ಚೆನ್ನೈ:
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನೂತನ ದಾಖಲೆ 10 ರನ್ ನೀಡಿ ಎಂಟು ವಿಕೆಟುಗಳನ್ನು ಕಬಳಿಸಿರುವ ಜಾರ್ಖಂಡ್ ಸ್ಪಿನ್ನರ್ ಶಹಬಾಜ್ ನದೀಂ .ಚೆನ್ನೈನ ಟಿಐ ಮುರುಗಪ್ಪ ಮೈದಾನದಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್ ಶಹಬಾಜ್ ನದೀಂ ಚುರುಕಾದ ಬೌಲಿಂಗ್ ಮಾಡಿದ್ದಾರೆ .
MUST WATCH: Shahbaz Nadeem's record breaking spell!
The left-arm spinner picked 8/10 in the #VijayHazareTrophy and set a List A record.— BCCI Domestic (@BCCIdomestic) September 20, 2018
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಾಖಲಾಗಿರುವ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ. ಈ ಮೂಲಕ ದಿಲ್ಲಿ ಎಡಗೈ ಸ್ಪಿನ್ನರ್ ರಾಹುಲ್ ಸಾಂಘ್ವಿ ಅವರ ಎರಡು ದಶಕಗಳಷ್ಟು ಹಿಂದಿನ ದಾಖಲೆಯನ್ನು ಅಳಿಸಿಹಾಕಿದ್ದಾರೆ.
ನದೀಂ ಕೈಚಳಕಕ್ಕೆ ತತ್ತರಿಸಿದ ರಾಜಸ್ತಾನ 28.3 ಓವರ್‌ಗಳಲ್ಲೇ 73 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಇದೇ ಪಂದ್ಯದಲ್ಲಿ ನದೀಂ ಹ್ಯಾಟ್ರಿಕ್ ಸಾಧನೆ ಮಾಡಿರುವುದು ಮತ್ತಷ್ಟು ಗಮನಾರ್ಹವೆನಿಸಿದೆ. ಬಳಿಕ ಗುರಿ ಬೆನ್ನಟ್ಟಿದ ಜಾರ್ಖಂಡ್ 14.3 ಓವರ್‌ಗಳಲ್ಲೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