ರಾಜೀವ್‌ ಚಂದ್ರಶೇಖರ್‌ ವಿರು‍ದ್ಧ ಗುಡುಗಿದ ಶಶಿ ತರೂರ್‌ ….!

ತಿರುವನಂತಪುರ: 

    ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಜಟಾಪಟಿ ತಾರಕಕ್ಕೇರಿದ್ದು, ಸುಳ್ಳುಆರೋಪದ ಮೇರೆಗೆ ಕೈ ಅಭ್ಯರ್ಥಿ ಶಶಿತರೂರ್ ವಿರುದ್ಧ ಕಾನೂನೂ ಕ್ರಮದ ಎಚ್ಚರಿಕೆ ನೀಡಿದ್ದ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಗೆ ತರೂರ್ ತಿರುಗೇಟು ನೀಡಿದ್ದಾರೆ.

   ತಾವು ಮಾಡಿದ್ದ ಆರೋಪಗಳು ಸುಳ್ಳಾಗಿದ್ದರೆ… ರಾಜೀವ್ ಚಂದ್ರಶೇಖರ್ ತಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.. ಇಲ್ಲವಾದಲ್ಲಿ ನಾನೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಶಶಿತರೂರ್, ರಾಜೀವ್ ಚಂದ್ರಶೇಖರ್ ಗೆ ಎಚ್ಚರಿಕೆ ನೀಡಿದ್ದಾರೆ.

    ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರ ಆರೋಪಗಳನ್ನು ನಿರಾಕರಿಸಿರುವ ಶಶಿತೂರೂರ್.. ತಮ್ಮ ಆರೋಪಗಳು ನಿರಾಧಾರವಲ್ಲ.. ಅವರ ವಿರುದ್ಧದ ಎಲ್ಲ ಆರೋಪಗಳಿಗೂ ಸಾಕ್ಷಿ ಇದೆ. ಹೀಗಾಗಿ ಅವರು ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳು ನಿಜವಲ್ಲ ಎಂದು ಹೇಳಿದ್ದಾರೆ. 

   ಕ್ಷೇತ್ರದ ಮತದಾರರಿಗೆ ಮತ್ತು ಪ್ಯಾರಿಷ್ ಪಾದ್ರಿಗಳಂತಹ ಪ್ರಭಾವಿ ವ್ಯಕ್ತಿಗಳಿಗೆ ಲಂಚ ನೀಡಿದ್ದಾರೆ ಎಂದು ಶಶಿತರೂರ್ ಟಿವಿ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕುರಿತು ಕಾಂಗ್ರೆಸ್ ಸಂಸದರಿಗೆ ನೋಟಿಸ್ ಜಾರಿ ಮಾಡಿದ್ದ ರಾಜೀವ್ ಚಂದ್ರಶೇಖರ್, ‘ತಮ್ಮ ಪ್ರತಿಷ್ಠೆ ಮತ್ತು ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಶಶಿತರೂರ್ ಅವರು ಈ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಹೇಳಿಕೆಗಳು ತಿರುವನಂತಪುರದ ಇಡೀ ಕ್ರಿಶ್ಚಿಯನ್ ಸಮುದಾಯವನ್ನು ಮತ್ತು ಅದರ ಮುಖಂಡರನ್ನು ಅಗೌರವಗೊಳಿಸಿವೆ.

    ಮತಕ್ಕಾಗಿ ನಗದು ಚಟುವಟಿಕೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ತೊಡಗಿದ್ದಾರೆ. ಕಾಂಗ್ರೆಸ್ ಸಂಸದರ ಹೇಳಿಕೆಗಳು ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಯಾಗಿದ್ದು, ಈ ಹೇಳಿಕೆಗಳು ಬಿಜೆಪಿ ನಾಯಕರ ಚುನಾವಣಾ ಪ್ರಚಾರವನ್ನು ಘಾಸಿಗೊಳಿಸುವ ಮತ್ತು ಚುನಾವಣೆಯಲ್ಲಿ ಶಶಿ ತರೂರ್‌ಗೆ ಲಾಭ ಮಾಡಿಕೊಡುವ ಗುರಿಯನ್ನು ಹೊಂದಿವೆ. ಹೀಗಾಗಿ ತಾವು ಏಪ್ರಿಲ್ 6 ರಂದು ನನ್ನ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳನ್ನು “ತಕ್ಷಣ ಹಿಂತೆಗೆದುಕೊಳ್ಳುವಂತೆ” ಮತ್ತು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ತಮಗೆಗೆ ಬೇಷರತ್ ಸಾರ್ವಜನಿಕ ಕ್ಷಮೆಯಾಚಿಸಬೇಕು ನೋಟಿಸ್ ನಲ್ಲಿ ಹೇಳಿದ್ದರು. 

   ಒಂದು ವೇಳೆ ಕ್ಷಮೆ ಕೇಳದಿದ್ದರೆ ಭವಿಷ್ಯದಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ. ನೊಟೀಸ್ ಸ್ವೀಕರಿಸಿದ 24 ಗಂಟೆಗಳ ಒಳಗೆ ಷರತ್ತುಗಳನ್ನು ಅನುಸರಿಸಲು ವಿಫಲವಾದರೆ ನ್ಯಾಯಾಲಯದಲ್ಲಿ ಸೂಕ್ತ ಕ್ರಿಮಿನಲ್ ಮತ್ತು ಸಿವಿಲ್ ವಿಚಾರಣೆಯನ್ನು ಪ್ರಾರಂಭಿಸಲು ಕಾರಣವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಎಚ್ಚರಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap