ಬೆಂಗಳೂರು :
ಶಿವರಾಜ್ಕುಮಾರ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರು ಈಗ ಒಂದು ಬ್ರೇಕ್ನಲ್ಲಿ ಇದ್ದಾರೆ. ಅವರಿಗೆ ಕ್ಯಾನ್ಸರ್ ಇರುವ ಕಾರಣ ಅಮೆರಿಕ ತೆರಳಿದ್ದು, ಅಲ್ಲಿ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಸಂದರ್ಭದಲ್ಲಿ ಅವರ ಹಳೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
‘ಜೈಲರ್’ ಸಿನಿಮಾದಲ್ಲಿ ಶಿವರಾಜ್ಕುಮಾರ್ ನಟಿಸಿದ್ದರು. ಅವರ ಎಂಟ್ರಿಗೆ ಸಖತ್ ಸಿಳ್ಳೆ ಬಿದ್ದಿತ್ತು. ರಜನಿಕಾಂತ್ ಕೂಡ ಶಿವರಾಜ್ಕುಮಾರ್ಗೆ ಕರೆ ಮಾಡಿ, ‘ಒಂದೇ ದೃಶ್ಯದಲ್ಲಿ ಎಲ್ಲರನ್ನೂ ತಿಂದ್ಕೊಂಡು ಬಿಟ್ಯಲ್ಲ’ ಎಂದು ಹೆಮ್ಮೆಯಿಂದ ಹೇಳಿದ್ದರಂತೆ. ಧನುಷ್ಗೂ ಈ ಚಿತ್ರ ಇಷ್ಟ ಆಗಿದ್ದು, ಕ್ಯಾಪ್ಟನ್ ಮಿಲ್ಲರ್ ಈವೆಂಟ್ನಲ್ಲಿ ಮಾತನಾಡಿದ್ದರು.
‘ಜೈಲರ್ ಕ್ಲೈಮ್ಯಾಕ್ಸ್ ಸ್ಲೋ ಮೋಷನ್ನಲ್ಲಿ ನಡೆದು ಬಂದಹಾಗೆಯೇ ತಮಿಳುನಾಡು ಜನರ ಮನಸ್ಸಲ್ಲೂ ಹಾಗೆಯೇ ನಡೆದು ಹೋದ್ರಿ. ಮನುಷ್ಯನ ಮನಸ್ಸಿಗೆ, ನಿಮ್ಮ ಕೆಲಸಕ್ಕೆ ನಾನು ದೊಡ್ಡ ಅಭಿಮಾನಿ. ಅಪ್ಪನ ಹೆಸರನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದಕ್ಕೆ ದೊಡ್ಡ ಉದಾಹರಣೆ. ನನ್ನ ಮಗ ಇದ್ದಾನೆ. ನಿಮ್ಮ ನೋಡಿ ಕಲಿಯಬೇಕು’ ಎಂದರು.
ಆ ಬಳಿಕ ಎದ್ದು ನಿಂತು ಶಿವರಾಜ್ಕುಮಾರ್ ಅವರಿಗೆ ಜೋರಾದ ಚಪ್ಪಾಳೆ ತಟ್ಟಲು ಹೇಳಿದರು. ಅಲ್ಲಿ ನೆರೆದಿದ್ದ ಸಾವಿರಾರು ಮಂದಿ ಶಿವರಾಜ್ಕುಮಾರ್ ಅವರಿಗೆ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಈಗ ವಿಡಿಯೋನ ಎಲ್ಲೂ ವೈರಲ್ ಮಾಡುತ್ತಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ. ಶಿವರಾಜ್ಕುಮಾರ್ ಅವರು ಸದ್ಯ ಅಮೆರಿಕದಲ್ಲಿ ಇದ್ದಾರೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಾ ಇದ್ದಾರೆ. ಶೀಘ್ರವೇ ಅವರು ಶಸ್ತ್ರಚಿಕಿತ್ಸೆ ಪಡೆಯಬೇಕಿದೆ.