ನೀರಜ್‌-ಅರ್ಷದ್ ಮಧ್ಯೆಯೂ ಶೇಕ್‌ಹ್ಯಾಂಡ್‌ ವಾರ್‌ ನಡೆಯುತ್ತಾ?

ಟೋಕಿಯೊ:

      ದುಬೈನಲ್ಲಿ ನಡೆದ ಏಷ್ಯಾ ಕಪ್ ಟಿ20ಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಹ್ಯಾಂಡ್‌ಶೇಕ್ ವಿವಾದ ತೀವ್ರಗೊಂಡಿದ್ದರೂ, ಈ ಬಾರಿ ಟೋಕಿಯೊದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮತ್ತೊಂದು ಹಣಾಹಣಿ ನಡೆಯಲು ಸಜ್ಜಾಗಿದೆ. ಬುಧವಾರ ಮತ್ತು ಗುರುವಾರ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಜಾವೆಲಿನ್‌ನಲ್ಲಿ ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ, ಒಲಿಂಪಿಕ್ ಚಾಂಪಿಯನ್, ಪಾಕಿಸ್ತಾನ ಅರ್ಷದ್ ನದೀಮ್ ಅವರನ್ನು ಎದುರಿಸಲಿದ್ದಾರೆ. ಈ ಟೂರ್ನಿಯಲ್ಲೂ ನೋ ಹ್ಯಾಂಡ್‌ಶೇಕ್ ಸಮರ ಮುಂದುವರಿಯುವ ಸಾಧ್ಯತೆ ಇದೆ.

     ನೀರಜ್ ಚೋಪ್ರಾ ಅವರು ಜೂಲಿಯನ್ ವೆಬರ್  ಮತ್ತು ಒಲಿಂಪಿಕ್ ಚಾಂಪಿಯನ್ ಅರ್ಷದ್ ನದೀಮ್  ವಿರುದ್ಧ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನೀರಜ್‌ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಜಯಿಸಿದ್ದರು.

    ಇದೇ ವರ್ಷ ಬೆಂಗಳೂರಿನಲ್ಲಿ ನಡೆದಿದ್ದ ಎನ್‌ಸಿ ಕ್ಲಾಸಿಕ್‌ ಜಾವೆಲಿನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ನೀರಜ್‌ ಚೋಪ್ರಾ ಅವರು ಅರ್ಷದ್ ನದೀಮ್‌ಗೆ ಆಹ್ವಾನ ನೀಡಿ ಭಾರೀ ಟೀಕೆಗೆ ಗುರಿಯಾಗಿದ್ದರು. ಇದೀಗ ಏಷ್ಯಾಕಪ್‌ನಲ್ಲಿ ಭಾರತೀಯ ಆಟಗಾರರು ಪಂದ್ಯದ ವೇಳೆ ಪಾಕಿಸ್ತಾನದ ಯಾವುದೇ ಆಟಗಾರರ ಜತೆ ಸಂವಹನ ನಡೆಸದೇ ಉಗ್ರ ಪೋಷಕ ರಾಷ್ಟ್ರ ದ ವಿರುದ್ಧ ಭಾರತೀಯರ ಆಕ್ರೋಶವನ್ನು ತೋರ್ಪಡಿಸಿದ್ದಾರೆ. ಮಾತ್ರವಲ್ಲದೆ ಹಸ್ತಲಾಘವ ಮಾಡದೆ ತಮ್ಮಷ್ಟಕ್ಕೆ ತಾವು ಪೆವಿಲಿಯನ್‌ನತ್ತ ನಡೆದಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

   ಹೀಗಾಗಿ ನೀರಜ್‌ ಚೋಪ್ರಾ ಅವರು ಕೂಡ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ ಜಾವೆಲಿನ್‌ ಸ್ಪರ್ಧೆಯ ವೇಳೆ ಅರ್ಷದ್ ನದೀಮ್ ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಇದೆ.

Recent Articles

spot_img

Related Stories

Share via
Copy link