ಶಕುನಿ ತಿಮ್ಮನಹಳ್ಳಿ ಗ್ರಾಮದ ಯುವಕನ ಡಾಕ್ಟರೇಟ್ ಸಾಧನೆ ….!

ಕೊರಟಗೆರೆ:-

     ಡಾ. ಕಾಳಿಂಗನಾಯಕ್ ಅವರು ಕೊರಟಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಮತ್ತು ತುಮಕೂರು ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಪ್ರಸ್ತುತವಾಗಿ ಇವರು ಮಹಾರಾಷ್ಟ್ರದ ಮುಂಬೈಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ ರಸಾಯನ ಶಾಸ್ತ್ರ ವಿಭಾಗದಲ್ಲಿ ” ಡಿಸ್ಕವರಿ ಆಫ್ ಆಂಟಿಮಲೇರಿಯಲ್ಸ್ ಬೇಸ್ಡ್ ಆನ್ ನ್ಯುಕ್ಲಿಯೋಸೈಡ್ ಕಾಂಜುಗೇಟ್ಸ್ ” ಎಂಬ ವಿಷಯದಲ್ಲಿ ಪೋಸ್ಟ್ – ಡಕ್ಟೋರಲ್ ಸಂಶೋಧನಾ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ,

    ಪಿ ಎಚ್ ಡಿ ಪೂರ್ಣಗೊಂಡು ಡಾಕ್ಟರೇಟ್ ಪದವಿ ಪಡೆದು ಕಾಳಿಂಗ ನಾಯಕ್ ಈಗ ಡಾ. ಕಾಳಿಂಗ ನಾಯಕ್ ಎಂದು ನಮೂದಿಸುವ ಮೂಲಕ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಶಕುನಿ ತಿಮ್ಮನಹಳ್ಳಿ (ಲಂಬಾಣಿ ತಾಂಡ ) ಗ್ರಾಮದ ಯುವಕನ ಸಾಧನೆ ಡಾಕ್ಟರೇಟ್ ಪಡೆಯುವ ಮೂಲಕ ಗೌರವಕ್ಕೆ ಬಾಜಿನರಾಗಿ ಇಡೀ ಗ್ರಾಮ ಡಾ. ಕಾಳಿಂಗ ನಾಯಕ್ ಅವರನ್ನು ಹಾಡಿ ಹೊಗಳಿದ್ದಾರೆ ಜೊತೆಗೆ ಈತನ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Recent Articles

spot_img

Related Stories

Share via
Copy link