ಜನಾರ್ದನ ರೆಡ್ಡಿ ವಿರುದ್ಧ ಮಾನನಷ್ಟ ಕೇಸ್‌ ದಾಖಲಿಸಿದ ಸೆಂಥಿಲ್‌….!

ಬೆಂಗಳೂರು:

    ಧರ್ಮಸ್ಥಳ ಪ್ರಕರಣದಲ್ಲಿ ಸಂಸದ ಸಸಿಕಾಂತ್ ಸೆಂಥಿಲ್ ಕೈವಾಡ ಇದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ತಮಿಳುನಾಡು ಸಂಸದ ಸಸಿಕಾಂತ್ ಸೆಂಥಿಲ್ ಮಾನನಷ್ಟ ಕೇಸ್ ದಾಖಲಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಚೈಲ್ಡಿಶ್‌ಗಳಿಗೆ ಉತ್ತರ ಕೊಡಬೇಕಾ ಎಂದು ಇಷ್ಟು ದಿನ ಸುಮ್ಮನಿದ್ದೆ. ಆದರೆ ಈಗ ಪ್ರತಿದಿನ ಒಂದು ಸ್ಟೋರಿ ಬರುತ್ತಿದೆ, ಇದು ಸರಿಯಾದ ಸಮಯವೆಂದು ಮಾನನಷ್ಟ ಕೇಸ್ ದಾಖಳಿಸಿದ್ದೇನೆ ಎಂದು ತಿಳಿಸಿದ್ದಾರೆ.

   ನಾನು 10 ವರ್ಷಗಳ ಕಾಲ ಕರ್ನಾಟಕದಲ್ಲಿ ಕೆಲಸ ಮಾಡಿದ್ದೇನೆ. ನನ್ನ ವಿರುದ್ಧ ಆರೋಪ ಮಾಡಿದ ವ್ಯಕ್ತಿ ಯಾರು ಗೊತ್ತಾ? ಕರ್ನಾಟಕದ ಸಂಪತ್ತು ಲೂಟಿ ಹೊಡೆದು 7 ವರ್ಷ ಜೈಲಿನಲ್ಲಿ ಇದ್ದವರು ಎಂದು ಕಿಡಿ ಕಾರಿದ್ದಾರೆ.

    ನನಗೆ ದೆಹಲಿಯಲ್ಲಿ ಇನ್ನೂ ಮನೆಯೇ ನೀಡಿಲ್ಲ. ದೆಹಲಿಗೆ ತಲೆ ಬುರುಡೆ ತೆಗೆದುಕೊಂಡು ಹೋಗಿದ್ದೇನೆ ಎನ್ನುತ್ತಾರೆ. ಬಹುಶಃ ಅದು ಗಂಗಾವತಿ ಶಾಸಕ ಜನಾರ್ಧನ ರೆಡ್ಡಿಗೆ ಗೊತ್ತಿರಬೇಕು ಎಂದು ಸಿಟಿ ಸಿವಿಲ್ ಕೋರ್ಟ್ ಬಳಿ ಸಂಸದ ಶಶಿಕಾಂತ್ ಸೆಂಥಿಲ್ ವಾಗ್ದಾಳಿ ನಡೆಸಿದ್ದಾರೆ. 

   ವಕೀಲ ಸೂರ್ಯ ಮುಕುಂದರಾಜ್ ಜತೆ ಸಿಟಿ ಸಿವಿಲ್ ಕೋರ್ಟ್‌ಗೆ ಆಗಮಿಸಿದ ಸಸಿಕಾಂತ್ ಸಿಂಥೆಲ್ ಅವರು ಶಾಸಕ ಜರ್ನಾದನ ರೆಡ್ಡಿ ವಿರುದ್ಧ ಖಾಸಗಿ ದೂರು ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸೆಪ್ಟೆಂಬರ್​ 11 ರಂದು 42ನೇ ಎಸಿಎಂಎಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ‌ದಲ್ಲಿ ವಿಚಾರಣೆ ನಡೆಯಲಿದೆ.

Recent Articles

spot_img

Related Stories

Share via
Copy link