ಶಿರಾ:
ಪ್ರಾಬಲ್ಯ ಮೆರೆದ ಪಕ್ಷೇತರರು – ಅತಂತ್ರ ಸ್ಥಿತಿಯಲ್ಲಿ ನಗರಸಭೆ
ಇಲ್ಲಿನ ನಗರಸಭೆಯ ಚುನಾವಣೆಯು ಡಿ.27 ರಂದು ನಡೆದು, ಡಿ.30 ರಂದು ಫಲಿತಾಂಶ ಪ್ರಕಟಗೊಂಡಿದ್ದು ಯಾವುದೇ ಪಕ್ಷಕ್ಕೂ ಬಹುಮತ ಸಿಗದೆ ಅತಂತ್ರ ನಗರಸಭೆ ನಿರ್ಮಾಣವಾಗಿದೆ.
ನಗರಸಭೆಯ ಒಟ್ಟು 31 ವಾರ್ಡ್‍ಗಳ ಪೈಕಿ 30 ವಾರ್ಡ್‍ಗಳಲ್ಲಿ ಚುನಾವಣೆ ನಡೆದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 11 ಮಂದಿ, ಬಿ.ಜೆ.ಪಿ.4, ಜೆ.ಡಿ.ಎಸ್. 7 ಹಾಗೂ ಪಕ್ಷೇತರರು 8 ಮಂದಿ ವಿಜೇತರಾಗಿದ್ದಾರೆ. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ನಗರಸಭೆಯ ಆಡಳಿತದ ಚುಕ್ಕಾಣಿ ಹಿಡಿಯಲು ವಿವಿಧ ಪಕ್ಷಗಳು ತೀತ್ರವಾದ ಕಸರತ್ತು ನಡೆಸಬೇಕಿದೆ.
ಕಳೆದ ಬಾರಿ ಕೇವಲ ಒಂದು ಸ್ಥಾನ ಪಡೆದಿದ್ದ ಬಿ.ಜೆ.ಪಿ. ಪಕ್ಷವು ಈ ಬಾರಿ 4 ಸ್ಥಾನಗಳನ್ನು ಗೆದ್ದಿದ್ದರೆ, ಕಳೆದ ಬಾರಿ 15 ಮಂದಿ ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಈ ಬಾರಿ 4 ಸ್ಥಾನಗಳನ್ನು ಕಳೆದುಕೊಂಡಿದ್ದರೂ ಅತ್ಯಧಿಕ 11 ಸ್ಥಾನಗಳನ್ನು ಪಡೆಯುವ ಮೂಲಕ ಅತ್ಯಧಿಕ ಸ್ಥಾನ ಪಡೆದ ಪಕ್ಷವಾಗಿ ಹೊರಹೊಮ್ಮಿದೆ.
ಜೆ.ಡಿ.ಎಸ್. 7 ಸ್ಥಾನಗಳೊಂದಿಗೆ ಎರಡನೆಯ ಸ್ಥಾನದಲ್ಲಿದ್ದು ಅಧಿಕಾರ ಹಿಡಿಯುವ ಮ್ಯಾಜಿಕ್ ನಂಬರ್ 16 ಸ್ಥಾನ ಪಡೆಯಲು ಕಾಂಗ್ರೆಸ್ ಪಕ್ಷವು ಜೆ.ಡಿ.ಎಸ್. ಇಲ್ಲವೇ ಪಕ್ಷೇತರರ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ.
ವಿಧಾನಸಭಾ ಉಪ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಬಿ.ಜೆ.ಪಿ.ಗೆ ಫಲಿತಾಂಶ ಮುಖ ಭಂಗವಾಗಿದ್ದು, ಇತ್ತೀಚೆಗೆ ಮೇಲ್ಮನೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಂಭ್ರಮದಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೂ ನಿರೀಕ್ಷಿತ ಬಹುಮತ ಲಭ್ಯವಾಗದೆ ಹಿನ್ನಡೆಯಾಗಿದೆ.
1ನೇ ವಾರ್ಡಿನಲ್ಲಿ ಬಿ.ಜೆ.ಪಿ. ಪಕ್ಷದ ರಂಗರಾಜು, 2ನೇ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ತೇಜ ಎಲ್.ಭಾನುಪ್ರಕಾಶ್, 3ನೇ ವಾರ್ಡಿನಲಿ ್ಲಮಂದಾರ ಆರ್.ಉಗ್ರೇಶ್, 4ನೇ ವಾರ್ಡಿನಲ್ಲಿ ಜೆ.ಡಿ.ಎಸ್..ನ ಆರ್.ತ್ರಿವೇಣಿ, 5ನೇ ವಾರ್ಡಿನಲ್ಲಿ ಜೆ.ಡಿ.ಎಸ್. ಪಕ್ಷದ ಬಿ.ಆಂಜಿನಪ್ಪ, 6ನೇ ವಾರ್ಡಿನಲ್ಲಿ ಸತ್ರಂತ್ರ ಅಭ್ಯರ್ಥಿ ಗಿರಿಜಾ ಎಸ್.ವಿಜಯಕುಮಾರ್, 7ನೇ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಶಿವಶಂಕರ್, 8ನೇ ವಾರ್ಡಿನಲ್ಲಿ ಸ್ವತಂತ್ರ ಅಭ್ಯರ್ಥಿ ಎಸ್.ಎಲ್.ರಂಗನಾಥ್, 9ನೇ ವಾರ್ಡಿನಲ್ಲಿ ಜೆ.ಡಿ.ಎಸ್. ಪಕ್ಷದ ಕೆ.ರವಿಶಂಕರ್,
10ನೇ ವಾರ್ಡಿನಲ್ಲಿ ಸ್ವತಂತ್ರ ಅಭ್ಯರ್ಥಿ ಎಸ್.ಎಸ್.ಅಜಯ್‍ಕುಮಾರ್, 11ನೇ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಮೊಹಮದ್ ಜಾಫರ್, 12ನೇ ವಾರ್ಡಿನಲ್ಲಿ ಸ್ವತಂತ್ರ ಅಭ್ಯರ್ಥಿ ಸಾನಿಯಾ ಆರ್.ಖಾದರ್ ಆಯ್ಕೆಗೊಂಡಿದ್ದಾರೆ.
