ಬಹುಭಾಷಾ ನಟ ಶರತ್‌ ಬಾಬು ಆಸ್ಪತ್ರೆಗೆ ದಾಖಲು…!

ಹೈದರಾಬಾದ್:‌ 
        ದಕ್ಷಿಣ ಭಾರತ ಚಿತ್ರರಂಗದ ಬಹುಭಾಷಾ ನಟ  ಶರತ್ ಬಾಬು ಅವರನ್ನು ಹೈದರಾಬಾದ್ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕನ್ನಡದ ಅಮೃತ ವರ್ಷಿಣಿ ಸಿನಿಮಾದ ಅಭಿನಯಕ್ಕಾಗಿ ಮೆಚ್ಚುಗೆಗೆ ಪಾತ್ರವಾಗಿದ್ದ ಬಹುಭಾಷಾ ನಟ ಹಾಗೂ ಕೊನೆಯದಾಗಿ ವಸಂತ ಮುಲ್ಲೈ (2023) ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಹಿರಿಯ ನಟ ಶರತ್ ಬಾಬು ಅವರನ್ನು ಹೈದರಾಬಾದ್ನಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.
      ನಟ ಬಹು ಅಂಗಾಂಗ ಹಾನಿಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇತ್ತೀಚಿನ ವಾರಗಳಲ್ಲಿ ಇದೀಗ ಎರಡನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
 
      1973 ರಲ್ಲಿ ತೆಲುಗು ಚಿತ್ರಕ್ಕೆ ಪದಾರ್ಪಣೆ ಮಾಡಿದ ಶರತ್ ಬಾಬು ಅವರು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯ ಹಲವಾರು ಚಲನಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಪೋಷಕ ಪಾತ್ರಗಳಲ್ಲಿ ಅತ್ಯುತ್ತಮ ನಟನೆಗಾಗಿ ಶರತ್ ಬಾಬು ಅವರಿಗೆ ಒಂಬತ್ತು ಬಾರಿ ನಂದಿ ಪ್ರಶಸ್ತಿ ಲಭಿಸಿದೆ.’ಅಮೃತವರ್ಷಿಣಿ’ ಸಿನಿಮಾ ಖ್ಯಾತಿಯ ನಟ ಶರತ್ ಬಾಬು ಆರೋಗ್ಯ ಸ್ಥಿತಿ ಗಂಭೀರ;ಆಸ್ಪತ್ರೆಗೆ ದಾಖಲುಅವರು ಶೀಘ್ರ ಗುಣಮುಖರಾಗಲಿ ಎಂದು ಗಣ್ಯರು ಸೇರಿದಂತೆ ನಾನಾ ಕಡೆಯಿಂದ ಹಾರೈಕೆಗಳು ಹರಿದು ಬರುತ್ತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap