ಭಾರತವನ್ನು ಕೆಣಕುವ ತಪ್ಪು ಮಾಡಿದ್ರೆ ಪಾಕ್‌ ಸರ್ವನಾಶ ಖಂಡಿತ; ಶಶಿ ತರೂರ್‌

ನವದೆಹಲಿ:

    ಪಹಲ್ಗಾಮ್‌ ದಾಳಿ ನಂತರ ಪಾಕಿಸ್ತಾನದಲ್ಲಿನ ಉಗ್ರಚಟುವಟಿಕೆ ತಾಣಗಳ ಮೇಲೆ ಭಾರತ ನಡೆಸಿದ ದಾಳಿಯನ್ನು ಸ್ವಾಗತಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್ , ಉಗ್ರ ಪೋಷಕ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಪಾಕಿಸ್ತಾನ ತನ್ನ ಚಾಳಿಯನ್ನು ಹೀಗೆ ಮುಂದುವರಿಸಿದರೆ ಅದರ ಸರ್ವನಾಶ ಖಂಡಿತ ಎಂದು ಎಚ್ಚರಿಸಿದ್ದಾರೆ. ಇನ್ನು ಭಾರತದ ಪರ ಮೂರು ರಾಷ್ಟ್ರಗಳು ಬೆಂಬಲ ಸೂಚಿಸಿವೆ. ಪಾಕಿಸ್ತಾನದ ಪರ ಎಂದೆನಿಸಿಕೊಂಡ ಚೀನಾ ಈ ಬಾರಿ ಪಾಕಿಸ್ತಾನವನ್ನು ಬಲವಾಗಿ ಬೆಂಬಲಿಸದಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.

    ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರ ದಾಳಿ ಬಗ್ಗೆ ಮಾತನಾಡಿದರು. ಪಾಕ್‌ ನೆಲದಲ್ಲಿ ಸೇನೆ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿರುವ ವಿಚಾರ ಇಡೀ ಪ್ರಪಂಚಕ್ಕೆ ಗೊತ್ತಿದೆ. ಪಾಕ್‌ ಪೋಷಿಸಿರುವ ಉಗ್ರ ಸಂಘಟನೆಯಿಂದ ನಡೆದಿರುವ ಪಹ್ಗಲಾಮ್‌ ದಾಳಿಯಿಂದ ಇದನ್ನು ಸಾಬೀತುಪಡಿಸಿದೆ. ನಮ್ಮ ಪಕ್ಷದ ಎಲ್ಲರೂ ಸೇನೆಯೊಂದಿಗೆ ನಿಲ್ಲುತ್ತೇವೆ. ಫ್ರಾನ್ಸ್, ರಷ್ಯಾ ಮತ್ತು ಇಸ್ರೇಲ್ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಇತರ ರಾಷ್ಟ್ರಗಳು ಶಾಂತಿ ಹಾಗೂ ನಿಯಂತ್ರಣಕ್ಕಾಗಿ ಕರೆ ನೀಡಿವೆ. ನಾವು ಹೋರಾಟ ಮಾಡಲು ಇಚ್ಛಿಸುವುದಿಲ್ಲ ಎಂದು ಹೇಳಿದರು. 

   ಚೀನಾ ಪಾಕಿಸ್ತಾನ ಮತ್ತು ಭಾರತ ಎರಡು ತನ್ನ ನೆರೆಹೊರೆಯ ದೇಶಗಳಾಗಿದ್ದು, ಯುದ್ಧ ಬೇಡ, ಬದಲು ಮಾತುಕತೆ ಮತ್ತು ಶಾಂತಿ ಬೇಕು ಎಂದು ಹೇಳಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ. ಯುದ್ಧ ಬೇಡ ಎಂದು ಸಲಹೆ ನೀಡುವುದು ಜಾಗತಿಕ ಅಭಿಪ್ರಾಯ. ಉಗ್ರರ ಅಡಗುತಾಣಗಳನ್ನು ಈ ದಾಳಿಯನ್ನು ನಡೆಸಲಾಗಿದೆ. ಯುದ್ಧ ಆರಂಭಿಸಬೇಕೆಂಬ ಉದ್ದೇಶ ಭಾರತಕ್ಕಿಲ್ಲ. ಆದರೆ ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ 26 ಅಮಾಯಕ ಭಾರತೀಯರ ನಾಗರಿಕರ ಸಾವಿಗೆ ಪ್ರತೀಕಾರ ತೀರಿಸಲು ಈ ದಾಳಿ ಅಗತ್ಯವಾಗಿತ್ತು ಎಂದರು. ನಾವು ಯುದ್ಧ ಬಯಸುವುದಿಲ್ಲ.. ಆದರೆ ಪಾಕಿಸ್ತಾನ ಅದನ್ನೇ ಬಯಸಿದರೆ ನಾವೂ ಅದಕ್ಕೆ ಸಿದ್ದ ಎಂದು ತಿಳಿಸಿದರು.

Recent Articles

spot_img

Related Stories

Share via
Copy link