ಲೋಕ ಉಪಚುನಾವಣೆ : ಅಚ್ಚರಿಯ ಹೇಳಿಕೆ ನೀಡಿದ ರಾಹುಲ್‌ ಗಾಂಧಿ

ಯನಾಡು

  ಲೋಕಸಭಾ ಉಪಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಪ್ರಿಯಾಂಕಾ ಗಾಂಧಿ ಮೋದಿ ದೊಡ್ಡ ಉದ್ಯಮಿಗಳ ಹಿತಾಸಕ್ತಿ ಕಾಯುತ್ತಿದ್ದಾರೆ ಎಂದು ಆರೋಪಿಸಿದರು.ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಧಾನಿ ನರಂದ್ರ ಮೋದಿಯವರ ಕುರಿತಾಗಿ ಭಾನುವಾರ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

   ವಯನಾಡು ಲೋಕಸಭೆಯ ಉಪಚುನಾವಣೆ ಹಿನ್ನೆಲೆ ಭಾನುವಾರ ರಾಹುಲ್‌ ಮತ್ತು ಪ್ರಿಯಾಂಕಾ ಜಂಟಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಮೊದಲಿಗೆ ಮಾತನಾಡಿದ ಪ್ರಿಯಾಂಕಾ, ‘ಜನಸಾಮಾನ್ಯ ಬದಲಾಗಿ ದೊಡ್ಡ ಉದ್ಯಮಿಗಳ ಹಿತಾಸಕ್ತಿ ಕಾಯುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

   ಬಳಿಕ ಮಾತು ಆರಂಭಿಸಿದ ರಾಹುಲ್‌, ‘ಇಂದು ನನ್ನ ಮುಂದೆ 2 ಆಯ್ಕೆ ಇದೆ. ಒಂದು ರಾಜಕೀಯ ಭಾಷಣ ಮಾಡಬೇಕು, ಇನ್ನೊಂದು ನನ್ನ ಕುಟುಂಬದ ಬಗ್ಗೆ ಮಾತನಾಡಬೇಕು. ನಾನು 2ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಈಗಾಗಲೇ ಪ್ರಿಯಾಂಕಾ ಅವರು ಮೋದಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

  ನಾವೆಲ್ಲಾ ಅವರ ಬಗ್ಗೆ ಈಗ ಬೋರ್‌ ಆಗಿದ್ದೇವೆ. ಹೀಗಿರುವಾಗ ಅವರ ಬಗ್ಗೆ ಮತ್ತೊಮ್ಮೆ ಪ್ರಸ್ತಾಪ ಮಾಡುವುದು ಏಕೆ?’ ಎಂದು ಹೇಳಿ ಪ್ರಿಯಾಂಕಾ ರಾಜಕೀಯದ ಬಗ್ಗೆ ಮಾತನಾಡಿದರು. ರಾಹುಲ್ ಗಾಂಧಿಯವರ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡಿದ್ದಾರೆ. ಇದು ಅವರ ಮೊದಲ ಚುನಾವಣೆಯಾಗಿದೆ.

  ವಯನಾಡು ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಪ್ರಿಯಾಂಕಾ ಗಾಂಧಿಗಿಂತ ತನಗೆ ಅನುಭವ ಜಾಸ್ತಿ. ಪ್ರಿಯಾಂಕಾ ಗಾಂಧಿ ನೆಹರು ಕುಟುಂಬ ಹಿನ್ನೆಲೆಯಿಂದ ರಾಷ್ಟ್ರೀಯ ವ್ಯಕ್ತಿ. ಆದರೆ ಇದು ಅವರ ಮೊದಲ ಚುನಾವಣೆ. ಆದರೆ ನಾನು 2 ಬಾರಿ ಕಲ್ಲಿಕೋಟೆ ಕಾರ್ಪೋರೆಷನ್‌ನಲ್ಲಿ ಕೌನ್ಸಿಲರ್‌ ಆಗಿ ಕೆಲಸ ಮಾಡಿದ್ದೇನೆ. 2021ರ ವಿಧಾನಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್‌ ಹೇಳಿದ್ದಾರೆ.

   ಹಲವಾರು ವರ್ಷಗಳಿಂದ ಜನರನ್ನು ಪ್ರತಿನಿಧಿಸಿದ್ದೇನೆ. ಹೀಗಾಗಿ ಪ್ರಿಯಾಂಕಾ ವಿರುದ್ಧ ಸ್ಪರ್ಧೆ ಮಾಡುತ್ತಿರುವುದು ನನಗೆ ಹೆಚ್ಚು ವ್ಯತ್ಯಾಸ ಕಾಣುತ್ತಿಲ್ಲ. ಅವರಿಗಿಂತ ನನಗೆ ಹೆಚ್ಚು ಅನುಭವವಿದೆ ಎಂದು ನಾನು ನಂಬುತ್ತೇನೆ ಎಂದು ನವ್ಯಾ ಹರಿದಾಸ್‌ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap