ಬೆಂಗಳೂರು
ಪ್ರತಿವರ್ಷ FC ಕಡ್ಡಾಯ
15 ವರ್ಷ ಮೇಲ್ಪಟ್ಟ ಎಲ್ಲ ವಾಹನಗಳನ್ನು ಗುಜರಿಗೆ ಹಾಕಬೇಕಿಲ್ಲ. ಆದರೆ, ವಾಹನಗಳ ಗುಜರಿ ನೀತಿಯನ್ವಯ 15 ವರ್ಷ ಮೇಲ್ಪಟ್ಟ ವಾಹನ ಚಾಲನೆಗೆ ಪ್ರತಿವರ್ಷ ಎಫ್.ಸಿ. ಕಡ್ಡಾಯವಾಗಿದ್ದು, ಹಳೆ ವಾಹನಗಳಿಗೆ ಹಸಿರು ತೆರಿಗೆಯ ಹೊರಬೀಳಲಿದೆ. ಪ್ರತಿವರ್ಷವೂ ಹಸಿರು ತೆರಿಗೆಯನ್ನು ಪಾವತಿಸಬೇಕಿದೆ.
ವಾಹನಗಳ ಗುಜರಿ ನೀತಿಯ ಪ್ರಕಾರ, 15 ವರ್ಷ ಮೇಲ್ಪಟ್ಟ ಮತ್ತು ಬಳಕೆಗೆ ಯೋಗ್ಯವಲ್ಲದ ವಾಹನಗಳನ್ನು ಸ್ವಯಂ ಪ್ರೇರಿತವಾಗಿ ಗುಜರಿಗೆ ಹಾಕಲು ಅವಕಾಶ ನೀಡಲಾಗಿದ್ದು, ವಾಹನಗಳ ಫಿಟ್ ನೆಸ್ ಪರೀಕ್ಷೆಗೆ ಒಳಪಡಿಸಿ ಪ್ರಮಾಣಪತ್ರ, ಅನುಮತಿ ನೀಡಲಾಗುವುದು.
ಸ್ವಯಂ ಪ್ರೇರಿತವಾಗಿ ವಾಹನಗಳನ್ನು ಗುಜರಿಗೆ ಹಾಕುವವರಿಗೆ ಹೊಸ ವಾಹನ ಖರೀದಿಸುವ ಸಂದರ್ಭದಲ್ಲಿ ಶೇ. 5 ರವರೆಗೆ ವಿನಾಯಿತಿ ನೀಡಲಾಗುತ್ತದೆ. ವಾಹನದ ತೂಕಕ್ಕೆ ಅನುಗುಣವಾಗಿ ಹಣ ಪಾವತಿಸಲಾಗುತ್ತದೆ. ಆದಾಯ ತೆರಿಗೆ ಪಾವತಿಯಲ್ಲಿಯೂ ಕೆಲ ವಿನಾಯಿತಿ ನೀಡಲಾಗುತ್ತದೆ.
ವಾಹನಗಳ ಗುಜರಿ ನೀತಿ ಕಡ್ಡಾಯವಾಗಿಲ್ಲ. ಮಾಲೀಕರು ಇಂತಹ ವಾಹನಗಳನ್ನು ಬಳಸುವುದಾದರೆ ವರ್ಷಕ್ಕೊಮ್ಮೆ ಫಿಟ್ನೆಸ್ ಪರೀಕ್ಷೆ ಮಾಡಿಸಿ ಎಫ್.ಸಿ. ಪಡೆಯಬೇಕು. ಹೆಚ್ಚುವರಿಯಾಗಿ ಹಸಿರು ತೆರಿಗೆ ಪಾವತಿಸಬೇಕಿದೆ.
ದ್ವಿಚಕ್ರ ವಾಹನಕ್ಕೆ ಎಫ್.ಸಿ. ಶುಲ್ಕದೊಂದಿಗೆ ಪ್ರತಿವರ್ಷ 500 ರೂಪಾಯಿ ಹಸಿರು ತೆರಿಗೆ ಪಾವತಿಸಬೇಕಿದ್ದು, ಲಘು ವಾಹನಗಳಿಗೆ 1000 ರೂ., ಸರಕುಸಾಗಣೆ ಸೇರಿ ಭಾರಿ ವಾಹನಗಳಿಗೆ 2500 ರೂ. ಪಾವತಿಸಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