ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು: ಡಾ. ಶಾಲಿನಿ ರಜನೀಶ್

ಬೆಂಗಳೂರು

    ಶ್ರೀ ಕೃಷ್ಣದೇವರಾಯ ಏಜುಕೇಷನಲ್ ಟ್ರಸ್ಟ್, ಸರ್.ಎಂ.ವಿಶ್ವೇಶ್ವರಯ್ಯ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಡಾ. ಶಾಲಿನಿ ರಜನೀಶ್ ರವರು ಮಾತನಾಡಿದ ವಿದ್ಯಾರ್ಥಿಗಳು ತಮ್ಮ ವೃತ್ತಿ ಬದುಕಿನ ಪ್ರತಿಯೊಂದು ಹಂತದಲ್ಲಿ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಧ್ಯೇಯವಾಗಬೇಕು ಎಂದು ಕರೆ ನೀಡಿದ್ದಾರೆ.

ಶ್ರೀ ಕೃಷ್ಣದೇವರಾಯ ಶಿಕ್ಷಣ ಸಂಸ್ಥೆಯ 2023 ನೇ ಸಾಲಿನ ಮೊದಲ ವರ್ಷದ ತರಗತಿಗಳ ಆರಂಭೋತ್ಸವದಲ್ಲಿ ಮಾತನಾಡಿದ ಅವರು, ಎಂದೆAದಿಗೂ ಮಾನವೀಯತೆಯನ್ನು ಬಿಡಬಾರದು. ವೃತ್ತಿಯಲ್ಲಿ ಮಾನವೀಯ ಮೌಲ್ಯಗಳ ಜೊತೆಗೆ ಪ್ರಾಯೋಗಿಕವಾಗಿ ಜ್ಞಾನ ಬಳಸಿಕೊಳ್ಳಬೇಕು. ಕರ್ನಾಟಕ ಹಲವು ವಲಯಗಳಲ್ಲಿ ಮಂಚೂಣಿಯಲ್ಲಿದ್ದು, ಮಾಹಿತಿ ತಂತ್ರಜ್ಞಾನ, ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಅಗ್ರ ಸ್ಥಾನದಲ್ಲಿದೆ. ಸರ್ಕಾರ ಮತ್ತು ಖಾಸಗಿ ಶಾಲೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ವಿದ್ಯಾರ್ಥಿ ಸಮುದಾಯದಲ್ಲಿ ಉನ್ನತ ಆಲೋಚನೆಗಳಿದ್ದು, ಇವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ದೇಶವನ್ನು ಸೂಪರ್ ಪವರ್ ರಾಷ್ಟವನ್ನಾಗಿ ರೂಪಿಸಬೇಕು ಎಂದರು.

ವಿದ್ಯಾರ್ಥಿ ಸಮುದಾಯ ಹೊಸ ಕೋರ್ಸ್ ಗಳಿಗೆ ಪ್ರವೇಶ ಪಡೆದಿದ್ದು, ಹೊಸ ಯುಗ ಆರಂಭವಾಗುತ್ತಿದೆ. ಪದವಿ ನಿಮ್ಮ ಅಂತಿಮ ಗುರಿಯಾಗಬಾರದು. ಇದೀಗ ಶೇ 40 ರಷ್ಟು ವಿದ್ಯಾರ್ಥಿಗಳು ವೃತ್ತಿ ಶಿಕ್ಷಣ ವಲಯದಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಪ್ರತಿಯೊಬ್ಬರೂ ಅಸಾಧಾರಣ ಶಕ್ತಿ ಹೊಂದಿದ್ದು, ಒಬ್ಬೊಬ್ಬರು ಒಂದೊAದು ವಲಯದಲ್ಲಿ ವಿಶೇಷತೆ ಸಾಧಿಸುತ್ತಾರೆ. ಹಾಗೆಂದು ನಮ್ಮ ಸಂಸ್ಕöÈತಿಯ ಬೇರುಗಳನ್ನು ಬಿಡಬಾರದು. ಸಾಂಸ್ಕöÈತಿಕ ಮೌಲ್ಯಗಳ ಬಗ್ಗೆ ಪ್ರತಿಯೊಬ್ಬರಿಗೂ ಕಾಲಾನಂತರದಲ್ಲಿ ಅರಿವು ಉಂಟಾಗುತ್ತದೆ ಎಂದರು.

ಪರಿಸರ ಸಂರಕ್ಷಣೆ ದೃಷ್ಟಿಯಿಂದ ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಬಗ್ಗೆ ತಿಳಿದುಕೊಳ್ಳಬೇಕು. ಭೂಮಿಯ ಮೇಲಿನ ಮಾಲೀನ್ಯ ನಿಯಂತ್ರಿಸಲು ಪ್ರತಿಯೊಬ್ಬರೂ ಕೊಡುಗೆ ನೀಡಬೇಕು. ವಿದ್ಯಾರ್ಥಿ ಜೀವನದಲ್ಲಿ ಎನ್.ಎಸ್.ಎಸ್ ಕಾರ್ಯಕ್ರಮ ಈ ಕುರಿತು ತಿಳಿವಳಿಕೆ ನೀಡುತ್ತಿದ್ದು, ನಮ್ಮ ಕೆರೆಗಳು, ಜಲ ಮತ್ತು ಭೂಮಿ ಮಾಲೀನ್ಯವಾಗದಂತೆ ನೋಡಿಕೊಳ್ಳಬೇಕು ಎಂದು ಡಾ. ಶಾಲಿ ರಜನೀಶ್ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣದೇವರಾಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಕೆ.ವಿ. ಶೇಖರ್ ರಾಜು, ಕಾರ್ಯದರ್ಶಿ ಕೆ. ಶ್ಯಾಮ್ ರಾಜು, ಖಜಾಂಚಿ ವೆಂಕಟ ರಮಣ ರಾಜು, ಪ್ರಾಂಶುಪಾಲರಾದ ಫ್ರೊ. ಎಸ್.ಜಿ. ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap