ಸಮಾಜಕ್ಕೆ ಕೊಡುಗೆ ನೀಡಿದ ಸಂತ ಸೇವಾಲಾಲ್

ಕೊರಟಗೆರೆ 

     ಸಮಾಜ ಸುಧಾರಕ ಸಂತ ಸೇವಾಲಾಲ್‌ರವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಸೇವಾಲಾಲ್‌ರವರ ಆದರ್ಶ ಹಾಗೂ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುವುದರೊಂದಿಗೆ ಬಂಜಾರ ಸಮುದಾಯ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಗ್ರೇಡ್ 2 ತಹಸೀಲ್ದಾರ್ ನರಸಿಂಹಮೂರ್ತಿ ತಿಳಿಸಿದರು. ಅವರು ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಸೇವಾಲಾಲ್ ಸಂಘದ ವತಿಯಿಂದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂತ ಸೇವಾಲಾಲ್‌ರವರ 284ನೆ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಬಂಜಾರ ಸಮುದಾಯದವರಿಗೆ ಶಾಶ್ವತ ನೆಲೆ ಕಲ್ಪಿಸಿ ಅವರನ್ನು ನಾಗರಿಕ ಸಮಾಜದ ಹತ್ತಿರಕ್ಕೆ ತಂದು ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿಕೊಟ್ಟ್ಟವರು. ಸರ್ಕಾರ ಬಂಜಾರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡುತ್ತಿದೆ. ತಾಂಡಾಗಳ ಸಮಗ್ರ ಅಭಿವೃದ್ದಿಗೆ ಸರ್ಕಾರ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದರು. ಬಂಜಾರ ಸಮುದಾಯದ ತಾಲ್ಲೂಕು ಅಧ್ಯಕ್ಷ ಶ್ರೀರಾಮುಲು ನಾಯಕ್ ಮಾತನಾಡಿ, ಬ್ರಿಟಿಷರ ಆಳ್ವಿಕೆಯಲ್ಲಿ ಬಂಜಾರ ಜನಾಂಗದವರಿಗೆ ಸಾಕಷ್ಟು ಹಿಂಸೆ ನೀಡಿ ಅರಣ್ಯ ಪ್ರದೇಶಗಳಲ್ಲಿ ಅಲೆದಾಡುತ್ತಿದ್ದ ಸಮುದಾಯವನ್ನು ಕೊನೆಯಾಗಿಸಿ ಸ್ವಾತಂತ್ರಾ ನಂತರ ಸಂವಿಧಾನ ಜಾರಿಗೆ ಬಂದ ದಿನಗಳಿಂದ ಸುಭದ್ರ ಜೀವನ ನಡೆಸುವಂತೆ ಮಾಡಿದ ಕೀರ್ತಿ ಸಂತ ಸೇವಾಲಾಲ್‌ರವರದು.

   ಮನೆ, ಜಮೀನು ಎಲ್ಲದರಲ್ಲಿಯೂ ಸರ್ಕಾರ ನಮ್ಮ ಸಮುದಾಯದವರಿಂದ ಕರ ವಸೂಲಿ ಮಾಡುತ್ತಿದೆ, ಆದರೆ ಇಂದಿಗೂ ತಾಂಡವಾಗಿಯೇ ಮುಂದುವರೆಯುತ್ತಿದೆ. ಸಾಕಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ತಿಳಿಸಿದರು. ಪ್ರೊಫೆಷನಲ್ ತಹಸೀಲ್ದಾರ್ ರಂಜಿತ್, ತಾ.ಪಂ. ಇ.ಓ ಡಾ.ದೊಡ್ಡಸಿದ್ದಯ್ಯ, ಸುರೇಶ್, ಡಾ.ಸಿದ್ದನಗೌಡರ್, ರವಿಕುಮಾರ್, ಕೀರ್ತನಾಯಕ್, ಮುರಳಿ, ಮಂಜುಳಾಬಾಯಿ, ಸಂಘದ ಗೌರವಾಧ್ಯಕ್ಷ ಲಕ್ಷö್ಮಣ್‌ನಾಯಕ್, ಕಾರ್ಯದರ್ಶಿ ಬಿ.ಶಂಕರ್, ಖಜಾಂಚಿ ಕಾಳಿಚರಣ್‌ನಾಯಕ್, ಸಂಘಟನಾ ಕಾರ್ಯದರ್ಶಿ ವಿಜಯ್‌ಕುಮಾರ್, ಬಾಬುನಾಯಕ್, ಕೃಷ್ಣನಾಯಕ್, ಲಂಕೇಶ್, ಗೋವಿಂದನಾಯಕ್ ಸೇರಿದಂತೆ ಸಮುದಾಯದ ಮುಖಂಡರು ಸೇರಿದಂತೆ ಇಲಾಖಾ ಅಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap