ಬಿಜಾಪುರ:
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ತಲೆಗೆ 13 ಲಕ್ಷ ರೂ. ಇನಾಮು ಹೊಂದಿದ್ದ 6 ಮಂದಿ ಸೇರಿದಂತೆ 22 ನಕ್ಸಲೀಯರು ಭಾನುವಾರ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಇವರಲ್ಲಿ ಐದು ಮಂದಿ ತೆಲೆಗೆ ರೂ. 2 ಲಕ್ಷ ಇನಾಮು ಹೊಂದಿದ್ದರೆ, ಒಬ್ಬರ ತಲೆಗೆ ರೂ. 1 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಈ ವರ್ಷ ಇಲ್ಲಿಯವರೆಗೆ 107 ನಕ್ಸಲೀಯರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದು, 82 ಮಂದಿಯನ್ನು ಹೊಡೆದುರುಳಿಸಲಾಗಿದೆ.
143 ನಕ್ಸಲೀಯರನ್ನು ಬಿಜಾಪುರದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಶರಣಾಗಿರುವ ನಕ್ಸಲೀಯರು ಅಮಾನವೀಯ ಮತ್ತು ಪೊಳ್ಳು ನಕ್ಸಲ್ ಸಿದ್ದಾಂತವನ್ನು ಖಂಡಿಸಿದ್ದು, ರಾಜ್ಯ ಸರ್ಕಾರದ ನಕ್ಸಲಿಸಂ ನಿರ್ಮೂಲನೆ ನೀತಿ ಮತ್ತು ಪೊಲೀಸರ ಪುನರ್ವಸತಿ ಅಭಿಯಾನವನ್ನು ಶ್ಲಾಘಿಸಿದ್ದಾರೆ. ಅವರು ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯ ಪ್ರಕಾರ ಪ್ರಯೋಜನಗಳನ್ನು ಪಡೆಯುತ್ತಾರೆ” ಎಂದು ಅವರು ಹೇಳಿದರು.
