ಗುಳೇದಗುಡ್ಡ :
ಪಟ್ಟಣದ ಶ್ರೀಗುರುಸಿದ್ದೇಶ್ವರ ಮಹಾಸ್ವಾಮಿಗಳ ೪೦ನೇ ವಾರ್ಷಿಕ ಪುಣ್ಯಾರಾಧನೆಯ ನಿಮಿತ್ತ ನಡೆಯುವ ಶರಣ ಸಂಗಮ ಸಮಾರಂಭ ಡಿ.೪ರಿಂದ ೧೨ರವರೆಗೆ ನಡೆಯಲಿದೆ ಎಂದು ಶ್ರೀಮಠದ ಪೀಠಾಧ್ಯಕ್ಷ ಶ್ರೀ. ಜ.ಗುರುಸಿದ್ಧ ಪಟ್ಟದಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶರಣ ಸಂಗಮ ಸಮಾರಂಭವು ಸಾಮಾಜಿಕ, ಸಾಮರಸ್ಯ ಭಾವೈಕ್ಯತೆಯನ್ನು ಬೆಳೆಸುತ್ತದೆ. ಪ್ರತಿ ವರ್ಷದಂತೆ ಪ್ರಭಾತ ಯಾತ್ರೆ, ಶರಣ ಧ್ವಜಾರೋಹಣವು ನಾನಾ ಧರ್ಮ ಜಾತಿ, ಮತ ಪಂಥಗಳಿAದ ನಡೆಯುತ್ತದೆ. ನಾವೆಲ್ಲರೂ ಒಂದು ಎಂಬ ಭಾವನೆ ಮೂಡಿಸುವುದು ಶರಣ ಸಂಗಮದ ಉದ್ದೇಶವಾಗಿದೆ. ಶರಣ ಸಂಗಮ ಸಮಾರಂಭವು ಸರ್ವ ಸಮುದಾಯಗಳ ನೇತೃತ್ವದಲ್ಲಿ ಜರುಗಲಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯದ ಅನೇಕ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳಿಯ ಜನಪ್ರತಿನಿಧಿಗಳು, ವಿವಿಧ ಸಮಾಜದ ಮುಖಂಡರುಗಳನ್ನು ಭಾಗವಹಿಸುವರು.
ಸಮಾರಂಭದಲ್ಲಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಡಿ.೪ರಂದು ಸಂಜೆ ೬ ಗಂಟೆಗೆ ಶರಣಸಂಗಮ ಸಮಾರಂಭದ ಉದ್ಘಾಟನೆ ಶಿವಶರಣ ಮಾದಾರ ಚನ್ನಯ್ಯನವರ ಜನ್ಮದಿನಾಚರಣೆಯೊಂದಿಗೆ ನಡೆಯಲಿದ್ದು, ಹಿರಿಯೂರಿನ ಆದಿಜಾಂಭವ ಗುರುಪೀಠದ ಶ್ರೀ ಷಡಕ್ಷರಮುನಿ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು, ಜಿಲ್ಲಾ ಕಾಂಗ್ರೆಸ್ ಯುವಘಟಕದ ಪ್ರಧಾನಕಾರ್ಯದರ್ಶಿ ವಿನಯ ತಿಮ್ಮಾಪೂರ ಸಮಾರಂಭ ಉದ್ಘಾಟಿಸುವರು, ಶಾಸಕರಾದ ಭೀಮನಸೇನ ಚಿಮ್ಮನಕಟ್ಟಿ, ವಿಜಯಾನಂದ ಕಾಶಪ್ಪನವರ ಉಪಸ್ಥಿತರಿರುವರು. ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎನ್. ಚಲವಾದಿ ಉಪನ್ಯಾಸ ನೀಡುವರು. ಕಾರ್ಯಕ್ರಮದ ಬಳಿಕ ಜ್ಞಾನಸಿಂಧು ಕಲಾಬಳಗದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಜ.ಶ್ರೀ ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಶರಣ ಸಂಗಮ ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷ ಆನಂದ ತಿಪ್ಪಾ, ಸಂಗಪ್ಪ ಜವಳಿ, ನಾಗೇಶಪ್ಪ ಪಾಗಿ, ಸಿ.ಎಂ.ಚಿAದಿ, ಈರಣ್ಣ ಶೇಖಾ, ಆನಂದ ತಿಪ್ಪಾಗೌಡ್ರ, ಶಿವಾನಂದ ಎಣ್ಣಿ, ಸೋಮು ಕಲಬುರ್ಗಿ, ಕರಿಯಪ್ಪ ಸೀತಿಮನಿ, ಅಶೋಕ ರೋಜಿ, ಪಿಂಟು ನನ್ನಾ ಸೇರಿದಂತೆ ಮತ್ತಿತರರಿದ್ದರು








