ರಸ್ತೆ ಇಕ್ಕೆಲಗಳ ಜಂಗಲ್ ತೆರವುಗೊಳಿಸಿ ಬಸ್ ವ್ಯವಸ್ಥೆ ಕಲ್ಪಿಸಿ

ತಿಪಟೂರು :

ತಾಲೂಕಿನ ನೊಣವಿನಕೆರೆ ಹೋಬಳಿ ಮಲ್ಲೇನಹಳ್ಳಿಯಿಂದ ಕರಿಕೆರೆಗೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಜಂಗಲ್ ಬೆಳೆದು ಓಡಾಡಾಲು ಸಾಧ್ಯವಾಗುತ್ತಿಲ್ಲ ಸಂಬಂದಪಟ್ಟವರು ಶೀಘ್ರವಾಗಿ ಜಂಗಲ್ ತೆರವುಗೊಳಿಸಿ ಎಂದುಕರೀಕೆರೆಗಂಗಾಧರ್ ಆಗ್ರಹಿಸಿದ್ದಾರೆ.

ರಸ್ತೆಗಳನ್ನು ನಿರ್ಮಿಸಿದರೆ ಸಾಕು ಎನ್ನುವ ಸಂದರ್ಭಲ್ಲಿ ಸೂಕ್ತವಾದರಸ್ತೆಯನ್ನು ನಿರ್ಮಿಸಿರುವುದು ಸಂತೋಷದ ವಿಷಯಆದರೆರಸ್ತೆ ನಿರ್ಮಿಸಿದ ಮೇಲೆ ಆ ರಸ್ತೆಗೂ ನಮಗೂ ಸಂಬಂದವೇಇಲ್ಲವೆನ್ನುವಂತೆ ಅಧಿಕಾರಿಗಳು ವರ್ತಿಸುತ್ತಿರುವುದರಿಂದ ರಸ್ತೆಗಳ ಇಕ್ಕೆಲಗಳಲ್ಲಿ ಗಿಡಗಂಟಿ, ಪೊದೆಗಳು ಬೆಳೆದು ಓಡಾಡಲು ಹೆದರಿಕೆಯಾಗುವಂತಹ ವಾತಾವರಣ ನಿರ್ಮಾಣವಾಗಿದೆ.

ಇನ್ನೂ ಈ ಭಾಗದ ವಿದ್ಯಾರ್ಥಿಗಳಿಗೆ ರೈತರಿಗೆ, ರೋಗಿಗಳಿಗೆ ತೊಂದರೆಯಾಗುತ್ತಿದೆಎಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳನ್ನು ಕೇಳದಾಗ ಬಂದು ಮಾರ್ಗವನ್ನು ಪರೀಕ್ಷಿಸುತ್ತೇವೆಎಂದು ಹೇಳಿದರು.ಆದರೆ ಬಂದು ಮಾರ್ಗಪರೀಕ್ಷಿಸಿ ಈ ರಸ್ತೆಯಲ್ಲಿ ವಾಹನಗಳು ಸೂಕ್ತವಾಗಿ ತಿರುವುತೆಗೆದುಕೊಳ್ಳಲು ಆಗುವುದಿಲ್ಲವೆಂಬ ಕಾರಣದಜೊತೆಗೆರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳು ಬೆಳೆದು ಬಸ್ ಓಡಾಡಲುಸಾಧ್ಯವಾಗುವುದಿಲ್ಲ, ಇದರಿಂದ ಬಸ್‍ನ ಮೇಲ್ಮೈನಲ್ಲಿ ಗೀರುಗಳು ಬೀಳುತ್ತವೆ ಎನ್ನುವುದರಜೊತೆಗೆರಸ್ತೆಯಲ್ಲಿ ಬಸ್ ಸಂಚರಿಸುವಾಗಯಾವುದಾದರೂ ವಾಹನ ಬಂದರೆ ಸ್ಥಳಾವಕಾಶವಿಲ್ಲದೇ ಅಪಘಾತಗಳಾಗುತ್ತವೆ ಎಂದು ಹೇಳಿ ಬಸ್‍ಬಿಡಲು ಆಗುವುದಿಲ್ಲವೆನ್ನುತ್ತಾರೆ.

ಇದೇ ರೀತಿ ಕಳೆದ ವರ್ಷದಲ್ಲಿಚಿರತೆ ಬಂದಿದೆಎಂದುರೈತರುತಮ್ಮ ಜಮೀನುಗಳಲ್ಲಿ ಪೊದೆಗಳು ಮತ್ತು ಬೇಲಿಗಳನ್ನು ಸ್ವಚ್ಚಮಾಡಿಎಂದುರೈತರಿಗೆ ನೋಟೀಸ್ ನೀಡಿದ್ದರು.ಆದರೆ ಈಗ ಸರ್ಕಾರವೇ ನಿರ್ಮಿಸಿರುವ ರಸ್ತೆಗಳ ಪಕ್ಕದಲ್ಲಿ ಪೊದೆಗಳು ಬೆಳೆದು ನಿಂತಿದ್ದು ಅವುಗಳನ್ನು ಸ್ವಚ್ಚಗೊಳಿಸಲ್ಲವೆಂದರೆ ನಾವು ಸರ್ಕಾರಕ್ಕೆ ನೋಟೀಸ್ ಕಳುಹಿಸಿಬಹುದೇ, ಇಲ್ಲಇದಕ್ಕೆಲ್ಲಾಕಾರಣರಾದ ಅಧಿಕಾರಿಗಳಿಗೆ ನೋಟೀಸ್ ನೀಡಿರಸ್ತೆ ಪಕ್ಕದ ಗಿಡಗಂಟಿಗಳನ್ನು ತೆರವುಗೊಳಿಸುವವರೆಗೂ ಕಾಯಬೇಕೆಎಂಬುದುಗ್ರಾಮಸ್ಥರ ಪ್ರಶ್ನೆಯಾಗಿದೆ.

ಈಗಾಗಲೇ ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಗೆ ವಿಷಯವನ್ನು ತಿಳಿಸಿದ್ದು ಶೀಘ್ರವಾಗಿ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲಮಾಡಿಕೊಡುವದರೊಂದಗೆ ಬಸ್‍ನ ಸಂಪರ್ಕವನ್ನೇಕಾಣದಕರಿಕೆರೆಗ್ರಾಮಕ್ಕೆ ಬಸ್ ಸೌಲಭ್ಯದೊರಕುತ್ತದೆಯೇಎಂಬುದನ್ನುಕಾಯ್ದುನೋಡಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap