ಮುಂಬೈ:
ಅಕ್ಟೋಬರ್ 22 ಭಾರತೀಯ ಷೇರುಪೇಟೆ ತೀವ್ರ ಕುಸಿತಕ್ಕೆ ಸಾಕ್ಷಿಯಾಗಿದ್ದು. ಸೆನ್ಸೆಕ್ಸ್ 930.55 ಪಾಯಿಂಟ್ ಅಥವಾ ಶೇ. 1.15ರಷ್ಟು ಕುಸಿದು 80,220.72ಕ್ಕೆ ತಲುಪಿದೆ ಮತ್ತು ನಿಫ್ಟಿ 309.00 ಪಾಯಿಂಟ್ ಅಥವಾ ಶೇ. 1.25ರಷ್ಟು ಕುಸಿದು 24,472.10ಕ್ಕೆ ಬಂದು ತಲುಪಿದೆ. ಸುಮಾರು 553 ಷೇರುಗಳು ಲಾಭ ಗಳಿಸಿದರೆ, 3,264 ಷೇರುಗಳು ನಷ್ಟ ಅನುಭವಿಸಿದವು. 72 ಷೇರುಗಳಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.
ಅದಾನಿ ಎಂಟರ್‌ಪ್ರೈಸಸ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಭಾರತ್ ಎಲೆಕ್ಟ್ರಾನಿಕ್ಸ್, ಕೋಲ್ ಇಂಡಿಯಾ, ಟಾಟಾ ಸ್ಟೀಲ್ ನಿಫ್ಟಿಯಲ್ಲಿ ಹೆಚ್ಚು ನಷ್ಟ ಅನುಭವಿಸಿದರೆ, ಐಸಿಐಸಿಐ ಬ್ಯಾಂಕ್, ನೆಸ್ಲೆ ಇಂಡಿಯಾ, ಇನ್ಫೋಸಿಸ್ ಲಾಭ ಗಳಿಸಿದವು. ಆಟೋ, ಕ್ಯಾಪಿಟಲ್ ಗೂಡ್ಸ್, ಲೋಹ, ವಿದ್ಯುತ್, ರಿಯಾಲ್ಟಿ, ಟೆಲಿಕಾಂ, ಮಾಧ್ಯಮ ಮತ್ತು ಪಿಎಸ್‌ಯು ಬ್ಯಾಂಕ್ ಶೇ. 2-3ರಷ್ಟು ಕುಸಿದವು. ಬಿಎಸ್ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇ. 2.5ರಷ್ಟು ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 3.8ರಷ್ಟು ಕುಸಿದಿದೆ.
ಜಿಎಫ್ಎಲ್, ಐಎಫ್‌ಬಿ ಇಂಡಸ್ಟ್ರೀಸ್, ಇಂಡಿಗೊ ಪೇಂಟ್ಸ್, ಮಹಾರಾಷ್ಟ್ರ ಸ್ಕೂಟರ್ಸ್, ಎಂಸಿಎಕ್ಸ್ ಇಂಡಿಯಾ, ಓರಿಯಂಟ್ ಸಿಮೆಂಟ್, ಪಿಲಾನಿ ಇನ್ವೆಸ್ಟ್‌ಮೆಂಟ್ಸ್, ಎಸ್‌ಜೆಎಸ್ ಎಂಟರ್‌ಪ್ರೈಸಸ್, ಟೊರೆಂಟ್ ಪವರ್, ಯುನಿಚೆಮ್ ಲ್ಯಾಬ್ಸ್, ವರ್‌ಫೂಲ್ ಸೇರಿದಂತೆ 160ಕ್ಕೂ ಹೆಚ್ಚು ಷೇರುಗಳು ಬಿಎಸ್ಇಯಲ್ಲಿ ಗರಿಷ್ಠ ಮಟ್ಟವನ್ನು ಮುಟ್ಟಿದವು.
