ಪ್ರಗತಿ ಟಿವಿಗೆ ಏಳುವರ್ಷಗಳ ಸಂಭ್ರಮ 

ತುಮಕೂರು :    

ಕಳೆದ ಏಳು ವರ್ಷಗಳಿಂದ ತುಮಕೂರು ಜನರು ಮಾತ್ರವಲ್ಲದೆ ಹಲವಾರು ಜಿಲ್ಲೆಗಳ ಜನರ ಜೀವನಾಡಿಯಾಗಿ ಬೆಳೆಯುತ್ತಿರುವ ಪ್ರಗತಿ ಟಿವಿಯು ಸುದ್ದಿಯ ಜೊತೆಗೆ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ನೀಡುತ್ತ ರಂಜಿಸುತ್ತಿದೆ.

ಪ್ರಗತಿ ಟಿವಿಯ ಎಲ್ಲಾ ಕಾರ್ಯಕ್ರಮಗಳು, ಸುದ್ದಿಗಳು ಜನಸಾಮಾನ್ಯರಿಗೆ ಮತ್ತೂ ಹತ್ತಿರವಾಗುವ ಸಲುವಾಗಿ 2015ರ ಮಾರ್ಚ್ ನಲ್ಲಿ ?ಪ್ರಗತಿ ಟಿವಿ ಅಫಿಶಿಯಲ್? ಎಂಬ ಯುಟ್ಯೂಬ್ ಚಾನೆಲ್ ಆರಂಭಮಾಡಿದ್ದು, ಇಲ್ಲಿಯವರೆಗೆ ಇದರಲ್ಲಿನ ಸಮಸ್ಯಾತ್ಮಕ ಸುದ್ದಿಗಳನ್ನು, ವಿಶೇಷ ವರದಿಗಳನ್ನು,

ರಿಯಾಲಿಟಿ ಶೋಗಳಾದ ರಾಗಮಂದಾರ, ಮಾಸ್ಟರ್ ಮೈಂಡ್, ಪ್ರೆಟಿ ವುಮೆನ್, ಪುಟಾಣಿ ಕಲರವ, ಮಾಹಿತಿ ಕಾರ್ಯಕ್ರಮಗಳಾದ ರೈತ ಪ್ರಗತಿ, ನಾವು ನಮ್ಮ ಕಾನೂನು, ಮನರಂಜನಾ ಕಾರ್ಯಕ್ರಮಗಳಾದ ವೀಣಾ ವಾದನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು 48,17,192 ಜನರು ವೀಕ್ಷಣೆಯನ್ನು ಮಾಡಿದ್ದಾರೆ.

ಅದೇ ರೀತಿಯಾಗಿ ಡಿಸೆಂಬರ್ 2021 ರಂದು ಪ್ರಗತಿ ಟಿವಿಯ ?ಪ್ರಗತಿ ಟಿವಿ ಅಫಿಶಿಯಲ್ ಯುಟ್ಯೂಬ್ ಚಾನೆಲ್? ಒಂದು ಲಕ್ಷಕ್ಕಿಂತ ಅಧಿಕ ಸಬ್ಸ್ಕೈಬರ್ ಗಳನ್ನು ಹೊಂದಿದ್ದು, ಇದರ ಸಲುವಾಗಿ ಯೂಟ್ಯೂಬ್ ವತಿಯಿಂದ ಸಿಲ್ವರ್ ಬಟನ್ ಉಡುಗೊರೆಯಾಗಿ ನೀಡಲಾಗಿದೆ. ಇದು ಪ್ರಗತಿ ಟಿವಿ ಮತ್ತಷ್ಟು ಅಭಿವೃದ್ಧಿ ಪತ್ರಿಕೋದ್ಯಮದ ಕಡೆ ಮುಖ ಮಾಡುವಂತೆ ಮಾಡಿದ್ದು, ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿ ಜವಾಬ್ದಾರಿಯನ್ನು ಹೆಚ್ಚಿಸಿದೆ.

ಸಿಇಒ ಶಿಲ್ಪಶ್ರೀ ಮತ್ತು ಸಂಪಾದಕರಾದ ಎಸ್.ನಾಗಣ್ಣ ರವರ ಮಾರ್ಗದರ್ಶನದಲ್ಲಿ ಪ್ರಗತಿ ಟಿವಿ ಸಾಮಾನ್ಯ ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡದೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ, ಸಮಸ್ಯಾತ್ಮಕ ಸುದ್ದಿಗಳನ್ನು ಬಿತ್ತರಿಸುತ್ತಾ ಎತ್ತರಕ್ಕೆ ಬೆಳೆಯುತ್ತಿರುವ ವಾಹಿನಿಯಾಗಿದೆ. ಇದೆಲ್ಲದರ ಶ್ರೇಯ ಮುಖ್ಯವಾಗಿ ಪ್ರಗತಿ ಟಿವಿ ವೀಕ್ಷಕರಿಗೆ, ಜಾಹಿರಾತುದಾರರಿಗೆ, ಕೇಬಲ್ ಆಪರೇಟರ್ ಗಳಿಗೆ ಸಲ್ಲುತ್ತದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link