ಶೋಭಾ ಶೆಟ್ಟಿಗೆ ವೇದಿಕೆ ಮೇಲೆ ಸುದೀಪ್ ಕ್ಲಾಸ್

ಬೆಂಗಳೂರು :

   ಬಿಗ್ ಬಾಸ್ ಕನ್ನಡ ಸೀಸನ್ 11’ 50ನೇ ದಿನಕ್ಕೆ ಕಾಲಿಟ್ಟಿದೆ. ಹೀಗಿರುವಾಗಲೇ ಎರಡು ವೈಲ್ಡ್​ ಕಾರ್ಡ್ ಎಂಟ್ರಿಗಳನ್ನು ಕರೆಸಲಾಗಿದೆ. ರಿಯಾಲಿಟಿ ಶೋಗಳ ಮೂಲಕ ಫೇಮಸ್ ಆದ ರಜತ್ ಹಾಗೂ ತೆಲುಗು ಬಿಗ್ ಬಾಸ್​ನಲ್ಲಿ ಸ್ಪರ್ಧಿಸಿದ ಅನುಭವ ಇರುವ ಶೋಭಾ ಶೆಟ್ಟಿ ದೊಡ್ಮನೆಗೆ ಎಂಟ್ರಿ ಪಡೆದಿದ್ದಾರೆ. ವೇದಿಕೆ ಏರಿದಾಗ ಸುದೀಪ್ ಅವರ ಬಗ್ಗೆ ಶೋಭಾ ಮೆಚ್ಚುಗೆ ವ್ಯಕ್ತಪಡಿಸಿದರು. ಸಲಿಗೆ ಪಡೆಯಲು ಪ್ರಯತ್ನಿಸಿದ ಅವರಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.

   ಶೋಭಾ ಶೆಟ್ಟಿ ತೆಲುಗು ಬಿಗ್ ಬಾಸ್​ನಲ್ಲಿ ಈ ಮೊದಲು ಸ್ಪರ್ಧಿಸಿದ್ದರು. ಅಲ್ಲಿ ಆ್ಯಂಕರ್ ಅಕ್ಕಿನೇನಿ ನಾಗಾರ್ಜುನ. ಅವರು ನಿರೂಪಣೆಯನ್ನು ಚೆನ್ನಾಗಿಯೇ ಮಾಡುತ್ತಾರೆ. ಆದರೆ, ಸುದೀಪ್ ರೀತಿ ಖಡಕ್ ಆಗಿ ಅವರು ನಿರೂಪಣೆ ಮಾಡಿದ್ದು ಕಡಿಮೆ. ಹೀಗಾಗಿ, ಏನೇ ಮಾತನಾಡಿದರೂ ನಡೆಯುತ್ತದೆ ಎನ್ನುವ ಭಾವನೆ ಅಲ್ಲಿನ ಸ್ಪರ್ಧಿಗಳಿಗೆ ಮೂಡಿರುತ್ತದೆ. ಈಗ ಶೋಭಾ ಶೆಟ್ಟಿ ಅವರು ಸುದೀಪ್ ಎದುರು ಚಿಲ್ ಆಗಿ ಮಾತನಾಡಿಕೊಂಡಿದ್ದರು. ಆದರೆ, ಅವರು ಯಾವಾಗ ಲಯ ತಪ್ಪಿದರು ಎಂಬುದು ಗೊತ್ತಾಯಿತೋ ಆಗ ಸುದೀಪ್ ಕ್ಲಾಸ್ ತೆಗೆದುಕೊಂಡರು. ಇದರ ಬಿಸಿ ಶೋಭಾಗೆ ತಟ್ಟಿದೆ.

   ‘ನಿಮ್ಮ ಫೇವರಿಟ್ ಸ್ಪರ್ಧಿ ಯಾರು’ ಎಂದು ಸುದೀಪ್ ಕೇಳಿದರು. ‘ನಾನು ಫೇವರಿಟ್ ಸ್ಪರ್ಧಿ ಅಂತ ಹೇಳೋಕೆ ಆಗಲ್ಲ. ನಾವು ಹೊರಗೆ ನೋಡೋದೇ ಬೇರೆ ಇರುತ್ತದೆ..’ ಎಂದು ಏನನ್ನೋ ಹೇಳಲು ಹೊರಟರು ಶೋಭಾ. ಆಗ ಸುದೀಪ್ ನಗುತ್ತಲೇ ಶೋಭಾಗೆ ಕ್ಲಾಸ್ ತೆಗೆದುಕೊಂಡರು. ‘ನಿಮ್ಮ ಪ್ರಶ್ನೆಯನ್ನು ನೀವೆ ಆಯ್ಕೆ ಮಾಡಿಕೊಳ್ಳಬೇಡಿ. ಇದು ತೆಲುಗು ಬಿಗ್ ಬಾಸ್ ಕಾದು. ಪಕ್ಕಾ ಕನ್ನಡ. ಪ್ರಶ್ನೆ ನಮ್ಮದು, ಉತ್ತರ ಮಾತ್ರ ನಿಮ್ಮದು’ ಎಂದರು ಸುದೀಪ್. 

   ‘10 ವರ್ಷ ಬಿಗ್ ಬಾಸ್ ನಡೆಸಿಕೊಟ್ಟಿದ್ದೀನಿ. ಇದು 11ನೇ ವರ್ಷ. ಹಲವರು ರೀತಿಯ ಜನರನ್ನು ನೋಡಿದ್ದೇನೆ’ ಎಂದರು ಸುದೀಪ್. ‘ಹೋಗಲಿ ಬಿಡಿ ನಿಮಗೆ ಟಫ್ ಸ್ಪರ್ಧಿ ಯಾರು’ ಎಂದು ಕೇಳಿದರು. ಇದಕ್ಕೆ ‘ಯಾರೂ ಇಲ್ಲ’ ಎಂಬ ಉತ್ತರ ಶೋಭಾ ಕಡೆಯಿಂದ ಬಂತು. ‘ಹಾಗಿದ್ರೆ ಇಲ್ಲೇ ಕಪ್ ಹಿಡ್ಕೊಂಡು ಹೋಗಿ ಬಿಡಿ’ ಎಂದು ಸುದೀಪ್ ಅವರು ಕಾಲೆಳೆದರು.