ನಾನು ಮಾರಾಟಕ್ಕಿಲ್ಲ… ಶಶಿ ತರೂರು ಇಷ್ಟೊಂದು ಗರಂ ಆಗಿದ್ದೇಕೆ?

ಮುಂಬಯಿ:

     ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್‌ ರ ಪುತ್ರ ಆರ್ಯನ್ ಖಾನ್  ನಿರ್ದೇಶನದ ‘ದಿ ಬಾ***ಡ್ಸ್‌ ಆಫ್ ಬಾಲಿವುಡ್‌’ ಕುರಿತು “ಪೇಯ್ಡ್ ರಿವ್ಯೂ” ಬರೆದಿದ್ದಾರೆಂದು ಆರೋಪಿಸಿದ ಸಾಮಾಜಿಕ ಜಾಲತಾಣ ಬಳಕೆದಾರನಿಗೆ ಕಾಂಗ್ರೆಸ್  ನಾಯಕ ಶಶಿ ತರೂರ್ ತಕ್ಕ ಉತ್ತರ ನೀಡಿದ್ದಾರೆ. ಇತ್ತೀಚೆಗೆ ಶಶಿ ತರೂರ್ ಅವರು ನೆಟ್‌ಫ್ಲಿಕ್ಸ್  ಸಿರೀಸ್‌ವೊಂದರ ಕುರಿತು ಮೆಚ್ಚುಗೆಯ ವಿಮರ್ಶೆ ಪೋಸ್ಟ್ ಮಾಡಿದ್ದರು. ಇದಕ್ಕೆ ಓರ್ವ ನೆಟ್ಟಿಗ, “ಶಶಿತರೂರ್ ಹೊಸ ಸೈಡ್ ಬಿಸಿನೆಸ್ – ಪೇಡ್ ರಿವ್ಯೂವ್,” ಎಂದು ಕಾಮೆಂಟ್ ಮಾಡಿದ್ದ. ಇದರಿಂದ ಅಸಮಾಧಾನಗೊಂಡ ಶಶಿ ತರೂರ್ ಆ ವ್ಯಕ್ತಿಗೆ ಖಾರವಾಗಿಯೇ ಉತ್ತರಿಸಿದ್ದಾರೆ. 

   ಅಕ್ಟೋಬರ್ 27ರಂದು ಆ ಟ್ರೋಲರ್‌ಗೆ ಪ್ರತಿಕ್ರಿಯಿಸಿರುವ ಶಶಿ ತರೂರ್, “ಸ್ನೇಹಿತನೇ ನಾನು ಮಾರಾಟಕ್ಕೆ ಇಲ್ಲ. ನಾನು ಹೇಳುವ ಯಾವುದೇ ಅಭಿಪ್ರಾಯಕ್ಕೆ ಯಾರೂ ಹಣ ನೀಡಿಲ್ಲ,” ಎಂದಿದ್ದಾರೆ. ಅಕ್ಟೋಬರ್ 26 ರಂದು ತರೂರ್ ತಮ್ಮ ಎಕ್ಸ್ ಖಾತೆಯಲ್ಲಿ ಆರ್ಯನ್ ಖಾನ್ ಕೆಲಸವನ್ನು ಪ್ರಶಂಸಿಸಿ ಒಂದು ಪೋಸ್ಟ್ ಮಾಡಿದ್ದರು. ಅಲ್ಲದೇ ಅದನ್ನು ಶಾರುಖ್ ಖಾನ್‌ಗೂ ಟ್ಯಾಗ್ ಮಾಡಿ, “ನಿಮ್ಮ ಮಗನ ಕೆಲಸದ ಬಗ್ಗೆ ನೀವು ಹೆಮ್ಮೆ ಪಡಬೇಕು” ಎಂದು ಬರೆದಿದ್ದರು..

