ದೇಶದ ರಾಜಕೀಯ ವ್ಯವಸ್ಥೆ ಬುಡಮೇಲು

ಕೊರಟಗೆರೆ:

   ಕೊರಟಗೆರೆ ಪಟ್ಟಣದಲ್ಲಿ ಜನತಾ ಸಂಗಮಾ ಸಮಾವೇಶ ಉದ್ಘಾಟಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

    ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ್ ಮತ್ತು ಬಿಜೆಪಿಯಿಂದ ರಾಜಕೀಯ ವ್ಯವಸ್ಥೆಯೇ ಹಾಳಾಗಿದೆ. ಪ್ರಸ್ತುತ ಭಾರತ ದೇಶದ ರಾಜಕೀಯ ವ್ಯವಸ್ಥೆಯೇ ಬದಲಾಗಿದೆ. ದೆಹಲಿ ಮಟ್ಟದ ದೊಡ್ಡ ನಾಯಕರು ಸರಿಪಡಿಸುವ ತಿರ್ಮಾನ ಮಾಡಬೇಕು. ನಾನು ಯಾರ ಬಗ್ಗೆಯು ವೈಯಕ್ತಿಕವಾಗಿ ಮಾತನಾಡಲು ಇಷ್ಟ ಪಡೋದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದರು.

ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ತುಮಕೂರು ವಿಧಾನ ಪರಿಷತ್ ಚುನಾವಣೆ ಪ್ರಯುಕ್ತ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಜಾತ್ಯಾತೀತ ಜನತಾದಳ ಪಕ್ಷದಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಜನತಾ ಸಂಗಮ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ತುಮಕೂರು ಜಿಲ್ಲೆಯಲ್ಲಿ ಯುವಜನತೆ ನನ್ನ ಕೈಬಿಟ್ಟಿದ್ದಾರೆ ಅವರೇ ನನ್ನ ಎತ್ತಿಕೊಂಡು ಬರ್ತಾರೆ. ನಮ್ಮನ್ನು ತೆಗಿಯಬೇಕು ಅನ್ನುವ ಕೆಲವರ ಅಭಿಪ್ರಾಯ ಸುಳ್ಳಾಗಲಿದೆ. ತುಮಕೂರು ವಿಧಾನ ಪರಿಷತ್ ಜೆಡಿಎಸ್ ಅಭ್ಯರ್ಥಿ ಅನಿಲ್‍ಕುಮಾರ್ ಗೇಲ್ತಾರೆ. ಜನಸೇವೆ ಮಾಡುವ ಉದ್ದೇಶದಿಂದ ಸರಕಾರಿ ಕೆಲಸಕ್ಕೆ ರಾಜಿನಾಮೆ ನೀಡಿ ಬಂದಿದ್ದಾರೆ. ತುಮಕೂರು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಅನಿಲ್ ಪರವಾಗಿ ಮತ ನೀರಿ ಅಂತಾ ಕೇಳ್ತಿನಿ ಎಂದು ತಿಳಿಸಿದರು.

