ಶ್ರವಣ ದೋಷವಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ

ದಾವಣಗೆರೆ:

      ಶ್ರವಣ ದೋಷ (ಕಿವಿ ಸಮಸ್ಯೆ) ಇದ್ದರೆ, ಯಾವುದೇ ಕಾರಣಕ್ಕೂ ಅಲಕ್ಷ್ಯ ಮಾಡದೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ಇಎನ್‍ಟಿ ತಜ್ಞ ಡಾ.ಎ.ಆರ್.ವಿರೇಶ್ ಕರೆ ನೀಡಿದರು.

      ನಗರದ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಗುರುವಾರ ತರಳಬಾಳು ವೆಲ್‍ಫೇರ್ ಫೌಂಡೇಷನ್ ಹಾಗೂ ಯುವ ರೆಡ್‍ಕ್ರಾಸ್ ಘಟಕದ ಆಶ್ರಯದಲ್ಲಿ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 26ನೇ ಶ್ರದ್ದಾಂಜಲಿ ಪ್ರಯುಕ್ತ ಏರ್ಪಡಿಸಿದ್ದ ಕಿವಿ, ಮೂಗು, ಗಂಟಲು ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದ ಅವರು, ಕಿವಿ ಸಮಸ್ಯೆಯ ಬಗ್ಗೆ ತಾತ್ಸರ ಮಾಡಿದರೆ, ಶಾಶ್ವತ ಕಿವುಡುತನ ಉಂಟಾಗುವ ಅಪಾಯವಿದೆ ಎಂದರು.

    ಕಿವುಡುತನ ರಿವು ವ್ಯಕ್ತಿಯು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಅಲ್ಲದೆ, ಇಂತವರನ್ನು ಹಿಯಾಳಿಸುತ್ತಾರೆ. ಯಾರೂ ಇವರಿಗೆ ಸಹಾಯ ಮಾಡಬೇಕೆಂದು ಮುಂದೆ ಬರುವುದಿಲ್ಲ. ಹೀಗಾಗಿ ಇವರು ಖಿನ್ನತೆಗೆ ಒಳಗಾಗಲಿದ್ದಾರೆ. ಹೊರಗಿನ ಕಿವಿಗಿಂತ ಒಳಗಿವಿ ಕೇಳುವಿಕೆ ಅತೀ ಮುಖ್ಯವಾಗಿದೆ. ಇದು ಹಾಳಾದರೆ ಇಡೀ ಜೀವನವೇ ಕಿವುಡುಮಯವಾಗಲಿದೆ ಎಂದರು.

   ಹುಟ್ಟಿದ ಮಗು ಕಿವುಡುತನ ಹೊಂದಿದೆ ಎಂಬುದನ್ನು ಶಬ್ದದ ಮೂಲಕ ತಿಳಿಯಬಹುದಾಗಿದೆ. ಶಬ್ಧಕ್ಕೆ ಮಕ್ಕಳು ಸ್ಪಂದಿಸದಿದ್ದರೆ ಆ ಮಕ್ಕಳಲ್ಲಿ ಕಿವುಡುತನ ಇರುತ್ತದೆ. ಇಂತಹ ಮಕ್ಕಳನ್ನು ಮೂರು ವರ್ಷದ ಒಳಗಾಗಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಕೆಲವರು ಮನೆಯಲ್ಲಿ ತಾವೇ ಕಿವಿಯನ್ನು ಸ್ವಚ್ಚ ಮಾಡಿಕೊಳ್ಳುತ್ತಾರೆ. ಇದು ತಪ್ಪು. ಸ್ಚಚ್ಛ ಮಾಡಿಕೊಳ್ಳುವ ಸಂದರ್ಭದಲ್ಲಿ ಒಳಕಿವಿಯ ಪದರಿಗೆನಾದರೂ ಧಕ್ಕೆ ಆದರೆ, ಕಿವುಡುತನ, ನಮ್ಮ ಕಿವಿಯನ್ನು ನಾವೇ ಹಾಳು ಮಾಡಿಕೊಂಡತಾಗುತ್ತದೆ. ಅಲ್ಲದೆ 90 ಡೆಸಿಬಲ್‍ನಷ್ಟು ಶಬ್ಧ ಕಿವಿಗೆ ಬಿದ್ದರೆ, ಆಗಲೂ ಕಿವಿ ಹಾಳಾಗುವ ಸಾಧ್ಯತೆ ಇದೆ ಎಂದು ವಿವರಿಸಿದರು.

   ಈ ಸಂದರ್ಭದಲ್ಲಿ ವಿಶ್ರಾಂತ ಪ್ರಾಂಶುಪಾಲ ಡಾ.ಹೆಚ್.ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಕೆ.ಟಿ.ನಾಗರಾಜ ನಾಯಕ್ ಇದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap