ಜಗದೀಶ್‌ ಶೆಟ್ಟರ್‌ ಸೋಲು ಖಚಿತ : ಅರುಣ್‌ ಸಿಂಗ್‌

ಕಲಬುರಗಿ:

     ಪಕ್ಷಕ್ಕೆ ದ್ರೋಹ ಬಗೆದಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಕಾರ್ಯಕರ್ತರು ಸೋಲು ಕಾಣುವಂತೆ ಮಾಡುವ ಮೂಲಕ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಅರುಣ್ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶೆಟ್ಟರ್ ಅವರ ಸಾಂಪ್ರದಾಯಿಕ ಕ್ಷೇತ್ರವಾದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಬಿಜೆಪಿಯ ಪಕ್ಷಕ್ಕೆ ಸುರಕ್ಷಿತ ಕ್ಷೇತ್ರವಾಗಿದ್ದು, ಅದು ಹಾಗೆಯೇ ಉಳಿಯಲಿದೆ ಎಂದು ಹೇಳಿದರು.

   ಶೆಟ್ಟರ್ ಅವರು ಬಿಜೆಪಿ ಪಕ್ಷದ್ದವರಾಗಿದ್ದರಿಂದಲೇ ಈ ಕ್ಷೇತ್ರದಿಂದ ಗೆಲ್ಲುತ್ತಿದ್ದರೇ ಹೊರತು ಯಾವತ್ತೂ ಇಲ್ಲದ ಜನಬಲದಿಂದಲ್ಲ, ಪಕ್ಷಕ್ಕೆ ಮಾಡಿದ ದ್ರೋಹದಿಂದ ಬಿಜೆಪಿ ಕಾರ್ಯಕರ್ತರು ಅಸಮಾಧಾನಗೊಂಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಅವರ ಸೋಲು ಖಚಿತ. ಅವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ತಿಳಿಸಿದರು.
 
     ಲಕ್ಷ್ಮಣ ಸವದಿ ಅವರನ್ನು ಸೋತ ನಂತರವೂ ಉಪಮುಖ್ಯಮಂತ್ರಿ ಮಾಡಲಾಗಿತ್ತು. ಜಗದೀಶ ಶೆಟ್ಟರ್ ಅವರಿಗೆ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಇಷ್ಟು ಮಾಡಿದ ಮೇಲೂ ಪಕ್ಷವನ್ನು ಬಿಟ್ಟು ಹೋಗುವ ಮುನ್ನ ಚಿಂತನೆ ಮಾಡಬೇಕಿತ್ತು ಎಂದರು.

 

    ಪಕ್ಷದ ಕಾರ್ಯಕರ್ತರಿಗೂ ಸ್ಥಾನಮಾನ ಸಿಗಬೇಕು. ಬಿಜೆಪಿ ಕಾರ್ಯಕರ್ತರಿಗೆ ಅವಕಾಶವನ್ನು ಒದಗಿಸಿಕೊಡುತ್ತದೆ. ಇಬ್ಬರು ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ತುಂಬಾ ಪಶ್ಚಾತ್ತಾಪವನ್ನು ಪಡುತ್ತಾರೆ. ಬಿಜೆಪಿ ಪಕ್ಷದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೆಲಸ ಮಾಡುವುದು ತುಂಬಾ ಗೌರವದ ಮಾತಾಗಿದೆ. ಆದರೂ ಅದರಿಂದ ದೂರ ಹೋದವರು ಭವಿಷ್ಯಲ್ಲಿ ತುಂಬಾ ಅನುಭವಿಸಬೇಕಾಗುತ್ತದೆ. ಮುಳುಗುವ ಹಡಗಿನಲ್ಲಿ ಪಯಣ ಎಂದು ವ್ಯಂಗ್ಯವಾಡಿದರು..

     ಬಿಜೆಪಿ ದೇಶದ ಅತಿ ದೊಡ್ಡ ಪಕ್ಷವಾಗಿದೆ. ಆದರೆ, ಇವರೆಲ್ಲಾ ಹೋಗಿರುವ  ಕಾಂಗ್ರೆಸ್ ಮುಕ್ತವಾಗುತ್ತಿದೆ, ಕಾಂಗ್ರೆಸ್ ಮುಳುಗುತ್ತಿದೆ. ಇಂತಹ ಪಕ್ಷದಲ್ಲಿ ಹೋಗೋದು ಅವರ ಸ್ವಾರ್ಥಕ್ಕಾಗಿ ಹೋಗಿದ್ದಾರೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap