ಶಕ್ತಿ ಯೋಜನೆ : ಕೋಟ್ಯಂತರ ರೂ. ನಷ್ಟದಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ,

ಬೆಂಗಳೂರು

     ಕೆಎಸ್​ಆರ್​ಟಿಸಿ , ಬಿಎಂಟಿಸಿ , ಕೆಕೆಆರ್​ಟಿಸಿ ಮತ್ತು ಎನ್​ಡಬ್ಲೂಕೆಆರ್​ಸಿ ನಾಲ್ಕೂ ನಿಗಮಗಳು ಕರ್ನಾಟಕದ ಜನರ ಜೀವನಾಡಿಯಾಗಿವೆ. ನಾಲ್ಕೂ ನಿಗಮಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಿದ್ದಾರೆ. ನಾಲ್ಕೂ ಸಾರಿಗೆ ನಿಗಮಗಳಿಗೆ ಹರಿದು ಬರುತ್ತಿರುವ ಆದಾಯವೆಷ್ಟು? ನಿಗಮಗಳು ಲಾಭದಲ್ಲಿಯವೆಯೇ ಅಥವಾ ನಷ್ಟದಲ್ಲಿವೆಯಾ? ಎಂಬ ಪ್ರಶ್ನೆಗಳು ಜನರಲ್ಲಿವೆ. ಇದೇ ಪ್ರಶ್ನೆಗಳನ್ನು ವಿಧಾನ ಪರಿಷತ್​​ನಲ್ಲಿ ಎಂಎಲ್​ಸಿ ಕೇಶವ ಪ್ರಸಾದ್ ಕೇಳಿದ್ದಾರೆ.

   ಸರ್ಕಾರದಿಂದ ಶಕ್ತಿ ಯೋಜನೆಯ ಪೂರ್ತಿ ಮೊತ್ತ ಪಡೆಯಬೇಕಿದೆ. ಪ್ರಪಂಚದ ಯಾವುದೇ ಭಾಗದಲ್ಲಿಯೂ ಸಾರಿಗೆ ನಿಗಮ ನಷ್ಟದಲ್ಲಿದೆ. ಶೇ 40 ರಷ್ಟು ಬಸ್​ಗಳು ನಷ್ಟದಲ್ಲೇ ಓಡುತ್ತಿವೆ. ಶೇ 30ರಷ್ಟು ಬಸ್​ಗಳು ಯಾವುದೇ ಲಾಭ-ನಷ್ಟ ಇಲ್ಲದೆ ಓಡುತ್ತಿವೆ. ಶೇ 30ರಷ್ಟು ಬಸ್​ಗಳು ಮಾತ್ರ ಲಾಭದಲ್ಲಿವೆ. ಸಾರಿಗೆ ಇಲಾಖೆಯಲ್ಲಿ ಪ್ರತಿದಿನ 9.45 ಕೋಟಿ ರೂ. ಖರ್ಚು ಇದೆ. ಏನಾದರೂ ದೂರುಗಳಿದ್ದರೆ ತಿಳಿಸಿ ಸರಿಪಡಿಸೋಣ ಎಂದು ಪರಿಷತ್​ಗೆ ಹೇಳಿದರು.

Recent Articles

spot_img

Related Stories

Share via
Copy link