13ನೇ ವಾರ್ಡಿನಲ್ಲಿ ಜೆ.ಡಿ.ಎಸ್.ನ ಮೊಹಮದ್ ಸಫೀರ್, 14ನೇ ವಾರ್ಡಿನಲ್ಲಿ ಕಾಂಗ್ರೆಸ್‍ನ ರಫೀವುಲ್ಲಾ, 15ನೇ ವಾರ್ಡಿನಲ್ಲಿ ಸ್ವತಂತ್ರ ಅಭ್ಯರ್ಥಿ ಇರ್ಷಾದ್ ಉನ್ನೀಸಾ, 16ನೇ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಸಯ್ಯದ್ ಮರ್ಜಿಯಾ ಫಿರ್ದೋಸ್, 17ನೇ ವಾರ್ಡಿನಲ್ಲಿ ಕಾಂಗ್ರೆಸ್‍ನ ಜೀಶಾನ್ ಮೊಹಮದ್, 18ನೇ ವಾರ್ಡಿನಲ್ಲಿ ಕಾಂಗ್ರೆಸ್‍ನ ಬುರ್ಹಾನ್ ಮೊಹಮದ್,
19ನೇ ವಾರ್ಡಿನಲ್ಲಿ ಕಾಂಗ್ರೆಸ್‍ನ ಕಾಂಗ್ರೆಸ್‍ವ ರುಖೈಯಾ ಫರ್ವಿನ್, 20ನೇ ವಾರ್ಡಿನಲ್ಲಿ ಕಾಂಗ್ರೆಸ್‍ನ ರೆಹನಾ ಖಾನಂ, 22ನೇ ವಾರ್ಡಿನಲ್ಲಿ ಸ್ವತಂತ್ರ ಅಭ್ಯರ್ಥಿ ನಾಸಿರ್‍ಖಾನ್, 23ನೇ ವಾರ್ಡಿನಲ್ಲಿ ಸ್ವತಂತ್ರ ಅಭ್ಯರ್ಥಿ ಆರ್ಮಿನ್‍ಖಾನಂ ಫರ್ಮಾನ್, 24ನೇ ವಾರ್ಡಿನಲ್ಲಿ ಸ್ವತಂತ್ರ ಅಭ್ಯರ್ಥಿ ಸಮ್ರಿನ್ ಖಾನಂ, 25ನೇ ವಾರ್ಡಿನಲ್ಲಿ ಜೆ.ಡಿ.ಎಸ್. ಪಕ್ಷದ ಆರ್.ರಾಮು, 26ನೇ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಲಕ್ಷ್ಮೀಕಾಂತ್, 27ನೇ ವಾರ್ಡಿನಲ್ಲಿ ಬಿ.ಜೆ.ಪಿ.ಯ ಅಂಬುಜಾಕ್ಷಿ, 28ನೇ ವಾರ್ಡಿನಲ್ಲಿ ಬಿ.ಜೆ.ಪಿ. ಪಕ್ಷದ ಉಮಾ ವಿಜಯರಾಜ್, 29ನೇ ವಾರ್ಡಿನಲ್ಲಿ ಜೆ.ಡಿ.ಎಸ್. ಪಕ್ಷದ ಎಸ್.ಬಿ.ವಿಜಯಲಕ್ಷ್ಮೀ, 30ನೇ ವಾರ್ಡಿನಲ್ಲಿ ಬಿ.ಜೆ.ಪಿ.ಯ ಸ್ವಾತಿ ಮಂಜೇಶ್, 31ನೇ ವಾರ್ಡಿನಲ್ಲಿ ಕಾಂಗ್ರೆಸ್‍ನ ಪೂಜಾ ಪಿ. ಆಯ್ಕೆಗೊಂಡಿದ್ದಾರೆ.
19ನೇ ವಾರ್ಡಿನ ಕಾಂಗ್ರೆಸ್ ಪಕ್ಷದ ರುಖೈಯಾ ಫರ್ವೀನ್ 779 ಅತಿ ಹೆಚ್ಚು ಮತಗಳನ್ನು ಪಡೆದು ಆಯ್ಕೆಗೊಂಡಿದ್ದರೆ, 4ನೇ ವಾರ್ಡಿನ ಆರ್.ತ್ರಿವೇಣಿ 6 ಮತಗಳ ಅಂತರದಿಂದ, 9ನೇ ವಾರ್ಡಿನ ರವಿಶಂಕರ್ 7 ಮತಗಳು ಮತ್ತು 10ನೇ ವಾರ್ಡಿನ ಅಜಯ್‍ಕುಮಾರ್ 9 ಮತಗಳ ಅತ್ಯಂತ ಕಡಿಮೆ ಅಂತರದಿಂದ ಆಯ್ಕೆಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
