ವಿಜಯಪುರ:
ರಾಜೀನಾಮೆ ಸಲ್ಲಿಸಿದಂದಿನಿಂದ ತಾನೇನೂ ಸಾರ್ವಜನಿಕ ಬದುಕಿನಿಂದ ದೂರ ಹೋಗಿಲ್ಲ ಅವರ ನಡುವೆಯೇ ಇದ್ದೇನೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.ನಾನು ಈಗಲೂ ರಾಜೀನಾಮೆಗೆ ಸಿದ್ಧನಿದ್ದೇನೆ, ಅವತ್ತೂ ಸಿದ್ದನಿದ್ದೆ. ರಾಜೀನಾಮೆ ನೀಡಿರು ರೀತಿ ತಪ್ಪು ಎಂದರೆ ಬ್ಯಾಂಕ್ ಸಹಿ ಮಾಡಿ ಕೊಡುವೆ ನೀವೇ ತಗೊಂಡು ಹೋಗಿ ಕೊಡಿ ಎಂದರು, ತನ್ನ ಸವಾಲನ್ನು ಯತ್ನಾಳ್ ಹೇಗೆ ಸ್ವೀಕರಿಸುತ್ತಾರೆ ಅನ್ನೋದು ಅವರಿಗೆ ಬಿಟ್ಟಿದ್ದು, ನಾನು ಈಗಾಗಲೇ ಸ್ಪಷ್ಟಿಕರಣ ನೀಡಿರುವೆ ಎಂದರು.
ಕುಹಕ ಬುದ್ದಿ ನಿಲ್ಲಿಸಬೇಕು ಎಂದರೆ ಯುದ್ಧ ಆಗಲೇ ಬೇಕು: ಪಾಕಿಸ್ತಾನದೊಂದಿಗೆ ಯುದ್ಧವಾದರೆ ತಪ್ಪಿಲ್ಲ. ಈ ವಿಚಾರವಾಗಿ ದೇಶದ ಎಲ್ಲ ಪಕ್ಷಗಳು, ದೇಶದ ಜನರು ಸಹಿತ ಬೆಂಬಲಿಸಿವೆ. ಯುದ್ಧ ಆಗಲೇ ಬೇಕಲ್ಲ, ಕುಹಕ ಬುದ್ದಿ ನಿಲ್ಲಿಸಬೇಕು ಎಂದರೆ ಯುದ್ಧ ಆಗಲೇ ಬೇಕು, ಈ ವಿಚಾರವಾಗಿ ಎಲ್ಲ ಸರ್ಕಾರ ಬೆಂಬಲಿಸುತ್ತಿವೆ. ದೇಶದ ಜನರೇ ಸರ್ಕಾರದ ಜೊತೆಗೆ ಇರುತ್ತಾರೆ ಎಂದರು.
