ಶಿವಮೊಗ್ಗ :
ಶಿವಮೊಗ್ಗ ಲೋಕಸಭೆ ಕ್ಷೇತ್ರ ಈ ಬಾರಿ ಎಲ್ಲರ ಗಮನ ಸೆಳೆದಿದೆ. ಬಿಜೆಪಿಯಿಂದ ಬಿ.ವೈ. ರಾಘವೇಂದ್ರ ಮತ್ತೊಮ್ಮೆ ಅಖಾಡಕ್ಕೆ ಇಳಿದಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್‌ನಿಂದ ಗೀತಾ ಶಿವರಾಜ್‌ಕುಮಾರ್ ಸ್ಪರ್ಧೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಕೆ. ಎಸ್. ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಕಾರಣಕ್ಕೆ ಶಿವಮೊಗ್ಗ ಲೋಕಸಭೆ ಕ್ಷೇತ್ರ ಭಾರಿ ಚರ್ಚೆಗೆ ಕಾರಣವಾಗಿದೆ
ಮತ್ತೊಂದು ಕಡೆ ಶಿವರಾಜ್‌ಕುಮಾರ್ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಈ ಬಾರಿ ಪತ್ನಿಯನ್ನು ಗೆಲ್ಲಿಸಲೇಬೇಕು ಅಂತ ಪಣತೊಟ್ಟಿದ್ದಾರೆ. ಈ ಕಾರಣಕ್ಕೆ ಈಗಾಗಲೇ ಶಿವಮೊಗ್ಗ ಸುತ್ತುವುದಕ್ಕೆ ಶುರು ಮಾಡಿದ್ದಾರೆ. ಶಿವರಾಜ್‌ಕುಮಾರ್ ಪ್ರಚಾರಕ್ಕೆ ಹೋಗಿದ್ದಾಗ. ಈ ವೇಳೆ ಅಭಿಮಾನಿಗಳು ಡೈಲಾಗ್ ಹೇಳುವಂತೆ ದುಂಬಾಲು ಬಿದ್ದರು. ಆಗ ಶಿವಣ್ಣ ಶಿವಮೊಗ್ಗ ನಂದು ಅಂತ ಡೈಲಾಗ್ ಹೊಡೆದಿದ್ದಾರೆ
“ಹೆಣ್ಣು ಮಕ್ಕಳು ಮನೆಗೆ ಬಂದರೆ ಏನಾದರೂ ಒಂದು ಉಡುಗೊರೆ ಕೊಡುತ್ತಾರೆ. ಸರಿ ಗೀತಾ ನಿಮ್ಮ ತವರು ಮನೆಗೆ ಬಂದಿದ್ದಾರೆ. ಯಾಕೆ ಎಂಪಿಯಾಗಿ ಗೆಲ್ಲಿಸಿ ಒಂದು ಉಡುಗೊರೆ ಕೊಡಬಾರದು. ಆಮೇಲೆ ಹೇಗಿರುತ್ತೆ ಅಂತ ನೋಡಿ. ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿ ಅಷ್ಟೇನೆ. ಖಂಡಿತಾ ಕೆಲಸ ಮಾಡುತ್ತಾರೆ ಅನ್ನೋ ಭರವಸೆಯನ್ನು ನಾನು ಕೊಡುತ್ತೇನೆ.” ಎಂದು ಶಿವಣ್ಣ ಹೇಳಿದ್ದಾರೆ.
ಸ್ಥಳೀಯರು ಡೈಲಾಗ್ ಹೇಳುವಂತೆ ಒತ್ತಾಯಿಸಿದ್ದಾಗ, “ಯೋ.. ಬರ್ಕಯ್ಯ.. ಮುಂದಾಗೋದು ಪೇಪರ್‌ನಲ್ಲಿ ಬರ್ಕೋ.. ಶಿವಮೊಗ್ಗ ನಂದು. ಇಲ್ಲಿ ಇರೋರೆಲ್ಲ ಶಿವಮೊಗ್ಗ ಹುಲಿಗಳು.. ನ್ಯಾಪಕ ಇರಲಿ.” ಎಂದು ಶಿವರಾಜ್‌ಕುಮಾರ್ ಡೈಲಾಗ್ ಹೊಡೆದಿದ್ದಾರೆ.