ಶಾಕಿಂಗ್: ಧೋನಿ ಬಳಿಕ ನಾಯಕತ್ವ ತೊರೆಯಲು ಮುಂದಾದ ಮತ್ತೊಬ್ಬ ಸ್ಟಾರ್ ಆಟಗಾರ

ಎಂಎಸ್ ಧೋನಿ  ಸಿಎಸ್​​ಕೆ ತಂಡದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಐಪಿಎಲ್ 2022 ರಲ್ಲಿ ಚೆನ್ನೈ ತಂಡವನ್ನು ರವೀಂದ್ರ ಜಡೇಜಾ ಮುನ್ನಡೆಸಲಿದ್ದಾರೆ. ಈ ಆಘಾತದಿಂದ ಅಭಿಮಾನಿಗಳು ಇನ್ನೂ ಹೊರ ಬಂದಿಲ್ಲ. ಇದರ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್  ಹತ್ತಿರವಾಗುತ್ತಿದ್ದಂತೆ ಕೆಲ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಪ್ರಮುಖ ಆಟಗಾರರ ಗೈರು, ಇಂಜುರಿ ತೊಂದರೆ ಒಂದು ಕಡೆಯಾದರೆ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿತ್ತು. ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಸಿಎಸ್​​ಕೆ ತಂಡದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

‘ಉಭಯ ಸದನ’ಗಳಲ್ಲಿ ‘ಮೇಕೆದಾಟು ಯೋಜನೆ’ ಕುರಿತ ನಿರ್ಣಯಕ್ಕೆ ಧ್ವನಿಮತದ ಅಂಗೀಕಾರ 

ಐಪಿಎಲ್ 2022 ರಲ್ಲಿ ಚೆನ್ನೈ ತಂಡವನ್ನು ನೂತನ ನಾಯಕರಾಗಿ ರವೀಂದ್ರ ಜಡೇಜಾ  ಮುನ್ನಡೆಸಲಿದ್ದಾರೆ ಎಂದು ಸುದ್ದಿಯನ್ನ ಸಿಎಸ್​ಕೆ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿತು. ನಾಲ್ಕು ಬಾರಿ ಸಿಎಸ್​ಕೆ ತಂಡಕ್ಕೆ ಟ್ರೋಫಿ ತಂದುಕೊಟ್ಟ ಧೋನಿ ದಿಢೀರ್ ಆಗಿ ಈರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಸದ್ಯ ಅಭಿಮಾನಿಗಳಿಗೆ ಸಮಾಧಾನಕರ ಸಂಗತಿ ಎಂದರೆ ಧೋನಿ ಕನಿಷ್ಠ ತಂಡದಲ್ಲಿದ್ದಾರೆ ಎಂಬುದು. ಇದೀಗ ಈ ದೊಡ್ಡ ಆಘಾತದಿಂದ ಹೊರ ಬರುವ ಹೊತ್ತಿಗೆ ಮತ್ತೊಂದು ಶಾಕ್ ಅಭಿಮಾನಿಗಳಿಗೆ ಎದುರಾಗಿದೆ.

ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದ ನಂತರ ಇದೀಗ ಮತ್ತೊಬ್ಬ ಸ್ಟಾರ್ ಆಟಗಾರ ನಾಯಕತ್ವ ತ್ಯಜಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಅವರು ಸದ್ಯ ಸಾಗುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಬಳಿಕ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ ಎಂದು ಹೇಳಲಾಗಿದೆ. ಇದು ರೂಟ್ ಅವರು ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಕೊನೆಯ ಟೆಸ್ಟ್ ಆಗಿದೆಯಂತೆ.

ನಮ್ಮ ಆರ್‌ಎಸ್‌ಎಸ್’ಎಂದ ಸ್ಪೀಕರ್ ಕಾಗೇರಿ, ಸದನದಲ್ಲಿ ಕೋಲಾಹಲ

ಕಳೆದ ಕೆಲವು ತಿಂಗಳುಗಳಿಂದ ಇಂಗ್ಲೆಂಡ್ ತಂಡ ಟೆಸ್ಟ್​ ಕ್ರಿಕೆಟ್​ನಲ್ಲಿ ತೀರಾ ಕಳಪೆ ಪ್ರದರ್ಶನ ತೋರುತ್ತಿದೆ. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಆಯಶಸ್ ಟೆಸ್ಟ್​ ಸರಣಿಯಲ್ಲೂ ಇಂಗ್ಲೆಂಡ್ ಹಿಂದೆಂದೂ ಅನುಭವಿಸದಷ್ಟು ಮಟ್ಟಿಗೆ ತೀರಾ ಮುಖಭಂಗಕ್ಕೆ ಒಳಗಾಯಿತು. ಆಯಶಸ್ ಸರಣಿಯ ಹೀನಾಯ ಸೋಲಿನ ಬಳಿಕ ಇಂಗ್ಲೆಂಡ್ ತಂಡದ ಕೋಚ್ ಕ್ರಿಸ್ ಸಿಲ್ವರ್​ವುಡ್ ಕೂಡ ತಮ್ಮ ಸ್ಥಾನದಿಂದ ಕೆಳಗಿಳಿದರು. ಆಗಲೇ ರೂಟ್ ನಾಯಕತ್ವದ ಬಗ್ಗೆ ಪ್ರಶ್ನೆ ಎದ್ದಿತ್ತು.

ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಆರಂಭಕ್ಕೂ ಮುನ್ನ ಮಾತನಾಡಿರುವ ಜೋ ರೂಟ್, “ಹೊಸ ಕೋಚ್ ಆಗಮನದಿಂದ ತಂಡದ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇದೆ. ಇಂಗ್ಲೆಂಡ್ ತಂಡವನ್ನು ಮುಂದೆಕ್ಕೆ ಕೊಂಡಯ್ಯೊಲು ನಾನೇ (ಹೊಸ ಕೋಚ್) ಸೂಕ್ತ ವ್ಯಕ್ತಿ ಎಂದು ಅವರು ಹೇಳಿದ್ದಾರೆ. ಹೆಡ್ ಕೋಚ್ ಬಂದು ಹೊಸದಾಗಿ ಯೋಚನೆ ಮಾಡಿದರೆ ಅದಕ್ಕೆ ನನ್ನ ತಕರಾರಿಲ್ಲ. ಯಾಕೆಂದರೆ ಅದು ಅವರ ನಿರ್ಧಾರ. ನಾನು ಇಂಗ್ಲೆಂಡ್​ನ ದೊಡ್ಡ ಅಭಿಮಾನಿ, ತಂಡ ಉತ್ತಮ ಪ್ರದರ್ಶನ ನೀಡುವುದು ನನಗೆ ಮುಖ್ಯ”, ಎಂದು ಹೇಳಿದ್ದಾರೆ.

2017 ರಲ್ಲಿ ಅಲೆಸ್ಟರ್ ಕುಕ್ ನಿವೃತ್ತಿ ನೀಡಿದ ಬಳಿಕ ಜೋ ರೂಟ್ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ ವಹಿಸಿದರು. ಇದು ವರೆಗೆ ಇವರು 116 ಟೆಸ್ಟ್ ಪಂದ್ಯಗಳನ್ನು ಆಡಿದ್ದು 50ರ ಸರಾಸರಿಯಲ್ಲಿ 9,884 ರನ್ ಕಲೆಹಾಕಿದ್ದಾರೆ. ಇದರಲ್ಲಿ 53 ಅರ್ಧಶತಕ ಮತ್ತು 25 ಶತಕ ಸೇರಿವೆ. 5 ದ್ವಿಶತಕ ಕೂಡ ಸೇರಿದೆ.

ಕಣ್ಮುಚ್ಚಿ ಬಿಡುವಷ್ಟರಲ್ಲೇ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಬಾಲಕ. ಕ್ಷಣಾರ್ಧದಲ್ಲೇ ಸಾವಿನ ದವಡೆಯಿಂದ ಪಾರಾದ ಭಯಾನಕ

ಸದ್ಯ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಮೊದಲ ಎರಡು ಟೆಸ್ಟ್ ಡ್ರಾ ಆಗಿದ್ದು ಇದೀಗ ಅಂತಿಮ ಟೆಸ್ಟ್​ನಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 204 ರನ್​ಗೆ ಆಲೌಟ್ ಆಗಿ ಮತ್ತೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಇಂಗ್ಲೆಂಡ್ 204 ರನ್ ಕಲೆಹಾಕಲು ಕಾರಣ ಆಗಿದ್ದು ಬೌಲರ್​​ಗಳು ಎಂದರೆ ತಪ್ಪಾಗಲಾರದು. 114 ರನ್​ಗೆ 9 ವಿಕೆಟ್ ಕಳೆದುಕೊಂಡ ಆಂಗ್ಲರಿಗೆ ಕೊನೇ ವಿಕೆಟ್​ಗೆ ಸಿಖೀದ್ (49) ಹಾಗೂ ಜ್ಯಾಕ್ ಲೀಚ್ (41) ಮಾನ ಉಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಇಂಗ್ಲೆಂಡ್ ಆಲೌಟ್ ಆಗುತ್ತಿದ್ದಂತೆ ಮೊದಲ ದಿನದಾಟವನ್ನು ಮುಕ್ತಾಯಗೊಳಿಸಲಾಯಿತು.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link