ಬೆಂಗಳೂರು:
ಅವರು ನಿರ್ಮಾಣದ ಮೂಲಕ ಮನೆ ಮಾತಾದವರು. ಮನೆಯಲ್ಲಿ ತಾಯಿ ಆಗಿಯೂ ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿದ್ದರು. ಇನ್ನು ಪಾರ್ವತಮ್ಮ ಅವರನ್ನು ಕಂಡರೆ ಶಿವರಾಜ್ಕುಮಾರ್ಗೆ ವಿಶೇಷ ಗೌರವ ಇದೆ. ಅನೇಕ ವೇದಿಕೆ ಮೇಲೆ ಶಿವಣ್ಣ ಅಮ್ಮನ ಬಗ್ಗೆ ಹೇಳುತ್ತಾ ಭಾವುಕರಾಗಿದ್ದರು. ಈಗ ಅವರು ತಾಯಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.
ಜೀ ಕನ್ನಡದಲ್ಲಿ ಪ್ರಸಾರವಾಗುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಈಗಾಗಲೇ ಐದು ಸೀಸನ್ಗಳನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದೆ. ಈಗ ಆರನೇ ಸೀಸನ್ ಆರಂಭವಾಗಿದೆ. ಅನೇಕ ಪ್ರತಿಭೆಗಳಿಗೆ ವೇದಿಕೆ ಆಗಿರುವ ಈ ಶೋಗೆ ಶಿವಣ್ಣ ಜಡ್ಜ್ ಆಗಿದ್ದಾರೆ. ಶಿವರಾಜ್ಕುಮಾರ್ ಡ್ಯಾನ್ಸ್ ಮೂಲಕವೂ ಜನಪ್ರಿಯತೆ ಗಳಿಸಿದವರು. ಈ ಕಾರಣಕ್ಕೆ ಶಿವಣ್ಣ ಅವರನ್ನು ಜಡ್ಜ್ ಸ್ಥಾನದಲ್ಲಿ ಕೂರಿಸಲಾಗಿದೆ.
ಇಂದು (ಮೇ 8) ವಿಶ್ವ ತಾಯಂದಿರ ದಿನ. ಈ ವಿಶೇಷ ದಿನದಂದು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6’ ವಿಶೇಷ ಎಪಿಸೋಡ್ ಏರ್ಪಡಿಸಲಾಗಿತ್ತು. ಈ ಎಪಿಸೋಡ್ನಲ್ಲಿ ಅಮ್ಮನ ಕಾನ್ಸೆಪ್ಟ್ ಮೇಲೆ ಡ್ಯಾನ್ಸ್ ಮಾಡಲಾಯಿತು. ಕೊನೆಯಲ್ಲಿ ಜಡ್ಜ್ ಹಾಗೂ ನಿರೂಪಕಿ ಅನುಶ್ರೀ ಅವರು ತಾಯಿ ಇರುವ ಫೋಟೋವನ್ನು ಪ್ರದರ್ಶನ ಮಾಡಲಾಯಿತು. ಶಿವಣ್ಣ-ಪಾರ್ವತಮ್ಮನ ಫೋಟೋ ಎಲ್ಲರ ಗಮನ ಸೆಳೆಯಿತು.
ಯೂಕ್ರೇನ್ ಶಾಲೆ ಮೇಲೆ ರಷ್ಯಾ ಬಾಂಬ್: ಮಕ್ಕಳು ಸೇರಿ 60 ಜನ ಮೃತಪಟ್ಟಿರುವ ಶಂಕೆ
ಈ ಫೋಟೋ ನೋಡುತ್ತಿದ್ದಂತೆ ಶಿವರಾಜ್ಕುಮಾರ್ ಅವರು ಗಳಗಳನೆ ಅತ್ತುಬಿಟ್ಟರು. ದುಃಖವನ್ನು ನಿಯಂತ್ರಿಸಿಕೊಳ್ಳಲು ಅವರ ಬಳಿಯಿಂದ ಸಾಧ್ಯವೇ ಆಗಲಿಲ್ಲ. ಜಡ್ಜ್ಗಳು ಶಿವಣ್ಣ ಅವರನ್ನು ಸಮಾಧಾನ ಮಾಡಿದರು. ರಕ್ಷಿತಾ ಕೂಡ ಶಿವಣ್ಣ ಅವರನ್ನು ಸಮಾಧಾನ ಮಾಡೋಕೆ ಪ್ರಯತ್ನಿಸಿದರು. ಕೊನೆಗೂ ಅವರು ಸಮಾಧಾನಗೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
