ಅವರು ಹತ್ತು ಹೊಡೆದರೆ ನೀವು ಒಂದಾದ್ರೂ ಹೊಡೆದು ಬನ್ನಿ: ಡಾ. ಶರಣಪ್ರಕಾಶ ಪಾಟೀಲ್

ಕಲಬುರ್ಗಿ:

     ಬಿಜೆಪಿ ಕಾರ್ಯಕರ್ತರು ಹತ್ತು ಹೊಡೆದರೆ ನೀವು ಒಂದಾದ್ರೂ ಹೊಡೆದು ಬನ್ನಿ. ಹೇಡಿಗಳಂತೆ ಮನೆಯಲ್ಲಿ ಕೂರಬೇಡಿ. ಮುಂದಿನದ್ದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ. ಈ ಮೂಲಕ ಅವರು ವಿವಾದದ ಕಿಡಿ ಹೊತ್ತಿಸಿದ್ದಾರೆ.

      ಕಲಬುರ್ಗಿಯ ಸೇಡಂ ತಾಲೂಕಿನಲ್ಲಿ ಮಾತನಾಡಿರುವ ಪಾಟೀಲ್, ಈ ಹಿಂದೆ ಸಚಿವ ಸ್ಥಾನದಲ್ಲಿದ್ದೆ. ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೇನೆ ಎಂಬ ಅಪವಾದ ಬಂದರೆ ಕಷ್ಟ ಎಂದು ಸುಮ್ಮಿನಿದ್ದೆ. ಆದರೆ, ಈಗ ಆ ಭಯವಿಲ್ಲ. ಆಪರೇಷನ್ ಕಮಲಕ್ಕೆ ಮುಂದಾಗಿರುವವರಿಗೆ ಪಾಠ ಕಲಿಸಬೇಕಿದೆ. ನಿಮ್ಮನ್ನು ಹೊಡೆಯಲು ಬರುವ ಬಿಜೆಪಿ ಕಾರ್ಯಕರ್ತರನ್ನು ಹೊಡೆದು ಬನ್ನಿ. ಮುಂದಿನದ್ದನ್ನು ನೋಡಿಕೊಳ್ಳಲು ನಾನಿದ್ದೇನೆ. ನೀವು ಹೊಡಿಸಿಕೊಂಡ್ರೆ ಹೊಡೀತಾರೆ. ಬದಲಾಗಿ ನೀವೂ ಹತ್ತಾರು ಮಂದಿಯನ್ನು ಕಟ್ಟಿಕೊಂಡು ಹೊಡೆಯಿರಿ ಎಂದು ಹೇಳಿದ್ದರೆ.

      ಈ ಹಿಂದೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ನನ್ನ ಕಾರಿಗೂ ಅಡ್ಡಗಟ್ಟಿದ್ದರು. ಆದರೂ ನಾನು ಸುಮ್ಮನೆ ಕುಳಿತಿದ್ದೆ. ಏಕೆಂದರೆ ಆಗ ನಾವು ಅಧಿಕಾರದಲ್ಲಿದ್ದೆವು. ಇಲ್ಲದೇ ಹೋಗಿದ್ದರೆ ಆಗಲೇ ನಾನು ಅವರನನ್ನು ಒದ್ದು ಒಳಗಡೆ ಹಾಕಿಸುತ್ತಿದ್ದೆ ಎಂದು ಗುಡುಗಿದ್ದಾರೆ.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap