ಶಿವಮೊಗ್ಗ:
ಸಕ್ರೆಬೈಲು ಆನೆ ಶಿಬಿರದಲ್ಲಿ ದುಷ್ಕರ್ಮಿಗಳು ಆನೆಯ ಮೇಲೆ ದಾಳಿ ಮಾಡಿ ಬಾಲವನ್ನು ತುಂಡರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿಗಳು ಭಾನುಮತಿ ಎಂಬ 18 ತಿಂಗಳ ಗರ್ಭಿಣಿ ಆನೆಯ ಮೇಲೆ ದಾಳಿ ಮಾಡಿದ್ದರು. ತುಂಗಾ ನದಿಯಲ್ಲಿ ಸ್ನಾನ ಮಾಡಿಸಿ, ಸಿಬ್ಬಂದಿ ಶಿಬಿರದ ಆವರಣದಲ್ಲಿ ಆನೆಯನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ದುಷ್ಕರ್ಮಿಗಳು ಈ ಕುಕೃತ್ಯ ಎಸಗಿದ್ದಾರೆ. ಪ್ರಸ್ತುತ ಅರಣ್ಯ ಇಲಾಖೆ ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.
ನೆಲದ ಮೇಲೆ ರಕ್ತ ಚಿಮ್ಮುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಆನೆ ಬಳಿ ಬಂದು ನೋಡಿದಾಗ ಬಾಲ ತುಂಡಾಗಿತ್ತು. ಆರೋಪಿಗಳು ಹರಿತವಾದ ಆಯುಧದಿಂದ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆನೆಯ ಬಾಲವನ್ನು ಅರ್ಧ ಇಂಚು ಕತ್ತರಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಪ್ರಸನ್ನ ಕೃಷ್ಣ ಪಟಗಾರ ತಿಳಿಸಿದ್ದಾರೆ.