ಶಿಗ್ಗಾವಿ ತಾಲ್ಲೂಕಿನ ಹುಲಗೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಟಿಕೆಟ್ ವಂಚಿತ ಅಜ್ಜಂಪೀರ್ ಖಾದ್ರಿ ಮನವೊಲಿಕೆಗೆ ಜಮೀರ್ ಅಹ್ಮದ್ ಖಾನ್ ಅವರು ಅಜ್ಜಂಪೀರ್ ಅವರ ನಿವಾಸಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಖಾದ್ರಿ ಬೆಂಬಲಿಗರು ಜಮೀರ್ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಜಮೀರ್ ಕಾರಿನ ಹಿಂಬದಿಯ ಕಾರಿನ ಗ್ಲಾಸ್ ನಜ್ಜುಗುಜ್ಜಾಗಿದೆ. KA 27 N 8960 ಹೆಸರಿನ ಕಾರಿನ ಗ್ಲಾಸ್ ಒಡೆದಿರುವ ಖಾದ್ರಿ ಬೆಂಬಲಿಗರು. ಕಾರು ಅಡ್ಡ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಸಾವಿರಾರು ಖಾದ್ರಿ ಅಭಿಮಾನಿಗಳು.
ಇನ್ನೊಂದೆಡೆ ಅಜ್ಜಂಪೀರ್ ಖಾದ್ರಿ ಅವರು ಕೊನೇ ಕ್ಷಣದಲ್ಲಿ ಬೈಕಿನಲ್ಲಿ ಬಂದು ನಾಮಪತ್ರ ಕೂಡ ಸಲ್ಲಿಸಿದ್ದಾರೆ. ಶಿಗ್ಗಾವಿಯ ತಹಶೀಲ್ದಾರ್ ಕಚೇರಿಗೆ ಓಡೋಡಿ ಬಂದ ಖಾದ್ರಿ ಅವರು ಓಡುತ್ತಲೇ ಒಳಗೆ ಹೋಗಿ ಪಕ್ಷೇತರ ಅಭ್ಯರ್ಥಿಯಾಗಿ ಅವರು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಬಳಿಕ ಶಿಗ್ಗಾವಿ ಪಟ್ಟಣದ ತಹಶೀಲ್ದಾರ್ ಕಚೇರಿ ಬಳಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಹುಬ್ಬಳ್ಳಿಯವ, ಕಾಂಗ್ರೆಸ್ ಅಭ್ಯರ್ಥಿ ಹಾನಗಲ್‌ನವನು, ಹೀಗಾಗಿ ನನಗೆ ಹೊರಗಿವರೆ ಟಾರ್ಗೆಟ್. ಬಿಜೆಪಿ ಸೋಲಿಸೋದು ಒಂದೇ ನನ್ನ ಗುರಿ ಈ ತಾಲ್ಲೂಕಿನ ಮಣ್ಣಲ್ಲಿ ಹುಟ್ಟಿ ಜನರ ಸೇವೆ ಮಾಡಿದ್ದೇನೆ, ಬಡವರ ಸೇವೆ ಮಾಡಿದ್ದೇನೆ, ನಾನು ತಾಲ್ಲೂಕಿನ ಮಗ. ಹೊರಗಿನವರಿಗೆ ಯಾವುದೆ ಕಾರಣಕ್ಕೂ ಅವಕಾಶ ಕೊಡಲ್ಲಾ, ಯಾರು ನನ್ನ ಮನವಲಿಕೆ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದರು.
ದರ್ಗಾಕೆ ನಮಾಜ್ ಗಾಗಿ ಜಮೀರ್ ಅಹಮದ್ ಬಂದಿದ್ದರು, ನನ್ನ ಗೆಲವಿನ ಬಗ್ಗೆ ದರ್ಗಾ ಬಳಿ ಬೇಡಿಕೊಂಡಿದ್ದೇನೆ. ಪಠಾಣ್ ಗೆ ತಕ್ಕ ಪಾಠ ಕಲಿಸ್ತೇವಿ, ಕಾಂಗ್ರೆಸ್ ಸೋಲಿಸೋದೆ ನನ್ನ ಗುರಿ, ಜನರೇ ನನ್ನ ತಿರ್ಪುಗಾಗರರು ಎಂದು ನಾಮಪತ್ರ ಸಲ್ಲಿಕೆ ಬಳಿಕ ಗುಡುಗಿದರು.