ಮತ್ತೊಂದೆಡೆ ಅನುಪಮ್ ರಸಾಯನ್, ಆಪ್ಟೆಕ್, ಕಾಫಿ ಡೇ, ಸಿಎಸ್‌ಬಿ ಬ್ಯಾಂಕ್, ಈಸಿ ಟ್ರಿಪ್ ಪ್ಲ್ಯಾನರ್ಸ್, ಈಕ್ವಿಟಾಸ್ ಬ್ಯಾಂಕ್, ಎಚ್ಎಲ್ಇ ಗ್ಲಾಸ್ಕೋಟ್, ಐಡಿಎಫ್ಸಿ ಫಸ್ಟ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಐಟಿಐ, ಮಿಶ್ರಾ ಧಾತು ನಿಗಮ್, ಎಂಟಿಎಆರ್ ಟೆಕ್ನಾಲಜೀಸ್, ಪಿಎನ್‌ಸಿ ಇನ್ಫ್ರಾಟೆಕ್, ಆರ್‌ಬಿಎಲ್ ಬ್ಯಾಂಕ್, ರೆಪ್ರೋ ಇಂಡಿಯಾ, ಸ್ಯಾಟಿನ್ ಕ್ರೆಡಿಟ್, ಶಾಲಿಮಾರ್ ಪೇಂಟ್ಸ್, ಶಂಕರ ಬಿಲ್ಡಿಂಗ್, ಶೀಲಾ ಫೋಮ್, ತನ್ಲಾ ಫ್ಲಾಟ್‌ಫಾರ್ಮ್ ಸೇರಿದಂತೆ 150ಕ್ಕೂ ಹೆಚ್ಚು ಷೇರುಗಳು ಬಿಎಸ್ಇಯಲ್ಲಿ 52 ವರ್ಷಗಳ ಕನಿಷ್ಠ ಮಟ್ಟವನ್ನು ತಲುಪಿದವು.
ಇನ್ನು ಏಷ್ಯಾ-ಪೆಸಿಫಿಕ್ ಪ್ರದೇಶದ ಮಾರುಕಟ್ಟೆಗಳೂ ಮಂಗಳವಾರ ಕುಸಿತ ಕಂಡವು. ಆಸ್ಟ್ರೇಲಿಯಾದ ಎಸ್ & ಪಿ / ಎಎಸ್ಎಕ್ಸ್ 200 ಶೇ. 1.3ರಷ್ಟು ಕುಸಿದಿದೆ. ದಕ್ಷಿಣ ಕೊರಿಯಾದ ಕೋಸ್ಪಿ ಶೇಕಡಾ 1.2ರಷ್ಟು ಮತ್ತು ಅದರ ಸ್ಮಾಲ್ ಕ್ಯಾಪ್ ಪೀರ್ ಕೊಸ್ಡಾಕ್ ಶೇ. 2ರಷ್ಟು ಕುಸಿದಿದೆ. ಜಪಾನ್‌ನ ನಿಕೈ 225 ಸೂಚ್ಯಂಕ ಕೂಡಾ ಶೇ. 1.24ರಷ್ಟು ಕುಸಿತ ಕಂಡಿದ್ದರೆ, ಟೋಪಿಕ್ಸ್ ಸೂಚ್ಯಂಕ ಶೇ. 0.79ರಷ್ಟು ಕಡಿಮೆಯಾಗಿದೆ. ಚೀನಾದಲ್ಲ ಶಾಂಘೈ ಕಾಂಪೊಸಿಟ್ ಶೇಕಡಾ 0.1ರಷ್ಟು ಕುಸಿದರೆ, ಸಿಎಸ್ಐ 300 ಶೇ. 0.32 ರಷ್ಟು ಕುಸಿದಿದೆ. ಆದರೆ ಇವಲ್ಲಕ್ಕಿಂತ ಭಿನ್ನವಾಗಿ ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಶೇ. 0.6ರಷ್ಟು ಏರಿಕೆ ಕಂಡಿದೆ.
ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಯುಎಸ್ ಅಧ್ಯಕ್ಷೀಯ ಚುನಾವಣೆಯ ಅನಿಶ್ಚಿತತೆಯ ನಡುವೆ ಷೇರು ಮಾರುಕಟ್ಟೆ ನೆಲಕಚ್ಚಿವೆ ಎಂದು ಆರ್ಥಿಕ ತಜ್ಞರು ಊಹಿಸಿದ್ದಾರೆ.