ಉದ್ಧವ್ ಠಾಕ್ರೆ ನಂಬಿಕೆದ್ರೋಹದ ಬಲಿಪಶು: ಶಂಕರಾಚಾರ್ಯ

ಮುಂಬೈ:

   ಹಿಂದೂಗಳ ವಿಚಾರವಾಗಿ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿದ್ದ ಜ್ಯೋತಿಷ್ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಈಗ ಉದ್ಧವ್ ಠಾಕ್ರೆ ಪರವಾಗಿ ಧ್ವನಿ ಎತ್ತಿದ್ದಾರೆ.

   ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ನಂಬಿಕೆ ದ್ರೋಹದ ಬಲಿಪಶುವಗಿದ್ದಾರೆ ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ. ಅನಂತ್ ಅಂಬಾನಿ ವಿವಾಹದ ಅಂಗವಾಗಿ ಶುಭ್ ಆಶೀರ್ವಾದ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ತಮ್ಮನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬಗ್ಗೆಯೂ ಮಾತನಾಡಿರುವ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ತಾವು ಮೋದಿ ಅವರ ಹಿತೈಶಿ ಎಂದು ಹೇಳಿದ್ದಾರೆ.

   ಪ್ರಧಾನಿ ಮೋದಿ ಅವರು ನನ್ನ ಬಳಿ ಬಂದು ನಮಸ್ಕರಿಸಿದರು, ನಮ್ಮ ಬಳಿ ಯಾರೇ ಬಂದರೂ ಅವರಿಗೆ ಆಶೀರ್ವಾದ ಮಾಡುವುದು ನಮ್ಮ ಕರ್ತವ್ಯ. ನರೇಂದ್ರ ಮೋದಿ ಅವರು ನಮ್ಮ ಶತ್ರುವೇನಲ್ಲ, ನಾವು ಅವರ ಹಿತೈಶಿಗಳು, ಅವರ ಹಿತದ ಬಗ್ಗೆಯೇ ನಾವು ಎಂದಿಗೂ ಮಾತನಾಡುತ್ತೇವೆ, ಅವರು ತಪ್ಪು ಮಾಡಿದಾಗ ಅದನ್ನೂ ಹೇಳುತ್ತೇವೆ ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ. 

  “ಉದ್ಧವ್ ಠಾಕ್ರೆ ಅವರಿಗೆ ದ್ರೋಹ ಬಗೆಯಲಾಗಿದ್ದು, ಇದರಿಂದ ಅನೇಕರು ನೊಂದಿದ್ದಾರೆ. ಅವರ ಕೋರಿಕೆಯಂತೆ ನಾನು ಇಂದು ಅವರನ್ನು ಭೇಟಿ ಮಾಡಿದ್ದೇನೆ ಮತ್ತು ಅವರು ಮತ್ತೆ ಮುಖ್ಯಮಂತ್ರಿಯಾಗುವವರೆಗೂ ಜನರ ನೋವು ಕಡಿಮೆಯಾಗುವುದಿಲ್ಲ ಎಂದು ಹೇಳಿರುವುದಾಗಿ ಅವಿಮುಕ್ತೇಶ್ವರಾನಂದ ಸರಸ್ವತಿ ಬಾಂದ್ರಾದಲ್ಲಿ ಮಾತೋಶ್ರೀ ನಿವಾಸದಲ್ಲಿ ಠಾಕ್ರೆ ಅವರನ್ನು ಭೇಟಿಯಾದ ನಂತರ ಸುದ್ದಿಗಾರರಿಗೆ ತಿಳಿಸಿದರು.

   ನಮ್ಮ ಆಶೀರ್ವಾದದಂತೆ ಅವರು (ಉದ್ಧವ್) ಏನು ಬೇಕಾದರೂ ಮಾಡುತ್ತಾರೆ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.ದ್ರೋಹವೇ ದೊಡ್ಡ ಪಾಪ ಎಂದ ಅವರು, ದ್ರೋಹ ಮಾಡುವವನು ಹಿಂದೂ ಆಗಲು ಸಾಧ್ಯವಿಲ್ಲ. ದ್ರೋಹವನ್ನು ಸಹಿಸುವವನು ಹಿಂದೂ. ಇಡೀ ಮಹಾರಾಷ್ಟ್ರದ ಜನತೆ ಈ ದ್ರೋಹದಿಂದ ತಲ್ಲಣಗೊಂಡಿದ್ದಾರೆ ಮತ್ತು ಇದು ಇತ್ತೀಚಿನ   ಚುನಾವಣೆಯಲ್ಲಿ ಪ್ರತಿಫಲಿಸಿದೆ, “ನಮಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ, ಆದರೆ ನಾವು ದ್ರೋಹದ ಬಗ್ಗೆ ಮಾತನಾಡುತ್ತಿದ್ದೇವೆ ಅದು ಧರ್ಮದ ಪ್ರಕಾರ ಪಾಪ” ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap