ಬೆಂಗಳೂರು:
ಶೋಕಿಗಾಗಿ ಸ್ಕೂಟರ್ಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಕೊತ್ತನೂರು ಪೆÇಲೀಸರು ಬಂಧಿಸಿ 17 ದ್ವಿಚಕ್ರವಾಹನಗಳನ್ನು ಯಶಸ್ವಿಯಾಗಿದ್ದಾರೆ.
ಲಿಂಗರಾಜಪುರದ ಜಾನ್ (20) ಹಾಗೂ ಸಂಜಯ್ (19)ಬಂಧಿತ ಆರೋಪಿಗಳಾಗಿದ್ದಾರೆ ಹಳೆಕಳ್ಳರಾದ ಇವರಿಬ್ಬರಿಂದ 6 ಲಕ್ಷ ರೂ. ಮೌಲ್ಯದ 17 ವಿವಿಧ ಕಂಪನಿಯ ಸ್ಕೂಟರ್ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ
ಆರೋಪಿಗಳು ಶೋಕಿಗಾಗಿ ಮನೆಮುಂದೆ ಇಲ್ಲವೆ, ರಸ್ತೆಬದಿ ನಿಲ್ಲಿಸಿದ್ದ ಸ್ಕೂಟರ್ಗಳನ್ನು ಕಳವು ಮಾಡಿ ಪೆಟ್ರೋಲ್ ಮುಗಿಯುವವರೆಗೆ ಅವುಗಳನ್ನು ಚಲಾಯಿಸಿ, ರಸ್ತೆಪಕ್ಕದಲ್ಲೇ ಇಲ್ಲವೆ, ಮೇಲ್ಸೇತುವೆ ರಸ್ತೆಗಳ ಕೆಳಭಾಗದಲ್ಲಿ ಬಿಟ್ಟು ಪರಾರಿಯಾಗುತ್ತಿದ್ದರು.
ಕೊತ್ತನೂರಿನಲ್ಲಿ ನಡೆದಿದ್ದ ಸ್ಕೂಟರ್ ಕಳವು ಪ್ರಕರಣವೊಂದನ್ನು ಬೆನ್ನುಹತ್ತಿದ ಇನ್ಸ್ಪೆಕ್ಟರ್ ಸುಬ್ರಮಣ್ಯಸ್ವಾಮಿ, ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಖಚಿತ ಮಾಹಿತಿ ಆಧರಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ..
ಆರೋಪಿಗಳು ಹಿಂದೆ ಜೆ.ಸಿ. ನಗರ, ಬಾಣಸವಾಡಿ, ಹೈಗ್ರೌಂಡ್ಸ್ ಪೆÇಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲುಶಿಕ್ಷೆ ಅನುಭವಿಸಿ ಹೊರಬಂದ ನಂತರವೂ ಸ್ಕೂಟರ್ ಕಳವು ಕೃತ್ಯದಲ್ಲಿ ತೊಡಗಿದ್ದರು. ಆರೋಪಿಗಳ ಬಂಧನದಿಂದ ಕೊತ್ತನೂರು, ಕೆ.ಆರ್. ಪುರಂ, ಕೆ.ಜಿ. ಹಳ್ಳಿ, ಕೊಡಿಗೆಹಳ್ಳಿ, ಬಾಣವಾಡಿ ಪೆÇಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಆರು ಕಳವು ಪ್ರಕರಣಗಳು ಪತ್ತೆಯಾಗಿ ಉಳಿದ ವಾಹನಗಳ ಮಾಲೀಕರ ವಿಳಾಸ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದ ಆರೋಪಿಗಳು ಸ್ಕೂಟರ್ ಕಳವು ಮಾಡುವುದಲ್ಲಿ ಚಾಣಾಕ್ಷತೆ ಹೊಂದಿದ್ದರು, ಕ್ಷಣಾರ್ಧದಲ್ಲಿ ಹ್ಯಾಂಡಲ್ ಲಾಕ್ ಮುರಿದು, ನಕಲಿ ಕೀ ಬಳಸಿ ಸ್ಕೂಟರ್ಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








