ಶುಭಮನ್‌ ಗಿಲ್‌ ತಪ್ಪಿನಿಂದ ಬಿಸಿಸಿಐಗೆ 250 ಕೋಟಿ ನಷ್ಟ ಸಾಧ್ಯತೆ…..!

ನವದೆಹಲಿ:

     ಟೀಮ್‌ ಇಂಡಿಯಾದ ಟೆಸ್ಟ್‌ ನಾಯಕ ಶುಭಮನ್‌ ಗಿಲ್‌ ಮಾಡಿದ ಒಂದು ಎಡವಟ್ಟಿನಿಂದ ಬಿಸಿಸಿಐಗೆ ಕಾನುನು ಸಂಕಷ್ಟ ಮತ್ತು ಸುಮಾರು 250 ಕೋಟಿ ರೂ. ನಷ್ಟ ತರುವ ಭೀತಿ ಎದುರಾಗಿದೆ. ಅಷ್ಟಕ್ಕೂ ಗಿಲ್ ಮಾಡಿದ್ದೇನು? ಎಂಬ ಮಾಹಿತಿ ಇಲ್ಲಿದೆ.

    ದ್ವಿತೀಯ ಟೆಸ್ಟ್‌ನಲ್ಲಿ ಭಾರತ ತಂಡ 600 ರ ಗಡಿ ದಾಟಿದ ವೇಳೆ ನಾಯಕ ಶುಭಮನ್‌ ಗಿಲ್‌ ಡ್ರೆಸಿಂಗ್‌ ರೂಮ್‌ನಿಣದ ಹೊರಬಂದು ಡಿಕ್ಲೇರ್‌ ಘೋಷಿಸಿದರು. ಈ ವೇಳೆ ಗಿಲ್‌ ನೈಕಿ ಕಂಪನಿಯ ಕಪ್ಪು ಬಣ್ಣದ ಮೇಲಂಗಿ ಧರಿಸಿದ್ದರು. ಬಿಸಿಸಿಐ ಪ್ರಸಕ್ತ ಅಡಿಡಾಸ್‌ ಕಂಪೆನಿಯೊಂದಿಗೆ ಕಿಟ್‌ ಪ್ರಯೋಜಕತ್ವ ಹೊಂದಿದೆ. ಈ ಒಪ್ಪಂದ 2028ರ ಮಾರ್ಚ್‌ ತನಕ ಇದೆ.

    ಈ ಒಪ್ಪಂದದ ಪ್ರಕಾರ ಅಡಿಡಾಸ್‌ ಬಿಸಿಸಿಐಗೆ 250 ಕೋಟಿ ರೂ. ನೀಡುತ್ತದೆ. ಪ್ರತಿ ಪಂದ್ಯಕ್ಕೆ 75 ಲಕ್ಷ ರೂ. ಪಾವತಿಸುತ್ತದೆ. ಇದೀಗ ಗಿಲ್‌ ಅವರು ನೈಕಿ ಜೆರ್ಸಿ ಧರಿಸಿ ಪಂದ್ಯದ ವೇಳೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಈ ಒಪ್ಪಂದದ ಉಲ್ಲಂಘನೆಯಾಗಿದೆ ಎನ್ನಲಾಗಿದೆ. ಈ ಉಲ್ಲಂಘನೆಗಾಗಿ ಬಿಸಿಸಿಐ ವಿರುದ್ಧ ಅಡಿಡಾಸ್‌ ಕಾನೂನು ಹೋರಾಟ ನಡೆಸುವುದೇ ಅಥವಾ ಕೇವಲ ಎಚ್ಚರಿಕೆ ನೀಡಿ ಪ್ರಾಯೋಜಕತ್ವ ಮುಂದುವರಿಸುವುದೇ ಎಂದು ಕಾದು ನೋಡಬೇಕಿದೆ.

  ಶುಭಮನ್‌ ಗಿಲ್‌ ಅವರು ಬರ್ಮಿಂಗ್‌ಹ್ಯಾಮ್‌ನಲ್ಲಿ ಟೆಸ್ಟ್‌ ಪಂದ್ಯ ಗೆದ್ದ ಮೊದಲ ಭಾರತೀಯ ನಾಯಕ ಎಂಬ ದಾಖಲೆ ಜತೆಗೆ ದಿಗ್ಗಜ ಸುನೀಲ್‌ ಗವಾಸ್ಕರ್‌ ಅವರ ನಾಯಕತ್ವದ ದಾಖಲೆಯೊಂದನ್ನು ಕೂಡ ಮುರಿದಿದ್ದಾರೆ. 25 ವರ್ಷ ಮತ್ತು 301 ದಿನಗಳ ವಯಸ್ಸಿನ ಶುಭಮನ್ ಗಿಲ್ ವಿದೇಶದಲ್ಲಿ ಟೆಸ್ಟ್ ಗೆದ್ದ ಅತ್ಯಂತ ಕಿರಿಯ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಗವಾಸ್ಕರ್‌ ಹೆಸರಿನಲ್ಲಿತ್ತು. 1976 ರಲ್ಲಿ ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸುನಿಲ್ ಗವಾಸ್ಕರ್ (26 ವರ್ಷ 202 ದಿನ) ಗೆಲುವು ಸಾಧಿಸಿದ್ದರು.

Recent Articles

spot_img

Related Stories

Share via
Copy link