ರಾಜ್ಯದಲ್ಲಿ 1,533 ಮಕ್ಕಳಲ್ಲಿ ಕ್ಯಾನ್ಸರ್ ಪತ್ತೆ: ಸಚಿವರಿಂದ ಮಾಹಿತಿ

ಬೆಂಗಳೂರು:

    ರಾಜ್ಯದಲ್ಲಿ ಈ ವರ್ಷ 1,533 ಮಕ್ಕಳಲ್ಲಿ ಕ್ಯಾನ್ಸರ್ ಪತ್ತೆಯಾಗಿವೆ ಎಂದು ಸದನಕ್ಕೆ ವೈದ್ಯಕೀಯ ಶಿಕ್ಷಣ ಸಚಿವ  ಡಾ.ಶರಣಪ್ರಕಾಶ್ ಪಾಟೀಲ್‌  ತಿಳಿಸಿದ್ದಾರೆ. ವಿಧಾನ ಪರಿಷತ್‌ ಪ್ರಶೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮಕ್ಕಳಲ್ಲಿ ಹೆಚ್ಚಾಗಿ ಕ್ಯಾನ್ಸರ್ ಕಂಡುಬರುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಕಳೆದ ವರ್ಷ 14 ವರ್ಷದೊಳಗಿನ 876 ಗಂಡು ಮಕ್ಕಳು, 657 ಹೆಣ್ಣು ಮಕ್ಕಳು ಸಹಿತ 1,533 ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ ಎಂದರು.

   ಸರಕಾರದ ಮಟ್ಟದಲ್ಲೂ ಪ್ರತೀ ವರ್ಷ ಕ್ಯಾನ್ಸರ್‌ ಜಾಗೃತಿ ಹಾಗೂ ಚಿಕಿತ್ಸೆ ಕಾರ್ಯಕ್ರ ಮಗಳನ್ನು ಆಯೋಜಿಸುತ್ತೇವೆ. ಆದರೂ ಕ್ಯಾನ್ಸರ್ ಹೆಚ್ಚಳವಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲೇ ಅರಿವು ಮೂಡಿಸುವ ಕೆಲಸವಾಗಬೇಕು. ಕೇವಲ ಸರಕಾರದಿಂದ ಮಾತ್ರವಲ್ಲದೆ ಸಂಘ-ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸುವ ಮೂಲಕ ಇದನ್ನು ತಡೆಗಟ್ಟಬಹುದು. ಮಕ್ಕಳಲ್ಲಿ ಕ್ಯಾನ್ಸರ್ ಕಂಡುಬರುತ್ತಿರುವ ಬಗ್ಗೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲೂ ಸಾರ್ವಜನಿಕರಿಗೆ ಶಿಬಿರಗಳನ್ನು ಆಯೋಜಿಸುವ ಮೂಲಕ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

  ಶಕ್ತಿ ಯೋಜನೆಯ ಫಲದಿಂದ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ಆದಾಯ ಈ ವರ್ಷವೂ ಭರ್ಜರಿ ಏರಿಕೆಯಾಗಿದೆ ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವರು, ಮುಜರಾಯಿ ಇಲಾಖೆಯ ಕೇವಲ 10 ದೇವಾಲಯಗಳಿಂದ ಈ ವರ್ಷದ ಆರಂಭದಲ್ಲಿ, ಜನವರಿ – ಫೆಬ್ರವರಿ ಎರಡೇ ತಿಂಗಳಲ್ಲಿ ಬರೋಬ್ಬರಿ ₹70 ಕೋಟಿ ಆದಾಯ ಹರಿದು ಬಂದಿದೆ ಎಂದಿದ್ದಾರೆ.

   ‘ಶಕ್ತಿ’ ಯೋಜನೆಯ ಫಲದಿಂದ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ಆದಾಯ ಈ ವರ್ಷವೂ ಭರ್ಜರಿ ಏರಿಕೆಯಾಗಿದೆ. ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಆದಾಯ ‘ಶಕ್ತಿ’ ಯೋಜನೆ ಜಾರಿಯಾದ ನಂತರ ಎರಡು – ಮೂರು ಪಟ್ಟು ಏರಿಕೆಯಾಗುತ್ತಾ ಬಂದಿದ್ದು, ಈಗ ದಾಖಲಾರ್ಹ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link