ಸತತ ಏರಿಕೆ ಕಂಡ ಷೇರು ಮಾರುಕಟ್ಟೆ….!

ಮುಂಬೈ: 

   ಸತತ ಕುಸಿತದ ಹಾದಿಯಲ್ಲಿದ್ದ ಭಾರತೀಯ ಷೇರುಮಾರುಕಟ್ಟೆ ಸತತ 2 ದಿನವೂ ಚೇತೋಹಾರಿ ವಹಿವಾಟು ನಡೆಸಿದ್ದು, ಇಂದು ಸೆನ್ಸೆಕ್ಸ್ 363 ಅಂಕ ಏರಿಕೆಯಾಗಿದೆ.

  ಕಳೆದ ವಾರವಿಡೀ ಕುಸಿತದಲ್ಲೇ ವಹಿವಾಟು ಅಂತ್ಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ನಿನ್ನೆಯಿಂದ ಏರಿಕೆಯತ್ತ ಮುಖ ಮಾಡಿದ್ದು, ಇಂದೂ ಕೂಡ ಭಾರತೀಯ ಷೇರುಮಾರುಕಟ್ಟೆ ಹಸಿರಿನಲ್ಲೇ ವಹಿವಾಟು ಅಂತ್ಯಗೊಳಿಸಿದೆ. ಇಂದು ಸೆನ್ಸೆಕ್ಸ್ 363.99 ಅಂಕಗಳ ಏರಿಕೆಯೊಂದಿಗೆ 80,369.03 ಅಂಕಗಳಿಗೆ ಏರಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಅಂತೆಯೇ ನಿಫ್ಟಿ ಕೂಡ 127.70 ಅಂಕಗಳ ಏರಿಕೆಯೊಂದಿಗೆ 24,466.85 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇಂದು ಭಾರತೀಯ ಷೇರುಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಶೇ.0.45ರಷ್ಟು ಏರಿಕೆಯಾಗಿದ್ದು, ನಿಫ್ಟಿ ಸೂಚ್ಯಂಕ ಕೂಡ ಶೇ.0.52ರಷ್ಟು ಏರಿಕೆ ಕಂಡಿದೆ. 

  ಇಂದಿನ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಪಟ್ಟಿಮಾಡಲಾದ ಸಂಸ್ಥೆಗಳ ಪೈಕಿ ಎಲ್&ಟಿ ಟೆಕ್ನಾಲಜಿ ಸರ್ವಿಸಸ್ ಲಿಮಿಟೆಡ್, ವಿಪ್ರೋ, ಕೋಫೋರ್ಜ್, ಎಂಫಾಸಿಸ್, ಪರ್ಸಿಸ್ಟೆಂಟ್ ಸಿಸ್ಟಮ್ಸ್ ಸಂಸ್ಥೆಗಳು ಲಾಭಾಂಶ ಕಂಡಿದ್ದು, ಅಂತೆಯೇ ಇನ್ಫೋಸಿಸ್, LTIMindtree, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟೆಕ್ ಮಹೀಂದ್ರ ಸಂಸ್ಥೆಗಳ ಷೇರುಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ.

Recent Articles

spot_img

Related Stories

Share via
Copy link