ಕಾರಿನೊಳಗೆ 9ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ

ಒಡಿಶಾ 

  ನೀನು ಎಲ್ಲಿಗೆ ಹೋಗ್ಬೇಕು, ಅಲ್ಲಿಗೆ ಬಿಡ್ತೀನಿ ಬಾ ಎಂದು 9ನೇ ತರಗತಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು, ಕಾರೊಳಗೆ ಆಕೆ ಮೇಲಕೆ ಅತ್ಯಾಚಾರವೆಸಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಶುಕ್ರವಾರ ಸಂಜೆ ಬಾಲಕಿ ತನ್ನ ಅಕ್ಕನ ಮನೆಗೆ ಹೋಗಿ ನಂತರ ಗಣೇಶ ಪೂಜೆಯ ವಿಸರ್ಜನಾ ಮೆರವಣಿಗೆಯನ್ನು ವೀಕ್ಷಿಸಲು ದರಿಂಗ್‌ಬಾಡಿ ಮಾರುಕಟ್ಟೆಗೆ ಹೋಗಿ ಮನೆಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ.

   ಆಕೆ ಮನೆಗೆ ವಾಪಸ್ ಹೊರಟಿದ್ದಳು, ಅಪರಿಚಿತ ವಾಹನವೊಂದು ಬಂದು ಪಕ್ಕಕ್ಕೆ ನಿಂತಿತು, ಅದರಲ್ಲಿದ್ದ ವ್ಯಕ್ತಿ ನೀನು ಎಲ್ಲಿಗೆ ಹೋಗಬೇಕು, ಅಲ್ಲಿಗೆ ಬಿಡ್ತೀನಿ ಬಾ ಎಂದು ಕರೆದೊಯ್ದು, ಅತ್ಯಾಚಾರವೆಸಗಿದ್ದಾನೆ ಎಂದು ದರಿಂಗ್‌ಬಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರನ್ನು ಉಲ್ಲೇಖಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆ ನಡೆಸುವ ಮೂಲಕ ತನಿಖೆ ಆರಂಭಿಸಿದ್ದಾರೆ.

   ಆರೋಪಿ ವಿವಾಹಿತನಾಗಿದ್ದು, ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಕಂಧಮಲ್ ಎಸ್ಪಿ ಹರೀಶ ಬಿ.ಸಿ. ಈ ವಿಷಯ ತನಿಖೆ ಹಂತದಲ್ಲಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವ ಎಂದು ಹೇಳಿದರು. ಹೀಗೆ ಯಾವ ಹೆಣ್ಣುಮಕ್ಕಳು ಕೂಡ ಅಪರಿಚಿತ ವಾಹನ ಹತ್ತುವ ಮುನ್ನ ತುಂಬಾ ಎಚ್ಚರಿಕೆಯಿಂದಿರಬೇಕು, ಯಾರೋ ಲಿಫ್ಟ್​ ಕೊಡುತ್ತೇನೆ ಎಂದು ಹೇಳಿದರೆ ಒಪ್ಪಿ ಹತ್ತಬಾರದು. 

   ಹುಟ್ಟುಹಬ್ಬದಂದೇ 20 ವರ್ಷದ ಯುವತಿ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ದಕ್ಷಿಣ ಹೊರವಲಯದಲ್ಲಿರುವ ರೀಜೆಂಟ್ ಪಾರ್ಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.ಅಪರಾಧದ ನಂತರ ನಾಪತ್ತೆಯಾಗಿದ್ದ ಇಬ್ಬರು ಆರೋಪಿಗಳನ್ನು ಚಂದನ್ ಮಲಿಕ್ ಮತ್ತು ದೀಪ್ ಎಂದು ಗುರುತಿಸಲಾಗಿದೆ. ದೀಪ್ ಸರ್ಕಾರಿ ಉದ್ಯೋಗಿ ಎಂದು ವರದಿಯಾಗಿದೆ.

   ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಯುವತಿಗೆ ಚಂದನ್​​ ಜತೆ ಸ್ನೇಹವಿತ್ತು. ಹುಟ್ಟು ಹಬ್ಬದ ಪಾರ್ಟಿ ಮಾಡುವ ನೆಪದಲ್ಲಿ ಚಂದನ್ ದೀಪ್ ಮನೆಗೆ ಆಕೆಯನ್ನು ಕರೆದೊಯ್ದಿದ್ದ. ಅಲ್ಲಿ ಅವರು ಊಟ ಮಾಡಿದ್ದರು.

 

Recent Articles

spot_img

Related Stories

Share via
Copy link