    ನಾನು ಎರಡು ದಿನಗಳಿಂದ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದೇ. ನನ್ನ ಸಿಬ್ಬಂದಿ ಮತ್ತು ನನ್ನ ತಂಗಿ ಸ್ಮಿತಾ ನನಗೆ ಕಂಪ್ಯೂಟರ್‌ ಬಿಟ್ಟು ನೆಟ್‌ಫ್ಲಿಕ್ಸ್ ಸೀರಿಸ್‌ ನೋಡಲು ಹೇಳಿದ್ದರು. ಆಗ ನಾನು ನೋಡಿದ ಆ ‘The Ba**ds of Bollywood’ ಈವರೆಗೆ ನೋಡಿದ ಅತ್ಯುತ್ತಮ ಸಿರೀಸ್‌ಗಳಲ್ಲಿ ಒಂದಾಗಿದೆ… ಇದು ನಿಜವಾದ #OTT GOLD,” ಎಂದು ತರೂರ್ ಬರೆದಿದ್ದರು.

    ಆರ್ಯನ್ ಖಾನ್ ನಿರ್ದೇಶನದ ಮೊದಲ ಸಿರೀಸ್‌ ‘The Ba**ds of Bollywood ನೋಡಿ ಮುಗಿಸಿದ್ದೇನೆ. ಶ್ಲಾಘನೆಗೆ ಪದಗಳು ಸಾಲುತ್ತಿಲ್ಲ. ಇದು ನಿಧಾನವಾಗಿ ಮನಸ್ಸಿಗೆ ಹಿಡಿಸಿಕೊಳ್ಳುತ್ತದೆ! ತೀಕ್ಷ್ಣವಾದ ಬರಹ, ಧೈರ್ಯದಿಂದ ನಿರ್ದೇಶನ ಮಾಡಲಾಗಿದೆ, ಈ ವ್ಯಂಗ್ಯದ ಧೈರ್ಯವೇ ಬಾಲಿವುಡ್‌ಗೆ ಬೇಕಾಗಿದ್ದು. ಅದ್ಭುತ ಬುದ್ಧಿವಂತಿಕೆಯ ಹಾಸ್ಯ, ಕೆಲವೊಮ್ಮೆ ಮನಮುಟ್ಟುವಂತಹ, ಸದಾ ನಿರ್ಭೀತ ದೃಷ್ಟಿಕೋನ, ಗ್ಲಾಮರ್‌ನ ಹಿಂದಿನ ನೋಟವನ್ನು ತೋರಿಸುತ್ತದೆ,” ಎಂದು ತರೂರ್ ಬರೆದಿದ್ದರು.

   7 ಮೈಂಡ್ ಬ್ಲೋಯಿಂಗ್ ಎಪಿಸೋಡ್‌ಗಳನ್ನು ಹೊಂದಿರುವ ಮಾಸ್ಟರ್ ಪೀಸ್‌ನಂತಹ ಸಿರೀಸ್ ಅನ್ನ ನೀನು ನೀಡಿದ್ದೀಯ ಎಂದು ಆರ್ಯನ್ ಖಾನ್‌ಗೆ ತರೂರ್ ಶ್ಲಾಘಿಸಿದ್ದಾರೆ. The Ba*ds of Bollywood ಒಂದು ಅದ್ಭುತ! @iamsrk — ನಿಮಗೆ ನಿಮ್ಮ ಮಗನ ಮೇಲೆ ಹೆಮ್ಮೆ ಇರಲೇಬೇಕು,” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇನ್ನೂ.. ಈ ಸಿರೀಸ್‌ನಲ್ಲಿ ಬಾಬಿ ದಿಯೋಲ್, ಲಕ್ಷ್ಯ ಲಾಲ್ವಾನಿ, ರಾಘವ ಜುಯಾಲ್, ಸಹರ್ ಬಾಂಬ್ಬಾ, ಅನ್ಯಾ ಸಿಂಗ್, ಮನೋಜ್ ಪಹ್ವಾ, ಮೋನಾ ಸಿಂಗ್ ಮತ್ತು ಗೌತಮಿ ಕಪೂರ್ ಸೇರಿದಂತೆ ಹಲವಾರು ನಟರು ಕಾಣಿಸಿಕೊಂಡಿದ್ದಾರೆ.

Recent Articles

spot_img

Related Stories

Share via
Copy link