ಶತಮಾನದ ಐವರು ಕ್ರಿಕೆಟಿಗರಲ್ಲೊಬ್ಬರಾಗಿದ್ದ ಶೇನ್ ವಾರ್ನ್ ಆಸ್ತಿ ಎಷ್ಟು ಗೊತ್ತಾ..?

ಆಸ್ಟ್ರೇಲಿ:

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್‌ ವಾರ್ನ್‌ ಅವರ ಸಾವು ಕ್ರಿಕೆಟ್‌ ಲೋಕವನ್ನು ಆಘಾತಕ್ಕೀಡು ಮಾಡಿದೆ. ಫಿಟ್‌ & ಫೈನ್‌ ಆಗಿದ್ದ ಶೇನ್‌ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಥೈಲ್ಯಾಂಡ್‌ ನಲ್ಲಿದ್ದ ಶೇನ್‌, ತಮ್ಮ ವಿಲ್ಲಾದಲ್ಲೇ ಮೃತಪಟ್ಟಿದ್ದಾರೆ.

52ರ ಹರೆಯದ ಹಿರಿಯ ಶೇನ್‌ ವಾರ್ನ್‌, ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲೊಬ್ಬರು.

ಅವರ ಒಟ್ಟಾರೆ ಆಸ್ತಿಯ ಮೌಲ್ಯ 50 ಮಿಲಿಯನ್‌ ಡಾಲರ್‌, ಅಂದ್ರೆ ಸರಿಸುಮಾರು 380 ಕೋಟಿ ರೂಪಾಯಿ. ಶೇನ್‌ ವಾರ್ನ್‌ ಗೆ ವಿಲಾಸಿ ಜೀವನ ಶೈಲಿ ಅತ್ಯಂತ ಪ್ರಿಯವಾಗಿತ್ತು. ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಯಿಂದ ಪಡೆದ ಆದಾಯ, ಪ್ರಾಯೋಜಕತ್ವ, ಉದ್ಯಮಗಳು ಹಾಗೂ ಐಪಿಎಲ್‌ ನಲ್ಲಿ ರಾಜಸ್ತಾನ ರಾಯಲ್ಸ್‌ ತಂಡದ ಮಾಲೀಕತ್ವದಿಂದ ಪಡೆದ ಹಣ ಎಲ್ಲವೂ ಸೇರಿ ವಾರ್ನ್‌ 380 ಕೋಟಿ ರೂಪಾಯಿ ಆಸ್ತಿಗೆ ಒಡೆಯರಾಗಿದ್ದರು.

ಶೇನ್‌ ವಾರ್ನ್‌ ಅಂತರಾಷ್ಟ್ರೀಯ ಕ್ರಿಕೆಟ್‌ ನ ಅತ್ಯಂತ ಜನಪ್ರಿಯ ಆಟಗಾರ. 1992ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ ಗೆ ಪದಾರ್ಪಣೆ ಮಾಡಿದ್ದ ಶೇನ್‌, 708 ವಿಕೆಟ್‌ ಪಡೆದಿದ್ದರು. 194 ಏಕದಿನ ಪಂದ್ಯಗಳನ್ನಾಡಿ 293 ವಿಕೆಟ್‌ ಕಬಳಿಸಿದ್ದರು. ಶತಮಾನದ ಐವರು ಕ್ರಿಕೆಟಿಗರಲ್ಲೊಬ್ಬರು ಎನಿಸಿಕೊಂಡಿದ್ದ ಶೇನ್‌ ವಾರ್ನ್‌ ಅಪಾರ ಅಭಿಮಾನಿಗಳನ್ನು ಅಗಲಿಸಿದ್ದಾರೆ.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap