದರು. ಅಲ್ಲದೆ ಗ್ರೀನ್ಲ್ಯಾಂಡ್ ಖರೀದಿ ಮಾಡ್ತೀನಿ ಅಂತಾ ಹೇಳಿದ್ದ ಟ್ರಂಪ್, ಪನಾಮ ಕಾಲುವೆ ಮೇಲೆ ಕೂಡ ಕಣ್ಣಿಟ್ಟಿದ್ದರು. ಇಷ್ಟೆಲ್ಲದರ ಮಧ್ಯೆ ದಿಢೀರ್ ಕೆನಡಾ ದೇಶವನ್ನೇ ಅಮೆರಿಕ ಜೊತೆಗೆ ವಿಲೀನ ಮಾಡಲು ಟ್ರಂಪ್ ಮುಂದಾಗಿದ್ದಾರೆ!
ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬರಲು ಇನ್ನೂ 12 ದಿನಗಳು ಬಾಕಿ ಉಳಿದಿವೆ. ಈ ಮೂಲಕ ಜನವರಿ 20 ರಂದು ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಅಮೆರಿಕದ ಅಧ್ಯಕ್ಷರಾಗಿ & ಅಧಿಕಾರ ಸ್ವೀಕಾರ ಮಾಡುತ್ತಾರೆ. ಆದರೆ ಡೊನಾಲ್ಡ್ ಟ್ರಂಪ್ ಅವರು, ಅಧಿಕಾರಕ್ಕೆ ಏರುವ ಮೊದಲೇ ಸ್ಫೋಟಕ ಬೆಳವಣಿಗೆ ನಡೆದು ಹೋಗಿದೆ. ಅಮೆರಿಕದ ಪಕ್ಕದಲ್ಲೇ ಇರುವ ದೇಶ & ಅಮೆರಿಕದ ಆಪ್ತ ಮಿತ್ರ ಕೆನಡಾ ನೆಲವನ್ನೇ ಕಬ್ಜಾ ಮಾಡಲು ಟ್ರಂಪ್ ಸ್ಕೆಚ್ ಹಾಕಿದ್ದಾರಾ? ಟ್ರಂಪ್ ಶೇರ್ ಮಾಡಿರುವ ಮ್ಯಾಪ್ ಎಂತಹದ್ದು?
ಅಮೆರಿಕ ಜೊತೆ ಕೆನಡಾ ವಿಲೀನ? ಕೆನಡಾ & ಅಮೆರಿಕ ನಡುವೆ ಮೊದಲಿನಿಂದ ಕೂಡ ಉತ್ತಮ ಸಂಬಂಧ ಇದೆ. ಆದರೆ ಇದೇ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಪ್ರತಿಬಾರಿ ಕೂಡ ಏನಾದರೂ ಒಂದು ಕಿರಿಕ್ ಆಗುತ್ತಲೇ ಇದೆ. 2016 ರಲ್ಲಿ ಡೊನಾಲ್ಡ್ ಟ್ರಂಪ್ ಮೊದಲ ಬಾರಿ ಅಧ್ಯಕ್ಷರಾಗಿದ್ದ ವೇಳೆ ಇದೇ ರೀತಿ ಕೆನಡಾ ಜೊತೆ ಭರ್ಜರಿ ಕಿರಿಕ್ ಮಾಡಿದ್ದರು. ಇದೀಗ ಕೆನಡಾ ದೇಶವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡು ಅಮೆರಿಕ ಜೊತೆ ವಿಲೀನ ಮಾಡಿಕೊಳ್ಳುವ ರೀತಿ ಮ್ಯಾಪ್ ಹಾಕಿದ್ದಾರೆ. ಟ್ರಂಪ್ ಶೇರ್ ಮಾಡಿರುವ ಕೆನಡಾ & ಅಮೆರಿಕ ಮ್ಯಾಪ್ ಈಗ ಸಂಚಲನ ಸೃಷ್ಟಿ ಮಾಡಿದೆ.
ಕೆನಡಾ ಹಲವು ಶತಮಾನಗಳ ಹಿಂದೆ ಫ್ರೆಂಚ್ ದೊರೆಗಳ ಆಡಳಿತದಲ್ಲಿ ಇತ್ತು, ಆ ನಂತರ ಸ್ವತಂತ್ರವಾಗಿತ್ತು. ಇನ್ನೊಂದು ಕಡೆ ಅಮೆರಿಕ, ಬ್ರಿಟೀಷರ ಅಧೀನದಲ್ಲಿ ಇತ್ತು. ಹಾಗೇ ಬ್ರಿಟನ್ ಬಂಧ ಬಿಡಿಸಿಕೊಂಡು ಮುಕ್ತವಾಗಿತ್ತು.
ಟ್ರಂಪ್ ಅವರು ಕೆನಡಾ ಕೂಡ ಅಮೆರಿಕದ ಭಾಗ ಎನ್ನುವಂತೆ ಮ್ಯಾಪ್ ಶೇರ್ ಮಾಡಿರುವ ವಿಚಾರ ಭಾರಿ ದೊಡ್ಡ ಕಿಚ್ಚಿಗೂ ಕಾರಣವಾಗಿದೆ. ನಿನ್ನೆ ತಾನೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅಧಿಕಾರ ಬಿಟ್ಟು ಹೋಗುವ ನಿರ್ಧಾರ ಪ್ರಕಟಿಸಿದ್ದರು. ಹೀಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನಿವೃತ್ತಿ ನಿರ್ಧಾರದ ಒಂದು ದಿನದ ಬಳಿಕ, ಟ್ರಂಪ್ ಈ ರೀತಿಯ ಪೋಸ್ಟ್ ಹಾಕಿ ಕೆನಡಾ ಕೂಡ ಅಮೆರಿಕದ ಜೊತೆ ವಿಲೀನ ಆಗಿದೆ ಅನ್ನೋ ಸಂದೇಶ ಕೊಟ್ಟಿದ್ದಾರಾ? ಕಾದು ನೋಡಬೇಕಿದೆ.
