ಶಿರಸಿ:
ಇಂದು ಆ. 11 ರಂದು ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ 2025 ನೇ ಸಾಲಿನ ಎಲ್ಲಾ ಗಣಪತಿ ಪ್ರತಿಷ್ಠಾಪನಾ/ ವಿಸರ್ಜನಾ ಮಂಡಳಿಯ ಪದಾಧಿಕಾರಿಗಳನ್ನು ಬರಮಾಡಿಕೊಂಡು ಶಶಿಕಾಂತ್ ವರ್ಮ,ಪೊಲೀಸ್ ವೃತ ನಿರೀಕ್ಷಕರು ಸಿರ್ಸಿ ರವರ ಅಧ್ಯಕ್ಷತೆಯಲ್ಲಿ ಶಾಂತಿಪಾಲನಾ ಸಭೆ ನಡೆಸಿದ್ದು ಈ ವೇಳೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ವೇಳೆ ಅನುಸರಿಸಬೇಕಾದ ನಿಯಮಗಳು ಮತ್ತು ಮುಂಜಾಗ್ರತ ಕ್ರಮಗಳ ಕುರಿತು ವಿವರವಾಗಿ ಮಾಹಿತಿ ನೀಡಲಾಯಿತು.
ಬನವಾಸಿ ಪೊಲೀಸ್ ಠಾಣೆ ಪಿಎಸ್ಐ ಗಳಾದ ಮಾಂತೇಶ್ ಕುಂಬಾರ್ ಮತ್ತು ಸುನಿಲ್ ಕುಮಾರ್ ಬಿವೈ ಹಾಗೂ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದು, ಸಭೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಗಣಪತಿ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