ಕೊರಟಗೆರೆ ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿ ಮಾಜಿ ಪ್ರಧಾನಿ ದೇವಗೌಡ್ರು ಮತ್ತು ಮಾಜಿ ಸಿಎಂ ಕುಮಾರಣ್ಣ ನಮ್ಮ ನಾಯಕರು, ಇವರೇ ನನ್ನ ರಾಜಕೀಯ ಶಕ್ತಿ. ತಾಕೀತು ಮಾಡುವ ಯಾವ ನಾಯಕರ ಮುಲಾಜಿನಲ್ಲಿ ನಾನಿಲ್ಲ. ಗ್ರಾಪಂಗಳಿಗೆ ಮೀಸಲಾತಿ ನೀಡಿದ ಕೀರ್ತಿ ನಮ್ಮ ಮಾಜಿ ಪ್ರಧಾನಿ. ತುಮಕೂರಿನ ಎಂಎಲ್‍ಸಿ ಚುನಾವಣೆಯ ಫಲಿತಾಂಶ ಮುಂದಿನ ತಾಪಂ, ಜಿಪಂ ಮತ್ತು ವಿಧಾನಸಭೆಗೆ ದಿಕ್ಸೂಕಿ ಆಗಲಿದೆ ಎಂದು ಹೇಳಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಮಾತನಾಡಿ ಕೊರಟಗೆರೆ ಕ್ಷೇತ್ರ ಚೆನ್ನಿಗಪ್ಪ ಕುಟುಂಬದ ರಾಜಕೀಯ ಜನ್ಮ ಭೂಮಿ. ದೇವೇಗೌಡರ ಸೋಲನ್ನು ಮರೆಸಲು ಎಂಎಲ್‍ಸಿ ಅಭ್ಯರ್ಥಿಗನ್ನು ನಾವು ಗೆಲ್ಲಿಸಬೇಕಿದೆ. ಕಾಂಗ್ರೇಸ್ ಅಭ್ಯರ್ಥಿ ರಾಮರಾಜ್ ಚೆಡ್ಡಿ, ಸೀರೆ, ಗಡಿಯಾರ ಕೋಡ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಬಿಜೆಪಿಯ ಇಬ್ಬರು ಸಚಿವರಿದ್ರು ಹೊರಗಿನ ಅಭ್ಯರ್ಥಿಯನ್ನು ಕರೆದುಕೊಂಡು ಬಂದಿದ್ದಾರೆ. ತುಮಕೂರಿನಲ್ಲಿ ಹುಟ್ಟಿದ ಗಂಡಸು ಇವರಿಗೆ ಸಿಗಲಿಲ್ವಾ ಎಂದು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಮಧುಗಿರಿ ಶಾಸಕ ವೀರಭದ್ರಯ್ಯ, ಪಾವಗಡ ಮಾಜಿ ಶಾಸಕ ತಿಮ್ಮರಾಯಪ್ಪ, ಎಂಎಲ್‍ಸಿ ತಿಪ್ಪೇಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜೀನಪ್ಪ, ಕಾರ್ಯದರ್ಶಿ ಮಹಾಲಿಂಗಪ್ಪ, ಗೌರವಧ್ಯಕ್ಷ ನರಸಿಂಹರಾಜು, ಯುವಧ್ಯಕ್ಷ ವೆಂಕಟೇಶ್, ಕಾರ್ಯದಶಿ ಲಕ್ಷ್ಮಣ್, ಜಿಪಂ ಮಾಜಿ ಸದಸ್ಯ ಶಿವರಾಮಯ್ಯ, ಮಾಜಿ ಜಿ.ಪಂ ಅಧ್ಯಕ್ಷೆ ಕುಸುಮಾ ಜಗನ್ನಾಥ್ ,ಪಪಂ ಅಧ್ಯಕ್ಷ ಮಂಜುಳ ಸತ್ಯನಾರಾಯಣ, ಉಪಾಧ್ಯಕ್ಷ ಭಾರತಿಸಿದ್ದಮಲ್ಲಪ್ಪ, ಎಲ್ಲಾ ಸಾಯಿ ಸಮಿತಿ ಅಧ್ಯಕ್ಷರಾದಸ್ಥಾಯಿ ಸಮಿತಿ ಅಧ್ಯಕ್ಷ ಕರವೇನಟರಾಜು, ರಮೇಶ್ ಮಾಜಿ ತಾಪಂ ಸದಸ್ಯ ಎಲ್ ವಿ ಪ್ರಕಾಶ್, ಸುದಾ ಹನುಮಂತರಾಯಪ್ಪ , ಮಾಜಿ ಗ್ರಾಪಂ ಅಧ್ಯಕ್ಷ ಮಂಜುನಾಥ್ , ವಿಕೆ ವೀರಕ್ಯಾತರಾಯ , ಸೇರಿದಂತೆ ಇತರರು ಇದ್ದರು.

ಭಾರತ ದೇಶದ ಬಹುದೊಡ್ಡ ರೈತನಾಯಕ ನಮ್ಮ ಹೆಮ್ಮೆಯ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ. ಜೆಡಿಎಸ್‍ನಿಂದ ನನ್ನ ರಾಜಕೀಯ ಜೀವನ ಪ್ರಾರಂಭ ಜೆಡಿಎಸ್ ಇಂದಲೇ ನನ್ನ ರಾಜಕೀಯ ನಿವೃತ್ತಿ ಆಗಲಿದೆ. ಬಡಜನರ ಸೇವೆಗಾಗಿ ಸರಕಾರಿ ಉದ್ಯೋಗಕ್ಕೆ ರಾಜಿನಾಮೆ ನೀಡಿ ರಾಜಕೀಯಕ್ಕೆ ಬಂದಿದ್ದೇನೆ. ನಿಮ್ಮೇಲ್ಲರ ಆರ್ಶಿವಾದ ಸದಾ ನನ್ನ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.

ಅನಿಲ್‍ಕುಮಾರ್. ಎಂಎಲ್‍ಸಿ ಅಭ್ಯರ್ಥಿ. ಕೊರಟಗೆರೆ

ಕರ್ನಾಟಕದ ಮಣ್ಣು ಮತ್ತು ರೈತರ ಧ್ವನಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು. ಹಾಸನದಲ್ಲಿ ಸೋತಾಗ ಮಾಜಿ ಪ್ರಧಾನಿ ಆ ಕಡೆ ಹೋಗಲಿಲ್ಲ. ಆದರೇ ತುಮಕೂರಿನಲ್ಲಿ ಸೋತ ನಂತರವು ಬಂದಿದ್ದಾರೆ. ತುಮಕೂರಿನ ಜನರ ಪ್ರೀತಿಗೆ ವಿಶ್ವಾಸಕ್ಕೆ ಅವರು ಈಗ ಮತ್ತೇ ಬಂದಿದ್ದಾರೆ. ತುಮಕೂರಿನ ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿ ಗೆಲುವು ರಾಜ್ಯಕ್ಕೆ ಸಂದೇಶ ನೀಡಲಿದೆ.

ವೈ.ಎಸ್.ವಿ.ದತ್ತಾ. ಮಾಜಿ ಶಾಸಕ. ಕಡೂರು ಕ್ಷೇತ್ರ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap